ಗಗನಯಾನದತ್ತ ಇಸ್ರೋ ದಿಟ್ಟ ಹೆಜ್ಜೆ: ಮೂರು ಅತ್ಯಂತ ಸಂಕೀರ್ಣ ಪರೀಕ್ಷೆಗಳು ಯಶಸ್ವಿ



(ನ್ಯೂಸ್‌ ಕಡಬ) newskadaba.com,  ಜು.13 : ಭಾರತದ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗೆ ಸಂಬಂಧಿಸಿದಂತೆ ಇಸ್ರೋ ಭಾನುವಾರ ಮೂರು ಅತ್ಯಂತ ಸಂಕೀರ್ಣ ಮತ್ತು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಬಾಹ್ಯಾಕಾಶದಿಂದ ಮರಳಿದ ನಂತರ ಕ್ರೂ ಮಾಡ್ಯೂಲ್ ಸಮುದ್ರದ ನೀರಿನ ಮೇಲೆ ಸುರಕ್ಷಿತವಾಗಿ ತೇಲಲು ನೆರವಾಗುವ ‘ಗ್ಯಾಸ್ ಆಧಾರಿತ ಹೊಸ ವ್ಯವಸ್ಥೆ’ಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.







ಪ್ಯಾರಾಚೂಟ್‌ಗಳನ್ನು ರಕ್ಷಿಸುವ ಕವರ್‌ನ ಎರಡು ಭಾಗಗಳು (CSU-1 ಮತ್ತು CSU-2) ನಿಗದಿತ ಸಮಯದಲ್ಲಿ ಸರಿಯಾಗಿ ಬೇರ್ಪಡುವುದನ್ನು ದೃಢೀಕರಿಸಲಾಯಿತು.ಕ್ರೂ ಮಾಡ್ಯೂಲ್ ಮತ್ತು ಪ್ರೊಪಲ್ಷನ್ ಭಾಗವನ್ನು ಜೋಡಿಸುವ ಕೇಬಲ್‌ಗಳು ಹಾಗೂ ಕವರ್ ಬೇರ್ಪಡುವ ಪ್ರಕ್ರಿಯೆಯಿಂದ ಕ್ಯಾಪ್ಸೂಲ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದು 3ನೇ ಪರೀಕ್ಷೆಯಲ್ಲಿ ಸಾಬೀತಾಗಿದೆ.






ಇಸ್ರೋದ ಈ ಮಹತ್ವದ ಯೋಜನೆಯು ಮೂವರು ಭಾರತೀಯ ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ ಕಳುಹಿಸಿ, 3 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಪ್ರಯೋಗಗಳನ್ನು ನಡೆಸಿದ ನಂತರ ಸುರಕ್ಷಿತವಾಗಿ ಭೂಮಿಗೆ ಕರೆತರುವ ಗುರಿ ಹೊಂದಿದೆ. ಈ ಐತಿಹಾಸಿಕ ಕಾರ್ಯಾಚರಣೆಯನ್ನು 2027ರ ವೇಳೆಗೆ ಉಡಾವಣೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.

error: Content is protected !!
Scroll to Top