ಫೇಸ್‌ಬುಕ್‌ ಪರಿಚಯ ಕೊಲೆಯಲ್ಲಿ ಅಂತ್ಯ ➤ ಪ್ರಿಯತಮೆಯನ್ನು ಗುಂಡಿಟ್ಟು ಕೊಂದು ಪ್ರಿಯಕರ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ಕಣ್ಣೂರು, ಆ.01. ಬ್ರೇಕಪ್ ಆಗೋಣ ಎಂದು ಹೇಳಿದ್ದಕ್ಕೆ ತನ್ನ ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಿಂದ ವರದಿಯಾಗಿದೆ.







ಕೇರಳದ ಕಣ್ಣೂರು ನಿವಾಸಿ ಮಾನಸ(24) ಎಂಬಾಕೆಗೆ ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ತನ್ನದೇ ಜಿಲ್ಲೆಯ ರಾಖಿಲ್(32) ಎಂಬಾತನ ಪರಿಚಯವಾಗಿತ್ತು. ಯುವತಿಯು ಕೋತಮಂಗಲಂ ಸಮೀಪದ ನೆಲ್ಲಿಕುಝಿ ಎಂಬಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಈ ನಡುವೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಲವ್ ಬ್ರೇಕಪ್ ಮಾಡಿಕೊಳ್ಳಲು ಮಾನಸ ಮುಂದಾಗಿದ್ದು, ಇದು ರಾಖಿಲ್‌ನನ್ನು ಕೆರಳಿಸಿದೆ. ಆಕೆಯನ್ನು ಕೊಲೆಗೈಯಲು ಮುಂದಾದ ರಾಖಿಲ್ ಆಕೆಯ ರೂಂಗೆ ಪ್ರವೇಶಗೈದು ಗುಂಡು ಹಾರಿಸಿ ಕೊಲೆಗೈದಿದ್ದಲ್ಲದೇ, ತಾನು ಕೂಡಾ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.






 

 

 

error: Content is protected !!
Scroll to Top