ಆ.12 ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಆಗಸ್ಟ್ 12 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ವಿಭಾಗಗಳು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.

ಮೃಗಾಲಯ,ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್ ಮತ್ತು ಸಂಸ್ಕೃತಿ  ಗ್ರಾಮ ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಇವರ ಪ್ರಕಟಣೆ ತಿಳಿಸಿದೆ.

Scroll to Top