karnataka

ಭಾರತಕ್ಕೆ ಗೆಲುವಿನ ಪುಳಕ ಹುಟ್ಟಿಸಿದ ವಿರಾಟ್ ಕೊಹ್ಲಿಯ ಭರ್ಜರಿ ಶತಕ

(ನ್ಯೂಸ್ ಕಡಬ) newskadaba.com ಪೋರ್ಟ್‌ ಆಫ್‌ ಸ್ಪೇನ್, ಆಗಸ್ಟ್.12.ವಿಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 59 ರನ್‌ ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಿಗಧಿತ 50 ಓವ್‌ ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 279 ರನ್‌ ಗಳಿಸಿದರೆ, ಮಳೆಯ ಕಾರಣದಿಂದ 46 ಓವರ್‌ ಗೆ 270 ರನ್‌ ಗಳಿಸುವ ಗುರಿ ಪಡೆದ ವಿಂಡೀಸ್‌ 210 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿತು.ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ ಭಾರತಕ್ಕೆ […]

ಭಾರತಕ್ಕೆ ಗೆಲುವಿನ ಪುಳಕ ಹುಟ್ಟಿಸಿದ ವಿರಾಟ್ ಕೊಹ್ಲಿಯ ಭರ್ಜರಿ ಶತಕ Read More »

ಕ್ರೀಡಾ ನ್ಯೂಸ್

ದ. ಕ ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ➤ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ ಸಿ.ಎಂ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆಗಸ್ಟ್.12.ಇಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆಮಾಡಿದರು. ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ ಬಿ.ಎಸ್.ವೈ. ಅವರು ಅಲ್ಲಿ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.ಸ್ಥಳೀಯ ಶಾಸಕರಾಗಿರುವ ಹರೀಶ್ ಪೂಂಜಾ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಭಾರತೀಯ ಜನತಾ ಪಕ್ಷದ ಶಾಸಕರು ಮತ್ತು ಸ್ಥಳೀಯ ಮುಖಂಡರು ಬಿ.ಎಸ್.ವೈ. ಅವರಿಗೆ ಸಾಥ್ ನೀಡಿದರು.ನೆರೆಪೀಡಿತ ಪ್ರದೇಶಗಳಲ್ಲಿ ಪ್ರವಾಹದಿಂದ ಉಂಟಾದ ಸಮಸ್ಯೆಯ ಕೇಳಿ ಗಂಭೀರತೆ

ದ. ಕ ಜಿಲ್ಲೆಯಲ್ಲಿ ನೆರೆ ಹಾನಿ ವೀಕ್ಷಣೆಗೆಂದು ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ➤ ಹೊಸ ಮನೆ ನಿರ್ಮಾಣದ ಭರವಸೆ ನೀಡಿದ ಸಿ.ಎಂ Read More »

ಕರಾವಳಿ

ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ನಲುಗಿ ಹೋಗಿದೆ-ಮಲೆನಾಡು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆಗಸ್ಟ್.12.ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಭೂ ಕುಸಿತ ಹೆಚ್ಚಳವಾದ ಕಾರಣ ಸಂಪೂರ್ಣ ರಸ್ತೆಯೇ ನಾಶವಾಗುವ ಹಂತದಲ್ಲಿದೆ. ಬನ್ಕಲ್ ವ್ಯಾಪ್ತಿಯಲ್ಲಿ ರಸ್ತೆ ಅಂಚು ವಿಪರೀತ ಕುಸಿತಗೊಂಡಿರುವ ಕಾರಣ ತೆರವು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ. ಇದರಿಂದಾಗಿ ಬೆಳ್ತಂಗಡಿ ಚಿಕ್ಕಮಗಳೂರು ಸಂಪರ್ಕ ಕಡಿತವಾಗಿದ್ದು, ಮುಂದಿನ ನಾಲ್ಕು ತಿಂಗಳು ಚಾರ್ಮಾಡಿ ಘಾಟಿಯ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.ಒಂದು ವಾರದಿಂದ

ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ನಲುಗಿ ಹೋಗಿದೆ-ಮಲೆನಾಡು Read More »

ಕರಾವಳಿ

ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಆಘಾತ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಮತ್ತೊಮ್ಮೆ ಸಾರಾಸಗಟಾಗಿ ತಳ್ಳಿಹಾಕಿದರೆ, ಪಾಕ್​ನ ಪರಮಾಪ್ತ ಚೀನಾ ಕೂಡ ಕೈಕೊಟ್ಟಿದೆ. ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ ಚೀನಾ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಆಘಾತ ಎದುರಾಗಿದೆ. ಕಾಶ್ಮೀರ ವಿಚಾರದಲ್ಲಿ ನೆರವಾಗುವಂತೆ ಪಾಕ್ ಮುಂದಿಟ್ಟ ಕೋರಿಕೆಯನ್ನು ಚೀನಾ ವಿದೇಶಾಂಗ ಸಚಿವ ವಾಂಗ್

ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಆಘಾತ Read More »

ಕರಾವಳಿ

ಕಡ್ಯ-ಕೊಣಾಜೆ ➤ ಶ್ರೀ ವರಮಹಾಲಕ್ಷ್ಮೀ ಪೂಜೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,, ಆಗಸ್ಟ್.10.ಕಡ್ಯ-ಕೊಣಾಜೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಕಡ್ಯ ಕೊಣಾಜೆ ಶ್ರೀ ದುರ್ಗಾಂಭಿಕಾ ಭಜನಾ ಮಂದಿರದಲ್ಲಿ ದ್ವಿತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಅರ್ಚಕ ರವಿಪ್ರಸಾದ್ ಭಟ್ ನೇತೃತ್ವದಲ್ಲಿ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಸಮಿತಿಯ ಅಧ್ಯಕ್ಷೆ ವೀಣಾ ಭಟ್, ಉಪಾಧ್ಯಕ್ಷೆಗಾಯತ್ರಿ ಬೊಳೊಳಿ, ಕಾರ್ಯದರ್ಶಿ ಗೋಪಿ ಕೆ., ದಮಯಂತಿ, ಹೇಮಲತಾ ಗುಜ್ಜಳ, ಗ್ರಾ.ಪಂ. ಅಧ್ಯಕ್ಷೆ ಬೇಬಿ, ಪ್ರಮುಖರಾದ ವಾಸುದೇವ ಭಟ್ ಕಡ್ಯ, ಸುಂದರ ಗೌಡ, ರಘುಚಂದ್ರ ಗೌಡ,

ಕಡ್ಯ-ಕೊಣಾಜೆ ➤ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

ಕರಾವಳಿ

ಇಚ್ಲಂಪಾಡಿ: ನದಿಗೆ ಬಾಗಿನ ➤ ಸ್ವಚ್ಚತಾ ಕಾರ್ಯ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.10.ರಾಜ್ಯಾದ್ಯಂತ ಸುರಿಯುತ್ತಿರುವ ಬಾರೀ ಮಳೆಯಿಂದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಇಚ್ಲಂಪಾಡಿಯಲ್ಲಿ ಹರಿಯುತ್ತಿರುವ ಗುಂಡ್ಯಹೊಳೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಸಂಜೆ ವೇಳೆ ಪ್ರಮಾಣ ಕಡಿಮೆಯಾಗಿದೆ. ನೀರಿದ ಪ್ರಮಾಣ ಹೆಚ್ಚಿದ್ದರಿಂದ ನಾಡಿಗೆ ಒಲಿತಾಗಲೆಂದು ಹಾಗೂ ಯಾವುದೇ ಅಪಾಯ ಸಂಭವಿಸದಿರಲೆಂದು ನೂಜಿಬೈಲ್ ತೆಗ್‍ರ್ ತುಳುಕೂಟ ಸಂಚಾಲಕ ಉಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಗುರುವಾರ ನದಿಗೆ ಭಾಗಿನ ಅರ್ಪಿಸಿ, ಪ್ರಾರ್ಥಿಸಲಾಯಿತು. ಇದೇ ಸಂದರ್ಭದಲ್ಲಿ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಇಚ್ಲಂಪಾಡಿ ಸೇತುವೆಯಲ್ಲಿ ನೀರು ನಿಂತು ಜಾರುವ

ಇಚ್ಲಂಪಾಡಿ: ನದಿಗೆ ಬಾಗಿನ ➤ ಸ್ವಚ್ಚತಾ ಕಾರ್ಯ Read More »

ಕರಾವಳಿ

ಗುರುಪುರ ಹೋಬಳಿ ಮೊಗರು ಗ್ರಾಮದ ಮಳಲಿಪೇಟೆ ➤ ವಶಪಡಿಸಿರುವ 880 ಕೆ.ಜಿ. ಪಡಿತರ ಅಕ್ಕಿ ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.ಗುರುಪುರ ಹೋಬಳಿ ಮೊಗರು ಗ್ರಾಮದ ಮಳಲಿಪೇಟೆ ಎಂಬಲ್ಲಿ ಆಹಾರ ಇಲಾಖೆ ವಶಪಡಿಸಿಕೊಂಡಿರುವ 880 ಕೆ.ಜಿ. ಪಡಿತರ ಅಕ್ಕಿಯನ್ನು ಬಹಿರಂಗ ಹರಾಜು ಮಾಡಲು ಮಂಗಳೂರು ಸಹಾಯಕ ಆಯುಕ್ತರು ಆದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 19 ರಂದು ಬೆಳಿಗ್ಗೆ 11.30 ಗಂಟೆಗೆ ಸಂಖ್ಯೆ 52, ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆ ಮಳಲಿಪೇಟೆ ನ್ಯಾಯಬೆಲೆ ಅಂಗಡಿಯ ಆವರಣದಲ್ಲಿ ಆಹಾರ ಶಿರಸ್ತೇದಾರರು ಮಂಗಳೂರು ತಾಲೂಕು ಇವರು ಹರಾಜು ನಡೆಸುವರು. ಯಶಸ್ವೀ ಬಿಡ್ಡುದಾರರು ಸ್ಥಳದಲ್ಲಿ ಬಿಡ್ಡಿನ

ಗುರುಪುರ ಹೋಬಳಿ ಮೊಗರು ಗ್ರಾಮದ ಮಳಲಿಪೇಟೆ ➤ ವಶಪಡಿಸಿರುವ 880 ಕೆ.ಜಿ. ಪಡಿತರ ಅಕ್ಕಿ ಬಹಿರಂಗ ಹರಾಜು Read More »

ಕರಾವಳಿ

ನೆಹರು ಯುವ ಕೇಂದ್ರ ಮಂಗಳೂರು ➤ ಒಂದು ದಿನದ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.ನೆಹರು ಯುವ ಕೇಂದ್ರ ಮಂಗಳೂರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಮಂಗಳೂರು ಇವರ ವತಿಯಿಂದ ವಿಶ್ವ ಯುವ ದಿನಾಚರಣೆಯ ಕುರಿತು ಒಂದು ದಿನದ ಕಾರ್ಯಾಗಾರವು ಇಂದು ಬೆಳಿಗ್ಗೆ 10 ಗಂಟೆಗೆ ರೋಶನಿ ನಿಲಯದಲ್ಲಿ ನಡೆಯಲಿದೆ. ಕಾರ್ಯಾಗಾರವನ್ನು ದ.ಕ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಇವರು ಉದ್ಘಾಟಿಸಲಿದ್ದಾರೆ. ಮಂಗಳೂರು ವಿವಿ ರಿಜಿಸ್ಟ್ರಾರ್ ಎ.ಎಂ ಖಾನ್ ಅಧ್ಯಕ್ಷತೆ ವಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೊಲೀಸ್ ಅಧೀಕ್ಷಕರಾದ ಬಿ.ಎಂ ಲಕ್ಷ್ಮೀ ಪ್ರಸಾದ್ ಇವರು ಭಾಗವಹಿಸಲಿದ್ದಾರೆ.

ನೆಹರು ಯುವ ಕೇಂದ್ರ ಮಂಗಳೂರು ➤ ಒಂದು ದಿನದ ಕಾರ್ಯಾಗಾರ Read More »

ಕರಾವಳಿ

ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಮಂಗಳೂರು ➤ರೈಲ್ವೇ ನಿಲ್ದಾಣದಲ್ಲಿ ತಪಾಸಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಯಿತು. ಪೊಲೀಸ್‍ದಳ, ನಗರ ಪೊಲೀಸ್, ಬಾಂಬ್ ತಪಾಸಣಾ ತಂಡ ಶ್ವಾನದಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ವಿದ್ವಂಸಕ ಕೃತ್ಯ ತಪಾಸಣೆ ನಡೆಯಿತು. ನಿಲ್ದಾಣದ ಪ್ಲಾಟ್‍ಫಾರ್ಮ್ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಆರ್.ಪಿ.ಎಫ್ ಅಧಿಕಾರಿ ಅಜಯ್ ಕುಮಾರ್ ನೇತೃತ್ವ ವಹಿಸಿದ್ದರು.

ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಮಂಗಳೂರು ➤ರೈಲ್ವೇ ನಿಲ್ದಾಣದಲ್ಲಿ ತಪಾಸಣೆ Read More »

ಕರಾವಳಿ

ಜೋಕಟ್ಟೆ ವಿಶೇಷ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.10.2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ಆಯೋಜಿಸಲಾಗಿದೆ. ಆಗಸ್ಟ್ 13 ರಂದು ಬೆಳಿಗ್ಗೆ 10.30 ಗಂಟೆಗೆ ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ ಸಭಾಭವನದಲ್ಲಿ ನಡೆಯಲಿದೆ ಎಂದು ಜೋಕಟ್ಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಜೋಕಟ್ಟೆ ವಿಶೇಷ ಗ್ರಾಮ ಸಭೆ Read More »

ಕರಾವಳಿ
Scroll to Top