ಗುಂಡೇಟಿಗೆ ಕಾಡೆಮ್ಮೆ ಬಲಿ..!

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 28. ಕಾಡೆಮ್ಮೆಯೊಂದು ಗುಂಡೇಟಿಗೆ ಬಲಿಯಾದ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೈಸೂರು-ಗೋಣಿಕೊಪ್ಪ ಹೆದ್ದಾರಿ ಬಳಿ ನಡೆದಿದೆ.

ನಾಗರಹೊಳೆ ಆನೆಚೌಕೂರು ವನ್ಯಜೀವಿ ವಲಯ ವ್ಯಾಪ್ತಿಯ ದೇವಮಚ್ಚಿ ಶಾಖೆಯ ಸಿಂಗನೂರು ಗಸ್ತಿನಲ್ಲಿ ಸುಮಾರು ಎಂಟು ವರ್ಷ ಪ್ರಾಯದ ಗಂಡು ಕಾಡೆಮ್ಮೆಯ ಮೃತದೇಹವೊಂದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹುಣಸೂರು ಉಪ ವಿಭಾಗದ ಎಸಿಎಫ್ ದಯಾನಂದ್, ವಲಯ ಅರಣ್ಯಾಧಿಕಾರಿ ದಿಲೀಪ್, ಡಿ.ಆರ್.ಎಫ್.ಓ. ವಿನೋದ್ ಕುಮಾರ್ ಹಾಗೂ ಎಸ್.ಟಿ.ಪಿ.ಎಫ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಹಾಗೂ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಮಾಡುವಂತೆ ಎಸಿಎಫ್ ದಯಾನಂದ್ ತಿಳಿಸಿದ್ದಾರೆ ಎನ್ನಲಾಗಿದೆ.

 

Scroll to Top