karnataka

ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿ ಡಿಸೈನ್ ಸ್ಪರ್ಧೆಯನ್ನು “ಮಕ್ಕಳ ಹಕ್ಕುಗಳು” ಎಂಬ ವಿಷಯದಲ್ಲಿ 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದೆ. ಡಿಸೈನ್ ಸ್ವಂತದ್ದಾಗಿದ್ದು, ಸ್ಪೀಡ್ ಪೋಸ್ಟ್ ಮುಖಾಂತರ ಎ4 ಸೈಜ್ ಎನ್ವಲಪ್‍ನಲ್ಲಿ “ಮಕ್ಕಳ ದಿನಾಚರಣೆ 2019- ಸ್ಟಾಂಪ್ ಡಿಸೈನ್ ಸ್ಪರ್ಧೆ” ಎಂದು ನಮೂದಿಸಿರಬೇಕು. ಅಸಿಸ್ಟೆಂಟ್ ಡೈರೆಕ್ಟರ್ ಜನರಲ್, ರೂಮ್ ನಂ 108, ಡಾಕ್ ಭವನ್, ಪಾರ್ಲಿಮೆಂಟ್ ರಸ್ತೆ, ದೆಹಲಿ-110001” ಈ ವಿಳಾಸಕ್ಕೆ ಸಪ್ಟೆಂಬರ್ 20 ರ ಒಳಗಡೆ […]

ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’ Read More »

ಕರಾವಳಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9. ವಿವಿಧ ಸಾಂಕ್ರಾಮಿಕ ರೋಗಗಳ ಹಾಗೂ ಆರೋಗ್ಯ ಜಾಗೃತಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು, ಮಾಹಿತಿ ಪ್ರದರ್ಶನ ನಗರದ ಲಾಲ್‍ಬಾಗ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಗಸ್ಟ್ 8 ರಂದು ಚಾಲನೆ  ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರು ಪ್ರದರ್ಶನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಂಕ್ರಾಮಿಕ ರೋಗಗಳ ನಿಯಂತ್ರಣ ನಮ್ಮಿಂದಲೇ ಸಾಧ್ಯ. ವೈದ್ಯಕೀಯ ಚಿಕಿತ್ಸೆಗಳ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ Read More »

ಕರಾವಳಿ

ಹೊಸ್ಮಠ :ಹಳೆ ಸೇತುವೆ ಇಡೀ ದಿನ ಮುಳುಗಡೆ

(ನ್ಯೂಸ್ ಕಡಬ) newskadaba.com ಹೊಸ್ಮಠ, ಆಗಸ್ಟ್.8.ಗುಂಡ್ಯ ಹೊಳೆಗೆ ಅಡ್ಡಲಾಗಿರುವ ಕಡಬ ಸಮೀಪದ ಹೊಸ್ಮಠ ಹಳೆ ಸೇತುವೆ ಕಳೆದ ಬುದವಾರ ರಾತ್ರಿಯಿಂದ  ಮುಳುಗಡೆಯಾಗಿದೆ. ಈ ಸೇತುವೆಯ ಪಕ್ಕದಲ್ಲಿರು ನೂತನ ಸರ್ವಋತು ಸೇತುವೆಯಲ್ಲಿ ಪ್ರಯಾಣಿಸುವ ಹಲವಾರು ಮಂದಿ ತಮ್ಮ ವಾಹನವನ್ನು ಸೇತುವೆಯಲ್ಲಿ ನಿಲ್ಲಿಸಿ ನೀರನನು ವೀಕ್ಷಿಸುತ್ತಿದ್ದರು, ಸೇತುವೆ ಮೇಲೆ ನಿಂತು ಅಪಾಯದ ಭಂಗಿಯಲ್ಲಿಕೆಲವರು ಸೆಲ್ಪಿಗೆ ಮೊರೆಹೋಗುತ್ತಿದ್ದರು.  

ಹೊಸ್ಮಠ :ಹಳೆ ಸೇತುವೆ ಇಡೀ ದಿನ ಮುಳುಗಡೆ Read More »

ಕರಾವಳಿ

ಉಳಿಪ್ಪು ರಸ್ತೆ ದುರಸ್ತಿ ವಿಚಾರದಲ್ಲಿ ➤ ಪಂಚಾಯತ್ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಉಳಿಪ್ಪು ಎಂಬಲ್ಲಿ ರಸ್ತೆ ದುರಸ್ತಿ ವಿಚಾರದಲ್ಲಿ ಆ.9ರಂದು ಕುಟ್ರುಪಾಡಿ ಪಂಚಾಯತ್ ಎದುರು ಎಲ್ಸಿತೋಮಸ್ ಎಂಬವರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಕುಟ್ರುಪಾಡಿ ಗ್ರಾ.ಪಂ.ನಲ್ಲಿ ತುರ್ತು ಸಭೆಯಲ್ಲಿ  ಚರ್ಚೆ ನಡೆಸಿ, ರಸ್ತೆಯ ದುರಸ್ತಿಗೆ ನ್ಯಾಯಾಲಯದ ಆದೇಶ ಮತ್ತು ಪಟ್ಟಾ ಜಾಗದವರ ಆಕ್ಷೇಪಣೆ ಅರ್ಜಿ ಅಡ್ಡಿಯುಂಟಾಗಿರುವುದರಿಂದ ತುರ್ತು ದುರಸ್ತಿ ಸಾಧ್ಯವಾಗುವುದಿಲ್ಲ, ಈ ವಿಚಾರವನ್ನು ಎಲ್ಸಿ ತೋಮಸ್ ಅವರು ಅರ್ಥ ಮಾಡಿಕೊಂಡು ಪಂಚಾಯತ್ ವಿರುದ್ದ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು

ಉಳಿಪ್ಪು ರಸ್ತೆ ದುರಸ್ತಿ ವಿಚಾರದಲ್ಲಿ ➤ ಪಂಚಾಯತ್ ವಿರುದ್ದ ಪ್ರತಿಭಟನೆ Read More »

ಕರಾವಳಿ

ಮಳೆಗೆ ಕೃಷಿ ತೋಟ ಜಲಾವೃತ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ದಿನ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆ ಬದಿಯ ಕೃಷಿ ಪ್ರದೇಶಗಳು ಜಲಾವೃತಗೊಂಡ ಬಗ್ಗೆ ವರದಿಯಾಗಿದೆ. ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಸೇತುವೆ ಸಮೀಪದ ಕುಂಬ್ಲಾಯಿ ಉದಯ ಕುಮಾರ್ ಎಂಬವರ ಅಡಿಕೆ ತೋಟ ಹಾಗೂ ವಸಂತ ಕುಂಬ್ಲಾಯಿ ಎಂಬವರ ಅಡಿಕೆ, ರಬ್ಬರ್ ತೋಟಕ್ಕೆ ನೀರು ನುಗ್ಗಿದ್ದು, ತೋಟ ಪೂರ್ತಿ ಜಲಾವೃತಗೊಂಡಿದ್ದು, ಹೊಳೆ ಬದಿಯ ಹಲವರ ಕೃಷಿ ಭೂಮಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ನೆನ್ನೆ ಸಂಜೆ ವೇಳೆ ನೀರು ಕಡಿಮೆಯಾಗತೊಡಗಿದೆ.

ಮಳೆಗೆ ಕೃಷಿ ತೋಟ ಜಲಾವೃತ Read More »

ಕರಾವಳಿ

ಮರ್ದಾಳ ➤ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಮರ್ದಾಳ 9ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಸಮಿತಿ ಅಧ್ಯಕ್ಷೆಯಾಗಿ ಚಿತ್ರನೇಮಿರಾಜ ಬರಮೇಲು, ಕಾರ್ಯದರ್ಶಿಯಾಗಿ ಜಾನಕಿ ಮಿತ್ತೋಡಿ, ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ವಸಂತಿನಾರಾಯಣ ಗೌಡ ಪುಯಿಲ, ನಿರ್ಮಲಾಸೀತಾರಾಮ ಗೌಡ, ಉಷಾಮನೋಹರ್ ರೈ, ಸುನಾಂದ ಕೋಲಂತ್ತಾಡಿ, ಪ್ರೇಮ ಕೋಲಂತ್ತಾಡಿ, ಜಾನಕಿ ಕಂಪ, ಕುಸುಮ ಸುಳ್ಯ, ವೇದಾವತಿ ಎಡೆಂಜ, ಆಯ್ಕೆ ಮಾಡಲಾಗಿದೆ.

ಮರ್ದಾಳ ➤ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ Read More »

ಕರಾವಳಿ

ಕೇಪು ಕುಟ್ರುಪಾಡಿ ➤ ಕೋಟಿ ವೃಕ್ಷ ಆಂದೋಲನ

(ನ್ಯೂಸ್ ಕಡಬ) newskadaba.com ಕೇಪು ಕುಟ್ರುಪಾಡಿ , ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ಬಳಿ ಕೋಟಿ ವೃಕ್ಷ ಆಂದೋಲನ ನಡೆಯಿತು. ಕಡಬ ಸರಸ್ವತಿ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ಕೋಟಿ ವೃಕ್ಷ ಆಂದೋಲನವನ್ನು ಸುರೇಶ್ ದೇಂತಾರು ಗಿಡ ನೆಡುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೂ ಸಸಿಗಳು ವಿತರಿಸಲಾಯಿತು. ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ವಠಾರ ಹಾಗೂ ಸುತ್ತಮುತ್ತಲಿನಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್

ಕೇಪು ಕುಟ್ರುಪಾಡಿ ➤ ಕೋಟಿ ವೃಕ್ಷ ಆಂದೋಲನ Read More »

ಕರಾವಳಿ

ಕೋಟೆಕಾರು ಪಟ್ಟಣ ಪಂಚಾಯತ್ ➤ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಕೋಟೆಕಾರು ಪಟ್ಟಣ ಪಂಚಾಯತ್ 2019-20ನೇ ಸಾಲಿನ ಎಸ್.ಎಫ್.ಸಿ ಮತ್ತು ಪಟ್ಟಣ ಪಂಚಾಯತ್ ನಿಧಿಯಡಿ ವಿವಿಧ ಸೌಲಭ್ಯಗಳಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಬಡಜನರ ಕಲ್ಯಾಣ ಕಾರ್ಯಕ್ರಮ ಶೇ 7.50ರಲ್ಲಿ ಮನೆಗೆ ಗ್ಯಾಸ್ ಸಂಪರ್ಕ, ಪ್ರಥಮ ಪಿ.ಯು.ಸಿಯಲ್ಲಿ ಓದುತ್ತಿದ್ದು ಎಸ್.ಎಸ್.ಎಲ್.ಸಿ ಯಲ್ಲಿ ಶೇ 70 ಕ್ಕಿಂತ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಶೇಕಡ 24.10% ಕ್ಕೆ ಕಾಯ್ದಿರಿಸಿದ ಮೊತ್ತದಲ್ಲಿ ಆರೋಗ್ಯ ವಿಮಾ ಯೋಜನೆ, ಅಡುಗೆ ಅನಿಲ

ಕೋಟೆಕಾರು ಪಟ್ಟಣ ಪಂಚಾಯತ್ ➤ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವ ಗೂಬೆ ಜಾಗೃತಿ ದಿನಾಚರಣೆ ➤ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವ ಗೂಬೆ ಜಾಗೃತಿ ದಿನಾಚರಣೆ – 2019 ರ ಪ್ರಯುಕ್ತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಗತ್ತನ್ನು ಗೂಬೆಗಳಿಗೆ ಉತ್ತಮ ಸ್ಥಳವನ್ನಾಗಿ ಮಾಡೋಣ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಲ್ಲಿ ಗೂಬೆಗಳ ಸಂರಕ್ಷಣೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಗೂಬೆಗಳ ವೀಕ್ಷಣಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯ ನಿಯಮಗಳು ಇಂತಿವೆ: ಪ್ರಬಂಧವನ್ನು ಆಂಗ್ಲ ಅಥವಾ ಕನ್ನಡದಲ್ಲಿ ಬರೆಯಬೇಕು, ಪ್ರಬಂಧವು 2000 ಅಕ್ಷರಗಳ ಒಳಗಿರಬೇಕು, ವಿದ್ಯಾರ್ಥಿಗಳು

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವ ಗೂಬೆ ಜಾಗೃತಿ ದಿನಾಚರಣೆ ➤ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ Read More »

ಕರಾವಳಿ

ಜಾಗತಿಕ ಸ್ತನ್ಯಪಾನ ಕಾರ್ಯಕ್ರಮ ಮತ್ತು ಡೆಂಗ್ಯೂ ಜಾಗೃತಿ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಜಾಗತಿಕ ಸ್ತನ್ಯಪಾನ ಕಾರ್ಯಕ್ರಮ ಮತ್ತು ಡೆಂಗ್ಯೂ ಜಾಗೃತಿ ಅಭಿಯಾನವನ್ನು ಆಗಸ್ಟ್ 6 ರಂದು ಅಕ್ಷರ ಸದನ ಬೋಳೂರು, ಅಂಗನವಾಡಿ ಕೇಂದ್ರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವೇಕಾನಂದ ಯುವಕೇಂದ್ರ ಗೌರವಾಧ್ಯಕ್ಷ ವಾಸುದೇವ ಬೋಳೂರು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವೈದ್ಯಾಧಿಕಾರಿ ಡಾ. ಹೇಮವಾಣಿ.ಪಿ. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ತನ್ಯಪಾನದ ಮಹತ್ವ ಮತ್ತು ಡೆಂಗ್ಯೂ ರೋಗದ ಲಕ್ಷಣಗಳು, ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಕುಮುದಾಕ್ಷಿ ಮತ್ತು ಶುಶ್ರೂಷಕಿ ಪ್ರಶಾಂತಿ ಇವರು

ಜಾಗತಿಕ ಸ್ತನ್ಯಪಾನ ಕಾರ್ಯಕ್ರಮ ಮತ್ತು ಡೆಂಗ್ಯೂ ಜಾಗೃತಿ ಅಭಿಯಾನ Read More »

ಕರಾವಳಿ
Scroll to Top