ಐಸಿಯುನಲ್ಲಿ ಮಗಳ ಮದುವೆ ನೋಡುತ್ತಾ ಪ್ರಾಣಬಿಟ್ಟ ತಾಯಿ..!                                   



(ನ್ಯೂಸ್ ಕಡಬ) newskadaba.com ಬಿಹಾರ, ಡಿ. 27. ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ತಾಯಿಯೊಬ್ಬರ ಕೊನೆಯ ಆಸೆಯಂತೆ ಮಗಳು ವಿವಾಹವಾಗಿರುವ ಅಪರೂಪದ ಘಟನೆ ಸಂಭವಿಸಿದ್ದು, ಪೂನಂ ಕುಮಾರಿ ವರ್ಮಾ ಎಂಬ ಮಹಿಳೆ ತನ್ನ ಮಗಳ ಮದುವೆ ಐಸಿಯು ವಾರ್ಡ್ ನಲ್ಲಿ ನಡೆದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.







ಪೂನಂ ಅವರು ತಮ್ಮ ಮಗಳು ಚಾಂದಿನಿ ಕುಮಾರಿಗೆ ಇಂಜಿನಿಯರ್ ಆಗಿರುವ ಸುಮಿತ್ ಗೌರವ್ ಅವರೊಂದಿಗೆ ವಿವಾಹ ನಿಶ್ಚಯ ಮಾಡಿದ್ದು, ಆರೋಗ್ಯ ಹದಗೆಟ್ಟಾಗ, ನಿಶ್ಚಿತಾರ್ಥದ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಇಬ್ಬರನ್ನೂ ಮದುವೆಯಾಗುವಂತೆ ಒತ್ತಾಯಿಸಿದ್ದರು. ತಾಯಿಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಮಗಳು ತಾಯಿಯ ಆಸೆ ಈಡೇರಿಸಲು ಮುಂದಾಗಿದ್ದಾರೆ. ಐಸಿಯುನಲ್ಲಿ ಮದುವೆ ಮಾಡಲು ಆಸ್ಪತ್ರೆಯ ಅನುಮತಿ ಕೋರಿ, ಆಸ್ಪತ್ರೆಯ ಸಮ್ಮತಿ ಬಳಿಕ ತಾಯಿ ಎದುರಿನಲ್ಲೇ ಐಸಿಯುನಲ್ಲಿ ಇಬ್ಬರು ತಾಳಿ ಕಟ್ಟಿಕೊಂಡು ವಿವಾಹವಾಗಿದ್ದಾರೆ. ಮದುವೆಯಾದ ಕೇವಲ ಎರಡೇ ಗಂಟೆಯಲ್ಲಿ ಯುವತಿಯ ತಾಯಿ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.






 

 

error: Content is protected !!
Scroll to Top