ನೆಪಗಳ ಒಡ್ಡಿ ಇಂದಿರಾ ಕ್ಯಾಂಟಿನ್‌ಗೆ ಬೀಗ: ಸಾರ್ವಜನಿಕರ ಆಕ್ರೋಶ

(ನ್ಯೂಸ್‌ ಕಡಬ) newskadaba.com,  ಜು.13 : ತುರುವೇಕೆರೆ ಪಟ್ಟಣದ ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟಿನ್ ಅನ್ನು ವಿವಿಧ ಆಂತರಿಕ ಕಾರಣಗಳ ನೆಪವೊಡ್ಡಿ ಬಂದ್‌ ಮಾಡಲಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಪಟ್ಟಣ ಹಾಗೂ ಗ್ರಾಮೀಣ ಭಾಗಗಳಿಂದ ಬರುವ ಬಡ ಕೂಲಿ ಕಾರ್ಮಿಕರು, ವಯೋವೃದ್ಧರು, ಬೀದಿ ವ್ಯಾಪಾರಿಗಳು ಮತ್ತು ನಿರ್ಗತಿಕರು ಬೆಳಗಿನ ಉಪಹಾರ ಹಾಗೂ ಊಟ ಸಿಗದೆ ಹಸಿದು ಕಂಗಾಲಾಗಿದ್ದಾರೆ.ಕ್ಯಾಂಟೀನ್‌ನ ಮುಖ್ಯ ಗೇಟ್‌ಗೆ ಬೀಗ ಹಾಕಲಾಗಿದ್ದು, ಮುಂಭಾಗದಲ್ಲಿ ಯಾವುದೇ ಮಾಹಿತಿ ಫಲಕವನ್ನು ಅಳವಡಿಸಿಲ್ಲ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದರೆ ಅಸ್ಪಷ್ಟ ನೆಪಗಳನ್ನು ಹೇಳುತ್ತಿದ್ದಾರೆ.

ಆಂತರಿಕ ಸಮಸ್ಯೆಗಳಿಂದಾಗಿ ಈ ಕ್ಯಾಂಟೀನ್ ಪದೇ ಪದೇ ಬಂದ್ ಆಗುತ್ತಿದ್ದು, ನಿರಂತರ ಸೇವೆ ಸಿಗದೆ ಸಾರ್ವಜನಿಕರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to Top