karnataka

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಮಹಿಳೆಯರಿಬ್ಬರ ಕಿತ್ತಾಟ ►ಸಾರ್ವಜನಿಕರಿಗೆ ಸಿಕ್ಕಿದೆ ಪುಕ್ಕಟೆ ಮನರಂಜನೆ..!!!

(ನ್ಯೂಸ್ ಕಡಬ) newskadaba.com ತುಮಕೂರು,ಸೆ.8, ಬೈಕ್ ಹಾಗೂ ಆಕ್ಟಿವಾ ನಡುವೆ ಲಘುವಾಗಿ ಡಿಕ್ಕಿ ಆಗಿದ್ದನ್ನು ನೆಪವಾಗಿಸಿಕೊಂಡು ಮಹಿಳೆಯರಿಬ್ಬರು ನಡುರಸ್ತೆಯಲ್ಲೇ ಪರಸ್ಪರ ಜಡೆ ಹಿಡಿದು ಕಿತ್ತಾಡಿದ ಘಟನೆ ತುಮಕೂರಿನ ಕೋತಿತೋಪಿನಲ್ಲಿ ನಡೆದಿದೆ.  ಕೋತಿತೋಪಿನ ರಸ್ತೆಯಲ್ಲಿ ಹಂಪ್ಸ್ ದಾಟುವಾಗ ಬೈಕ್ ಹಾಗೂ ಆಕ್ಟಿವಾ ನಡುವೆ ಲಘುವಾಗಿ ಡಿಕ್ಕಿ ಸಂಭವಿಸಿದೆ. ಈ ಎರಡೂ ವಾಹನಗಳಲ್ಲಿ ದಂಪತಿಗಳು ಪ್ರಯಾಣಿಸುತ್ತಿದ್ದರು. ಡಿಕ್ಕಿಗೆ ಸಂಬಧಿಸಿ ಮೊದಲು ಪುರುಷರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಧ್ಯಪ್ರವೇಶಿಸಿದ ಮಹಿಳೆಯರಿಬ್ಬರೂ ಅವಾಚ್ಯ ಶಬ್ದಗಳಿಂದ ಬೈದು ಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು […]

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಮಹಿಳೆಯರಿಬ್ಬರ ಕಿತ್ತಾಟ ►ಸಾರ್ವಜನಿಕರಿಗೆ ಸಿಕ್ಕಿದೆ ಪುಕ್ಕಟೆ ಮನರಂಜನೆ..!!! Read More »

ಕರ್ನಾಟಕ

ಕಡಬ ಸಹಿತ 49 ಹೊಸ ತಾಲೂಕುಗಳಿಗೆ ಸಂಪುಟ ಅನುಮೋದನೆ ► 2018 ಜನವರಿ 01ರಿಂದ ಅಸ್ತಿತ್ವಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 08. ರಾಜ್ಯ ಸರ್ಕಾರ ಘೋಷಿಸಿರುವ 49 ಹೊಸ ತಾಲೂಕುಗಳು 2018ರ ಜನವರಿ ಒಂದರಿಂದ ಅಸ್ತಿತ್ವಕ್ಕೆ ಬರಲಿದ್ದು, ಈ ಸಂಬಂಧ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ. ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಹೊಸ ತಾಲ್ಲೂಕುಗಳಿಗೆ ತಹಶೀಲ್ದಾರ್ ಕಚೇರಿ ಮತ್ತು ಬೇರೆ ಬೇರೆ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ತಾಲ್ಲೂಕು ಪುನರ್ ರಚನೆ ಸಂಬಂಧ 1973ರಲ್ಲಿ ವಾಸುದೇವ ರಾವ್ ಆಯೋಗ, 84ರಲ್ಲಿ ಟಿ.ಎಂ. ಹುಂಡೇಕರ್, 86ರಲ್ಲಿ ಪಿ.ಸಿ. ಗದ್ದಿಗೌಡರ್,

ಕಡಬ ಸಹಿತ 49 ಹೊಸ ತಾಲೂಕುಗಳಿಗೆ ಸಂಪುಟ ಅನುಮೋದನೆ ► 2018 ಜನವರಿ 01ರಿಂದ ಅಸ್ತಿತ್ವಕ್ಕೆ Read More »

ಕರ್ನಾಟಕ

ಶಾಕಿಂಗ್ ನ್ಯೂಸ್ ► ಕರ್ನಾಟಕದ 20 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.03, ವಿದ್ಯಾರ್ಥಿಗಳ ಕಳಪೆ ಫಲಿತಾಂಶದ ಸಾಧನೆ ಮತ್ತು ಪ್ರವೇಶಾತಿ ಕಡಿಮೆ ಆಗುತ್ತಿರುವ ಕರ್ನಾಟಕದ 20 ಕಾಲೇಜುಗಳು ಸೇರಿದಂತೆ ದೇಶದಲ್ಲಿ ಸುಮಾರು 800 ಎಂಜಿನಿಯರಿಂಗ್ ಕಾಲೇಜುಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಒಳಗಡೆ ಬೀಗ ಬೀಳಲಿದೆ. ಕಳಪೆ ಗುಣಮಟ್ಟದ ಫಲಿತಾಂಶ ತೋರಿಸುತ್ತಿರುವ ದೇಶದ 800 ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಮುಖ್ಯಸ್ಥ ಅನಿಲ್ ದತ್ತಾತ್ರೇಯ ಸಹಸ್ರಬುದೆ ತಿಳಿಸಿದ್ದಾರೆ. ಮೂಲಸೌಕರ್ಯದ ಕೊರತೆ ಇರುವ ಹಾಗೂ ಸತತ 5 ವರ್ಷಗಳ ಕಾಲ ಶೇ.30ಕ್ಕಿಂತ ಕಡಿಮೆ ವಿದ್ಯಾರ್ಥಿಗಳು

ಶಾಕಿಂಗ್ ನ್ಯೂಸ್ ► ಕರ್ನಾಟಕದ 20 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ..!!! Read More »

ಕರಾವಳಿ

ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ ► ಪ್ರವಾಹದಿಂದ ತತ್ತರಿಸಿರುವ ಉತ್ತರ ಭಾರತದ ಜನತೆಗೆ ಮತ್ತೊಂದು ಆಘಾತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.30. ಭೀಕರ ಮಳೆಯಿಂದಾಗಿ ತತ್ತರಿಸಿರುವ ಮುಂಬೈ ಜನತೆ ನೆರೆಯ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಆಘಾತಕ್ಕೆ ಸಿದ್ಧವಾಗಬೇಕಾಗಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೆ ಆಸ್ಸಾಂ, ಬಿಹಾರ ರಾಜ್ಯಗಳು ಪ್ರವಾಹಕ್ಕೀಡಾಗಿದ್ದು, ಮಂಗಳವಾರದ ಮಳೆಗೆ ಮಹಾರಾಷ್ಟ್ರದಲ್ಲೂ ನೆರೆ ನೀರಿನಿಂದ ಜನತೆ ತತ್ತರಿಸಿದ್ದಾರೆ. ಪರಿಸ್ಥಿತಿ ಹೀಗಿದ್ದು 12 ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ವಿಪರೀತ ಮಳೆಯಾಗಲಿದ್ದು, 14 ನದಿಗಳು

ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ ► ಪ್ರವಾಹದಿಂದ ತತ್ತರಿಸಿರುವ ಉತ್ತರ ಭಾರತದ ಜನತೆಗೆ ಮತ್ತೊಂದು ಆಘಾತ Read More »

ರಾಷ್ಟ್ರೀಯ ನ್ಯೂಸ್

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ನಾನೇ: ಡಿ.ಕೆ.ಶಿವಕುಮಾರ್ *► ರಾಗ ಬದಲಿಸಿ ತಣ್ಣಗಾದ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.22. 2018ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅವರು ಮಂಗಳವಾರದಂದು ನೆಲಮಂಗಲ ತಾಲೂಕಿನ ಹಾಲಿಡೇ ಫಾರ್ಮ್ಸ್ ಹೋಟೆಲಿನಲ್ಲಿ ನಡೆದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದರು. ಮಾಗಡಿ ತಾಲೂಕಿನ ಜನರು ಆಸೆ ಪಟ್ಟರೆ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕನನ್ನು ಗೆಲ್ಲಿಸಿದರೆ ಮುಂದಿನ ಮುಖ್ಯಮಂತ್ರಿ ನಾನೇ ಆಗುತ್ತೇನೆ ಎಂದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ನಾನೇ: ಡಿ.ಕೆ.ಶಿವಕುಮಾರ್ *► ರಾಗ ಬದಲಿಸಿ ತಣ್ಣಗಾದ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ Read More »

ಕರ್ನಾಟಕ

ಡಿಕೆಶಿ ನಿವಾಸದ ಮೇಲಿನ ಐಟಿ ದಾಳಿ ಮುಕ್ತಾಯ ► ದಾಳಿ ಬಳಿಕ ಸಚಿವ ಡಿಕೆಶಿ ಹೇಳಿದ್ದೇನು…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.05. ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸಕ್ಕೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ತಮ್ಮ ತನಿಖೆಯನ್ನು ಶನಿವಾರ ಬೆಳಿಗ್ಗೆ ಕೊನೆಗೊಳಿಸಿದ್ದಾರೆ. ಕಳೆದ ಮೂರು ದಿನಗಳ ದಾಳಿ ಮುಕ್ತಾಯವಾದ ನಂತರ ಡಿ.ಕೆ. ಶಿವಕುಮಾರ್ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ, ಮನೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಕೆಲ ಹೊತ್ತು ಮಾತನಾಡಿದ ಡಿಕೆಶಿ ಬಳಿಕ ತಾವು ತಾವು ನಂಬಿರುವ ದೇವರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಅಲ್ಲಿಂದ ಹೊರಟು ಹೋದರು. ನನಗೆ ಮಾಧ್ಯಮಗಳು, ಪಕ್ಷದ ಕಾರ್ಯಕರ್ತರು,  ನಾಯಕರಲ್ಲದೇ

ಡಿಕೆಶಿ ನಿವಾಸದ ಮೇಲಿನ ಐಟಿ ದಾಳಿ ಮುಕ್ತಾಯ ► ದಾಳಿ ಬಳಿಕ ಸಚಿವ ಡಿಕೆಶಿ ಹೇಳಿದ್ದೇನು…? Read More »

ಕರ್ನಾಟಕ

ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ಕೈಕಂಬಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ವಿಸ್ತಾರಕರಾಗಿ ಕಡಬ ಶಕ್ತಿ ಕೇಂದ್ರದ ಕೈಕಂಬ ಬೂತ್ ಸಮಿತಿಗೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಡಬ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಬಿಳಿನೆಲೆ ತಾ.ಪಂ.ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್, ಕಡಬ ಶಕ್ತಿ ಕೇಂದ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್ ವಾಲ್ತಾಜೆ, ಬಿಳಿನೆಲೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಘು ಚೆಂಡೆಹಿತ್ಲು, ಬಿಳಿನೆಲೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಿ.,

ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ಕೈಕಂಬಕ್ಕೆ ಭೇಟಿ Read More »

ಕರಾವಳಿ

‘ಬಿಜೆಪಿ ಮುಕ್ತ ಭಾರತ’ ಕರ್ನಾಟಕದಿಂದಲೇ ಆರಂಭ: ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.28. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಡಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿರುವ ಬೆನ್ನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ. ದೇಶದಲ್ಲಿ ‘ಬಿಜೆಪಿ ಮುಕ್ತ ಭಾರತ’ ನಿರ್ಮಾಣ ಆಗಲಿದ್ದು, ಆ ಕಾರ್ಯವು ಕರ್ನಾಟಕದಿಂದಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಅವರು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವಿಧಾನಸಭೆ ಹಾಗೂ

‘ಬಿಜೆಪಿ ಮುಕ್ತ ಭಾರತ’ ಕರ್ನಾಟಕದಿಂದಲೇ ಆರಂಭ: ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಜಿಲ್ಲೆಯ ಪೊಲೀಸರ ವರ್ಗಾವಣೆ ಪಟ್ಟಿ ರೆಡಿ…. ► ಹೊರ ಜಿಲ್ಲೆಗಳ ಪೊಲೀಸರು ಬರಲಿದ್ದಾರಾ ಮಂಗಳೂರಿಗೆ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಇಲಾಖೆ ಜಿಲ್ಲಾ ಎಸ್ಪಿ ಮತ್ತು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಹೀಗಾಗಿ ಸಾರ್ವತ್ರಿಕ ವರ್ಗಾವಣೆ ನಡೆಸಲು ಇಲಾಖೆಯಿಂದ ಪಟ್ಟಿ ತಯಾರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಮಂಗಳೂರಿನಲ್ಲಿ ನಡೆದ ಗಲಭೆ ಸಂಬಂಧ ಹಿರಿಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದರು. ಆದರೂ ಗಲಭೆಯನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಡಿಜಿಪಿ

ಜಿಲ್ಲೆಯ ಪೊಲೀಸರ ವರ್ಗಾವಣೆ ಪಟ್ಟಿ ರೆಡಿ…. ► ಹೊರ ಜಿಲ್ಲೆಗಳ ಪೊಲೀಸರು ಬರಲಿದ್ದಾರಾ ಮಂಗಳೂರಿಗೆ…? Read More »

ಕರ್ನಾಟಕ
Scroll to Top