ತೆಲುಗು ಟೈಟಾನ್ಸ್‌ ತಂಡವನ್ನು ಬೇಟೆಯಾಡಿದ ಬೆಂಗಳೂರು ಬುಲ್ಸ್

(ನ್ಯೂಸ್ ಕಡಬ) newskadaba.com ಬಿಹಾರ, ಆಗಸ್ಟ್.9.ಬೆಂಗಳೂರು ಬುಲ್ಸ್‌ ತಂಡ 47-26 ಅಂಕಗಳ ಭಾರೀ ಅಂತರದಿಂದ ತೆಲುಗು ಟೈಟಾನ್ಸ್‌ ತಂಡವನ್ನು ಬೇಟೆಯಾಡಿತು.ಇ ಭರ್ಜರಿ ಭೇಟೆಗೆ ಮೂಲ ಕಾರಣಕರ್ತರಾದ ತಾರಾ ರೈಡರ್‌ ಪವನ್‌ ಸೆಹ್ರಾವತ್‌ (17 ಅಂಕ) ಅವರ ಮಿಂಚಿನ ರೈಡಿಂಗ್‌ನೆರವಿನಿಂದಸಾಧ್ಯವಾಯಿತು.

ಬೆಂಗಳೂರು ಬುಲ್ಸ್‌ ಈ ಕೂಟದಲ್ಲಿ ದಾಖಲಿಸಿದ 4ನೇ ಗೆಲುವು. ಸತತವಾಗಿ ಮೂರನೇ ಜಯವೂ ಹೌದು. ತೆಲುಗು ಟೈಟಾನ್ಸ್‌ಗೆ ಕೂಟದಲ್ಲಿ ಎದುರಾದ 5ನೇ ಹೀನಾಯ ಸೋಲು. ಹಿಂದಿನ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 20-20 ಅಂಕಗಳ ಅಂತರದಿಂದ ಯುಪಿ ಯೋಧಾ ವಿರುದ್ಧ ರೋಚಕ ಟೈ ಸಾಧಿಸಿತ್ತು. ತೆಲುಗು ಟೈಟಾನ್ಸ್‌ ಈವರೆಗೆ ಒಂದು ಪಂದ್ಯದಲ್ಲಷ್ಟೇ ಜಯ ಸಾಧಿಸಿದೆ.

Scroll to Top