(ನ್ಯೂಸ್ ಕಡಬ) newskadaba.com, ಜು.13 : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದ್ದು, ಕಾರ್ಡ್ದಾರರು ಬಿಲ್ ಪಾವತಿಸುವ ಮುನ್ನವೇ ಮೃತಪಟ್ಟರೆ ಬಾಕಿ ಸಾಲದ ವಸೂಲಾತಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಬ್ಯಾಂಕಿಂಗ್ ನಿಯಮಗಳು ಈ ಕೆಳಗಿನಂತಿವೆ:
ಕ್ರೆಡಿಟ್ ಕಾರ್ಡ್ ಸಾಲವನ್ನು ಭದ್ರತೆಯಿಲ್ಲದ ವೈಯಕ್ತಿಕ ಸಾಲ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಮೃತರ ಪತ್ನಿ, ಪತಿ, ಮಕ್ಕಳು ಅಥವಾ ಪೋಷಕರು ತಮ್ಮ ಸ್ವಂತ ಹಣದಿಂದ ಈ ಸಾಲ ತೀರಿಸಬೇಕಾದ ಯಾವುದೇ ಕಾನೂನುಬದ್ಧ ಜವಾಬ್ದಾರಿ ಇರುವುದಿಲ್ಲ. ಬ್ಯಾಂಕುಗಳು ಇವರ ಮೇಲೆ ಒತ್ತಡ ಹೇರುವಂತಿಲ್ಲ.
ಸಾಲ ಸಂಪೂರ್ಣ ಮನ್ನಾ ಆಗುವುದಿಲ್ಲ. ಮೃತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆ, ಸ್ಥಿರ ಠೇವಣಿ (FD), ಷೇರುಗಳು, ಚಿನ್ನ ಅಥವಾ ಸ್ಥಿರ ಆಸ್ತಿಗಳಿಂದ ಉತ್ತರಾಧಿಕಾರಿಗಳಿಗೆ ಆಸ್ತಿ ವರ್ಗಾವಣೆಯಾಗುವ ಮುನ್ನ ಬ್ಯಾಂಕ್ ಸಾಲವನ್ನು ವಸೂಲಿ ಮಾಡಿಕೊಳ್ಳಬಹುದು.ಒಂದು ವೇಳೆ ಮೃತರ ಹೆಸರಿನಲ್ಲಿ ಯಾವುದೇ ಆಸ್ತಿ ಅಥವಾ ಠೇವಣಿ ಇಲ್ಲದಿದ್ದರೆ, ಬ್ಯಾಂಕ್ ಆ ಮೊತ್ತವನ್ನು ಕುಟುಂಬದಿಂದ ವಸೂಲಿ ಮಾಡಲು ಸಾಧ್ಯವಿಲ್ಲ. ಅದನ್ನು ವಸೂಲಾಗದ ಸಾಲ ಎಂದು ಪರಿಗಣಿಸಲಾಗುತ್ತದೆ.
ಆ್ಯಡ್-ಆನ್ ಕಾರ್ಡ್ ಬಳಕೆದಾರರು ವೈಯಕ್ತಿಕವಾಗಿ ಸಾಲ ಪಾವತಿಸಬೇಕಾಗಿಲ್ಲ. ಮುಖ್ಯ ಕಾರ್ಡ್ ರದ್ದಾದ ತಕ್ಷಣ ಇವು ಸ್ವಯಂಚಾಲಿತವಾಗಿ ಅಮಾನ್ಯಗೊಳ್ಳುತ್ತವೆ…..ಕಾರ್ಡ್ದಾರರು ಅಪಘಾತ ಅಥವಾ ಅನಾರೋಗ್ಯದಿಂದ ಮೃತಪಟ್ಟರೆ, ಕುಟುಂಬದವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿಮಾ ಕಂಪನಿಯ ಮೂಲಕವೇ ಬಾಕಿ ಮೊತ್ತವನ್ನು ಬ್ಯಾಂಕ್ಗೆ ಪಾವತಿಸಬಹುದು.









