ಅಗ್ನಿ ಅವಘಡಕ್ಕೆ ತುತ್ತಾದ 40 ಜನರಿದ್ದ ಬಸ್ ; ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com,ಬೆಂಗಳೂರು,ಮೇ.09. ತಮಿಳುನಾಡು ಗಡಿ ಭಾಗದ ಶೂಲಗಿರಿ ಸಮೀಪ ಬೆಂಗಳೂರಿನಿಂದ ತೆರಳಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಘಟನೆ ನಡೆದಿದೆ. ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದು ಅದೃಷ್ಟವಷಾತ್‌ ಎಲ್ಲರೂ ಪಾರಾಗಿದ್ದಾರೆ.ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಪಕ್ಕದಲ್ಲಿ ಚಲಿಸುತ್ತಿದ್ದ ವಾಹನಗಳ ಚಾಲಕರು ತಿಳಿಸಿದ್ದು ಕೂಡಲೇ ಬಸ್‌ ನಿಲ್ಲಿಸಲಾಗಿದೆ.

ಸಮಯಪ್ರಜ್ಞೆಯಿಂದಲಾಗಿ ಎಲ್ಲರೂ ನಿಮಿಷಗಳ ಒಳಗೆ ಬಸ್‌ನಿಂದ ಕೆಳಗಿಳಿದಿದ್ದಾರೆ. ಯಾರೊಬ್ಬರಿಗೂ ಗಾಯಗಳಾಗಿಲ್ಲ.ಬೆಳಗಿನ ಜಾವ ಘಟನೆ ಸಂಭವಿಸಿದ್ದು,ಬಸ್‌ ಸಂಪೂರ್ಣವಾಗಿ ಭಸ್ಮವಾಗಿದ್ದು, ಪ್ರಯಾಣಿಕರ ಲಗೇಜ್‌ಗಳೂ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಶೂಲಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬೆಂಗಳೂರಿನಿಂದ ತಿಪ್ಪಟ್ಟುವಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಜೀವ ಉಳಿಸಿತು.

 

Scroll to Top