karnataka

ತೆಲುಗು ಟೈಟಾನ್ಸ್‌ ತಂಡವನ್ನು ಬೇಟೆಯಾಡಿದ ಬೆಂಗಳೂರು ಬುಲ್ಸ್

(ನ್ಯೂಸ್ ಕಡಬ) newskadaba.com ಬಿಹಾರ, ಆಗಸ್ಟ್.9.ಬೆಂಗಳೂರು ಬುಲ್ಸ್‌ ತಂಡ 47-26 ಅಂಕಗಳ ಭಾರೀ ಅಂತರದಿಂದ ತೆಲುಗು ಟೈಟಾನ್ಸ್‌ ತಂಡವನ್ನು ಬೇಟೆಯಾಡಿತು.ಇ ಭರ್ಜರಿ ಭೇಟೆಗೆ ಮೂಲ ಕಾರಣಕರ್ತರಾದ ತಾರಾ ರೈಡರ್‌ ಪವನ್‌ ಸೆಹ್ರಾವತ್‌ (17 ಅಂಕ) ಅವರ ಮಿಂಚಿನ ರೈಡಿಂಗ್‌ನೆರವಿನಿಂದಸಾಧ್ಯವಾಯಿತು. ಬೆಂಗಳೂರು ಬುಲ್ಸ್‌ ಈ ಕೂಟದಲ್ಲಿ ದಾಖಲಿಸಿದ 4ನೇ ಗೆಲುವು. ಸತತವಾಗಿ ಮೂರನೇ ಜಯವೂ ಹೌದು. ತೆಲುಗು ಟೈಟಾನ್ಸ್‌ಗೆ ಕೂಟದಲ್ಲಿ ಎದುರಾದ 5ನೇ ಹೀನಾಯ ಸೋಲು. ಹಿಂದಿನ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 20-20 ಅಂಕಗಳ ಅಂತರದಿಂದ ಯುಪಿ ಯೋಧಾ […]

ತೆಲುಗು ಟೈಟಾನ್ಸ್‌ ತಂಡವನ್ನು ಬೇಟೆಯಾಡಿದ ಬೆಂಗಳೂರು ಬುಲ್ಸ್ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂದುವರೆದ ಮಳೆಯ ಅಬ್ಬರ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ, ಮುಂದುವರೆದಿದ್ದು, ಹಲವೆಡೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ನಿರಂತರ ಸುರಿಯುತ್ತಿರೊ ಮಳೆಯಿಂದಾಗಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ಕೆಂಪುಹೊಳೆಯಲ್ಲಿ ನೀರಿನ ಪ್ರವಾಹ ಹೆಚ್ಚಾಗುತ್ತಿದ್ದು, ಉದನೆ ಪೇಟೆಯಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ನದಿ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ.ಶಿಶಿಲದಲ್ಲಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಶಿಶಿಲ ದೇವಾಲಯವು ಅಕ್ಷರಶ ದ್ವೀಪವಾಗಿ ಪರಿಣಮಿಸಿದೆ. ದೇವಳಕ್ಕೆ ಹಾಗೂ ಆ ಭಾಗದ ಜನರಿಗೆ ಇರುವ ಒಂದು ಸಂಪರ್ಕ ರಸ್ತೆಯಲ್ಲೇ

ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂದುವರೆದ ಮಳೆಯ ಅಬ್ಬರ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ Read More »

ಕರಾವಳಿ

ಗಣೇಶೋತ್ಸವ ಕ್ರೀಡಾಕೂಟ ಮತ್ತು ಹತ್ತರ ಹುತ್ತರಿ ಆಮಂತ್ರಣ ಪತ್ರಿಕೆ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಮುಕ್ಕೂರು ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಆ.18 ರಂದು ನಡೆಯಲಿರುವ ಕ್ರೀಡಾಕೂಟ ಮತ್ತು ಆ.31 ರಂದು ರಾತ್ರಿ ನಡೆಯಲಿರುವ ಹತ್ತರ ಹುತ್ತರಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಪೆರುವಾಜೆ ಜಲದುರ್ಗಾದೇವಿ ದೇವಸ್ಥಾನ ಹಾಗೂ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು. ಪ್ರಾರಂಭದಲ್ಲಿ ಉಭಯ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಅರ್ಚಕರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ

ಗಣೇಶೋತ್ಸವ ಕ್ರೀಡಾಕೂಟ ಮತ್ತು ಹತ್ತರ ಹುತ್ತರಿ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕರಾವಳಿ

ಪಿಂಚಣಿದಾರರ ಅಹವಾಲು ➤ ಶೀಘ್ರದಲ್ಲಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಪಿಂಚಣಿದಾರರ ವಿವಿಧ ಅಹವಾಲುಗಳಿಗೆ ಪರಿಹಾರ ಒದಗಿಸಲು ಶೀಘ್ರವೇ ಬ್ಯಾಂಕುಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ಪಿಂಣಿಣಿ ಅದಾಲತ್ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಇವರು ಸಾರ್ವಜನಿಕರ ಹಿತಾಸಕ್ತಿಗಾಗಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಕುಂದು ಕೊರತೆ, ವಿಚಾರ ವಿನಿಮಯ ಹಾಗೂ ಅವರ ಸಮಸ್ಯೆಗಳ ನಿವಾರಣೆಗೆ ನಡೆಯುವ ಪೆನ್ಷನ್ ಅದಾಲತ್ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪಿಂಚಣಿದಾರರ ಅಹವಾಲು ➤ ಶೀಘ್ರದಲ್ಲಿ ಸಭೆ Read More »

ಕರಾವಳಿ

ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸಿ ➤ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ವಲಸೆ ಕಾರ್ಮಿಕರ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳು ರೋಟಾ ವೈರಸ್ ಲಸಿಕೆಯಿಂದ ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರೋಟಾ ವೈರಸ್ ಲಸಿಕೆ ಮತ್ತು ಟಿಡಿ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು. ಮಕ್ಕಳಲ್ಲಿ ಅತಿಸಾರ ಬೇಧಿ ಉಂಟು ಮಾಡುವ ರೋಟಾ ವೈರಸ್ ನಿಯಂತ್ರಣಕ್ಕಾಗಿ ಮಕ್ಕಳಿಗೆ ಆರನೇ, ಹತ್ತನೇ, ಹದಿನಾಲ್ಕನೇ ವಾರದಲ್ಲಿ ತಪ್ಪದೇ ರೋಟಾ

ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸಿ ➤ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ Read More »

ಕರಾವಳಿ

ಖಾಸಗೀ ಸಾಲದಿಂದ ಋಣಮುಕ್ತ ➤ ಅರ್ಜಿ ಸಲ್ಲಿಸಲು ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಕರ್ನಾಟಕ ಋಣ ಪರಿಹಾರ ಕಾಯ್ದೆಗೆ ರಾಷ್ಟ್ರಪತಿಗಳು ಜುಲೈ 16 ರಂದು ಅಂಕಿತ ಮಾಡಿರುವ ಹಿನ್ನಲೆಯಲ್ಲಿ ಕರ್ನಾಟಕ ಋಣ ಪರಿಹಾರ ಕಾಯ್ದೆಯು ಆದೇಶ ಹೊರಡಿಸಿದ ದಿನದಿಂದ ಒಂದು ವರ್ಷದ ಅವಧಿಗೆ ಮಾತ್ರ ಜಾರಿಯಲಿದೆ. ಋಣ ಪರಿಹಾರ ಪಡೆಯಲು ಕಾಯ್ದೆ ಜಾರಿಗೆ ಬಂದ ದಿನದಿಂದ 90 ದಿನಗಳೊಳಗಾಗಿ ಆಯಾ ವಿಭಾಗದ ಉಪವಿಭಾಗಾಧಿಕಾರಿಗಳಿಗೆ ಆಯಾ ಪ್ರದೇಶದಲ್ಲಿ ವಾಸಿಸುವ “ಋಣಿ” ಎಂದರೆ ಒಬ್ಬ ಭೂರಹಿತ ಕೃಷಿ ಕಾರ್ಮಿಕ, ದುರ್ಬಲ ವರ್ಗಕ್ಕೆ ಸೇರಿದ ಒಬ್ಬ ಅಥವಾ ಒಬ್ಬ ಸಣ್ಣ

ಖಾಸಗೀ ಸಾಲದಿಂದ ಋಣಮುಕ್ತ ➤ ಅರ್ಜಿ ಸಲ್ಲಿಸಲು ಸೂಚನೆ Read More »

ಕರಾವಳಿ

ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ➤ ಆಯುಷ್ ಶಿಬಿರ -ಡೆಂಗ್ಯೂ ಜಾಗೃತಿ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಆಯುಷ್ ಶಿಬಿರ -ಡೆಂಗ್ಯೂ ಜಾಗೃತಿ ಅಭಿಯಾನವನ್ನು ನಡೆಸಲಾಗಿತ್ತು. ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಸಜಿಪಮೂಡ ಇಲ್ಲಿನ ವೈದ್ಯಾಧಿಕಾರಿ ಡಾ. ಕೆ.ಎ. ಮಣಿಕರ್ಣಿಕ ಇವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಪಿನ ಸದಸ್ಯರ ಸಹಯೋಗದೊಂದಿಗೆ ಸಜಿಪಮೂಡದ ಶ್ರೀಗುರು ಕಲ್ಯಾಣ ಮಂಟಪದಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಹಾಗೂ ಡೆಂಗ್ಯೂ ಜಾಗೃತಿ ಅಭಿಯಾನದಡಿಯಲ್ಲಿ ಡೆಂಗ್ಯೂ ಖಾಯಿಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು.ಡಾ. ಮಣಿಕರ್ಣಿಕ ಅವರೊಂದಿಗೆ ವೈದ್ಯಾಧಿಕಾರಿ, ವಾಮದಪದವು

ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ➤ ಆಯುಷ್ ಶಿಬಿರ -ಡೆಂಗ್ಯೂ ಜಾಗೃತಿ ಅಭಿಯಾನ Read More »

ಕರಾವಳಿ

ಆ.12 ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಆಗಸ್ಟ್ 12 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ವಿಭಾಗಗಳು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ಮೃಗಾಲಯ,ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್ ಮತ್ತು ಸಂಸ್ಕೃತಿ  ಗ್ರಾಮ ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಇವರ ಪ್ರಕಟಣೆ ತಿಳಿಸಿದೆ.

ಆ.12 ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ Read More »

ಕರಾವಳಿ

ಯುವತಿ ಕಾಣೆಯಾಗಿದ್ದಾರೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಮೂಡುಪೆರಾರ ಗ್ರಾಮದ ಮುಂಡರಬೆಟ್ಟು ಎಂಬಲ್ಲಿನ ವಿನಿತಾ(18) ಎಂಬ ಯುವತಿ ತನ್ನ ಅಜ್ಜಿ ಮನೆಯಿಂದ ಹೋದವಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಬಜಪೆ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ಚಹರೆ ಇಂತಿವೆ: ಹೆಸರು-ವಿನಿತಾ, ಪ್ರಾಯ-18 ವರ್ಷ 1 ತಿಂಗಳು, ಎತ್ತರ-4 ಅಡಿ 10 ಇಂಚು, ದೈಹಿಕ ಚಹರೆ-ಸಾಧಾರಣ ಮೈಕಟ್ಟು, ಕೋಲು ಮುಖ, ಬಲಬದಿ ಮೂಗಿನಲ್ಲಿ ಮೂಗುತಿ ಧರಿಸಿರುತ್ತಾಳೆ, ಬಿಳಿ ಮೈ ಬಣ್ಣ, ಕಪ್ಪು ಮತ್ತು ಕೆಂಪು ಚೆಕ್ಸ್ ಚೂಡಿದಾರ ಧರಿಸಿರುತ್ತಾಳೆ.

ಯುವತಿ ಕಾಣೆಯಾಗಿದ್ದಾರೆ. Read More »

ಕರಾವಳಿ

ಡೊಂಗರಕೇರಿ ➤ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9. ಕರ್ನಾಟಕ ಸರ್ಕಾರವು ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2ರಡಿಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಆಗಸ್ಟ್ 9 ರಂದು ಬೆಳಿಗ್ಗೆ 11 ಗಂಟೆಗೆ ವಾರ್ಡ್ ನಂ.42 ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಡೊಂಗರಕೇರಿಯ ಬಿ.ಇ.ಎಮ್ ಅನುದಾನಿತ ಶಾಲೆಯಲ್ಲಿ ಕೆಯುಐಡಿಎಫ್‍ಸಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಿಂದ ಆಯೋಜಿಸಲಾಗಿದೆ ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ಡೊಂಗರಕೇರಿ ➤ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ Read More »

ಕರಾವಳಿ
Scroll to Top