ನೇಪಾಳ ರಾಜಕೀಯದಲ್ಲಿ ಸಂಚಲನ: ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಆರೆಸ್ಟ್



(ನ್ಯೂಸ್‌ ಕಡಬ) newskadaba.com,  ಮಾ.28 ಕಾಠ್ಮಂಡು: ನೇಪಾಳದ ರಾಜಕೀಯ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದೇಶದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಹಿಂಸಾಚಾರ ಹಾಗೂ ಆಡಳಿತ ವೈಫಲ್ಯದ ಗಂಭೀರ ಆರೋಪದಡಿ ಬಂಧಿಸಲಾಗಿದೆ.







ನೂತನ ಪ್ರಧಾನಿಯಾಗಿ ಬಾಲೆನ್ ಶಾ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಇಡೀ ನೆರೆರಾಷ್ಟ್ರದಲ್ಲಿ ತಲ್ಲಣ ಸೃಷ್ಟಿಸಿದೆ.






2025ರ ಸೆಪ್ಟೆಂಬರ್‌ನಲ್ಲಿ ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಯುವ ಸಮುದಾಯ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಸುಮಾರು 77 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಸಾವುಗಳಿಗೆ ಮತ್ತು ಅಂದಿನ ಹಿಂಸಾಚಾರಕ್ಕೆ ಓಲಿ ಅವರ ನೇತೃತ್ವದ ಸರ್ಕಾರದ ವೈಫಲ್ಯವೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಹಾಗೂ ಆರ್ಥಿಕ ಅಸ್ಥಿರತೆಯನ್ನು ತಡೆಯುವಲ್ಲಿ ಓಲಿ ಸರ್ಕಾರ ವಿಫಲವಾಗಿತ್ತು ಎನ್ನಲಾಗಿದೆ.

ಬಾಲೆನ್ ಶಾ ಸರ್ಕಾರದ ಬಿಗಿಯಾದ ಹೆಜ್ಜೆ:

ನೇಪಾಳದ ನೂತನ ಪ್ರಧಾನಿ ಬಾಲೆನ್ ಶಾ ಅಧಿಕಾರಕ್ಕೇರುತ್ತಿದ್ದಂತೆ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿದ್ದರು. ಅದರಂತೆಯೇ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಪ್ರತಿಭಟನೆಯಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಬಂಧನ ಅನಿವಾರ್ಯವಾಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿಯ ಬಂಧನವು ನೇಪಾಳದ ಭವಿಷ್ಯದ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡಿದೆ. ಯುವ ಸಮುದಾಯದ ಆಕ್ರೋಶಕ್ಕೆ ಸ್ಪಂದಿಸಿರುವ ನೂತನ ಸರ್ಕಾರದ ಈ ನಡೆಯು, ದೇಶದಲ್ಲಿ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಬರಲಿರುವುದರ ಸಂಕೇತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ..

error: Content is protected !!
Scroll to Top