ವೀಸಾ ಇದ್ದರೂ ಹೈದರಾಬಾದ್ ವಿದ್ಯಾರ್ಥಿ ಭಾರತಕ್ಕೆ ವಾಪಸ್: ಆಂಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಬಿಗ್ ಶಾಕ್!



(ನ್ಯೂಸ್‌ ಕಡಬ) newskadaba.com,  ಜೂ.25;  ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ಮಾನ್ಯ F-1 ವೀಸಾ ಹೊಂದಿದ್ದರೂ, ನೆದರ್‌ಲ್ಯಾಂಡ್ಸ್‌ನ ಆಂಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಯುಎಸ್ ಕಸ್ಟಮ್ಸ್ಅಧಿಕಾರಿಗಳು ಆತನನ್ನು ತಡೆದು ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ.ತಿಂಗಳುಗಳ ಹಿಂದೆಯೇ ಆತನ ವೀಸಾವನ್ನು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ಇಲ್ಲದೆ ರದ್ದುಗೊಳಿಸಲಾಗಿತ್ತು ಎಂಬ ವಿಷಯ ವಿಮಾನ ನಿಲ್ದಾಣದಲ್ಲಿ ತಿಳಿದುಬಂದಿದೆ.







ತಾನು ಯಾವುದೇ ಕಾನೂನು ಬಾಹಿರ ಚಟುವಟಿಕೆ ಅಥವಾ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿಲ್ಲ ಎಂದು ವಿದ್ಯಾರ್ಥಿ ಆಘಾತ ವ್ಯಕ್ತಪಡಿಸಿದ್ದಾನೆ.ಘಟನೆಯ ನಂತರ ವಿದ್ಯಾರ್ಥಿ ಪರಿಶೀಲಿಸಿದಾಗ ಅಚ್ಚರಿಯ ವಿಷಯ ಹೊರಬಿದ್ದಿದೆ:ಅಮೆರಿಕದ ವಿಶ್ವವಿದ್ಯಾಲಯ ನೀಡುವ I-20 ಫಾರ್ಮ್ ಇಂದಿಗೂ ಸಕ್ರಿಯವಾಗಿದೆ.ಅಮೆರಿಕ ಸರ್ಕಾರದ ಅಧಿಕೃತ ಡೇಟಾಬೇಸ್ ಆದ SEVIS ನಲ್ಲೂ ವಿದ್ಯಾರ್ಥಿಯ ವಿವರಗಳು ಸಕ್ರಿಯವಾಗಿದ್ದು, ಯಾವುದೇ ತೊಂದರೆ ಇಲ್ಲ.






ವೀಸಾ ಎಂಬುದು ಕೇವಲ ‘ಪ್ರಯಾಣ ದಾಖಲೆ’. ಆದರೆ ವಿದ್ಯಾರ್ಥಿಯ ಕಾನೂನುಬದ್ಧ ಸ್ಥಾನಮಾನವು I-20 ಮತ್ತು SEVIS ಮೇಲಿರುತ್ತದೆ. I-20 ಸರಿಯಾಗಿದ್ದರೂ, ಭದ್ರತಾ ಕಾರಣಗಳಿಂದ ವೀಸಾವನ್ನು ಪ್ರತ್ಯೇಕವಾಗಿ ರದ್ದುಪಡಿಸುವ ಅಧಿಕಾರ ವಲಸೆ ಅಧಿಕಾರಿಗಳಿಗೆ ಇರುತ್ತದೆ..ಯಾವುದೇ ಮುನ್ಸೂಚನೆ ಇಲ್ಲದ ಇಂತಹ ವೀಸಾ ರದ್ದತಿ ಘಟನೆಯು ಸದ್ಯ ಅಮೆರಿಕಕ್ಕೆ ಹೊರಡಲು ಸಿದ್ಧರಾಗಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

 

error: Content is protected !!
Scroll to Top