(ನ್ಯೂಸ್ ಕಡಬ) newskadaba.com, ಜೂ.25: ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಕಳೆದ 8 ತಿಂಗಳಲ್ಲೇ ಅತಿ ಕನಿಷ್ಠ ಮಟ್ಟವನ್ನು ತಲುಪಿದೆ. 24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): 1 ಗ್ರಾಂಗೆ ₹278 ಇಳಿಕೆಯಾಗಿ ₹14,013 ತಲುಪಿದೆ. (10 ಗ್ರಾಂ ಬೆಲೆ: ₹1,40,130).
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 1 ಗ್ರಾಂಗೆ ₹255 ಇಳಿಕೆಯಾಗಿ ₹12,845 ದಾಖಲಾಗಿದೆ. (10 ಗ್ರಾಂ ಬೆಲೆ: ₹1,28,450).
ಬೆಳ್ಳಿ: ಇಂದು ಒಂದೇ ದಿನ ಬರೋಬ್ಬರಿ ₹10,000 ಕುಸಿತ ಕಂಡುಬಂದಿದ್ದು, ಪ್ರಸ್ತುತ ಪ್ರತಿ ಕೆಜಿಗೆ ₹2,35,000 ಆಗಿದೆ (ಪ್ರತಿ ಗ್ರಾಂಗೆ ₹235).









