ಶಾಲೆಯಿಂದ ಹೊರಗುಳಿದ 300 ವಿದ್ಯಾರ್ಥಿಗಳನ್ನು ಮತ್ತೆ ಕರೆತಂದ ಶಿಕ್ಷಕ



(ನ್ಯೂಸ್‌ ಕಡಬ) newskadaba.com,  ಸೆ.02 ನವದೆಹಲಿ : ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಮ್-32 ಬಿಟ್ ಪ್ರೊಸೆಸರ್ ಚಿಪ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹಸ್ತಾಂತರಿಸಿದರು







ದೆಹಲಿಯಲ್ಲಿ ನಡೆಯುತ್ತಿರುವ ಸೆಮಿಕಾನ್ ಇಂಡಿಯಾ 2025 ರಲ್ಲಿ ಕಾರ್ಯಕ್ರಮದಲ್ಲಿ 4 ಅನುಮೋದಿತ ಯೋಜನೆಗಳ ಪರೀಕ್ಷಾ ಚಿಪ್‌ಗಳೊಂದಿಗೆ ಮೊದಲ ಮೇಡ್ ಇನ್ ಇಂಡಿಯಾ ಪ್ರೊಸೆಸರ್ ಅನ್ನು ಹಸ್ತಾಂತರಿಸಲಾಯಿತು.






ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಅಭಿವೃದ್ಧಿಪಡಿಸಿದ ವಿಕ್ರಮ್ ಚಿಪ್, ರಾಷ್ಟ್ರದ ಮೊದಲ ಸಂಪೂರ್ಣ ಸ್ಥಳೀಯ 32-ಬಿಟ್ ಮೈಕ್ರೊಪ್ರೊಸೆಸರ್ ಆಗಿದೆ. ಈ ಚಿಪ್ ಅನ್ನು ಬಾಹ್ಯಾಕಾಶ ಉಡಾವಣಾ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, “ನಾವು ಭಾರತದ ಸೆಮಿಕಂಡಕ್ಟರ್ ಮಿಷನ್ ಅನ್ನು ಪ್ರಾರಂಭಿಸಿದ್ದೇವೆ. ಮೂರೂವರೆ ವರ್ಷಗಳ ಅಲ್ಪಾವಧಿಯಲ್ಲಿ ಜಗತ್ತು ಭಾರತವನ್ನು ವಿಶ್ವಾಸದಿಂದ ನೋಡುತ್ತಿದೆ. ಇಂದು 5 ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವು ತ್ವರಿತಗತಿಯಲ್ಲಿ ನಡೆಯುತ್ತಿದೆ. ನಾವು ಪ್ರಧಾನಿ ಮೋದಿ ಅವರಿಗೆ ಮೊದಲ ಭಾರತದಲ್ಲಿ ತಯಾರಿಸಿದ (ಮೇಡ್ ಇನ್ ಇಂಡಿಯಾ) ಚಿಪ್ ಅನ್ನು ಹಸ್ತಾಂತರಿಸಿದ್ದೇವೆ” ಎಂದು ತಿಳಿಸಿದರು.

error: Content is protected !!
Scroll to Top