ಯುವತಿ ಕಾಣೆಯಾಗಿದ್ದಾರೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಮೂಡುಪೆರಾರ ಗ್ರಾಮದ ಮುಂಡರಬೆಟ್ಟು ಎಂಬಲ್ಲಿನ ವಿನಿತಾ(18) ಎಂಬ ಯುವತಿ ತನ್ನ ಅಜ್ಜಿ ಮನೆಯಿಂದ ಹೋದವಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಬಜಪೆ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಕಾಣೆಯಾದವರ ಚಹರೆ ಇಂತಿವೆ: ಹೆಸರು-ವಿನಿತಾ, ಪ್ರಾಯ-18 ವರ್ಷ 1 ತಿಂಗಳು, ಎತ್ತರ-4 ಅಡಿ 10 ಇಂಚು, ದೈಹಿಕ ಚಹರೆ-ಸಾಧಾರಣ ಮೈಕಟ್ಟು, ಕೋಲು ಮುಖ, ಬಲಬದಿ ಮೂಗಿನಲ್ಲಿ ಮೂಗುತಿ ಧರಿಸಿರುತ್ತಾಳೆ, ಬಿಳಿ ಮೈ ಬಣ್ಣ, ಕಪ್ಪು ಮತ್ತು ಕೆಂಪು ಚೆಕ್ಸ್ ಚೂಡಿದಾರ ಧರಿಸಿರುತ್ತಾಳೆ. ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ ಪೋಲೀಸ್ ಉಪ ನಿರೀಕ್ಷಕರು, ಬಜಪೆ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Scroll to Top