
(ನ್ಯೂಸ್ ಕಡಬ) newskadaba.com, ಅ.06 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಕ್ಟೋಬರ್ 4ರಂದು ನಡೆಸಿದ ‘ಉಳಿಕೆ ಮೂಲ ವೃಂದ’ದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ತಾತ್ಕಾಲಿಕ ಕೀ ಉತ್ತರಗಳನ್ನು ಮಂಗಳವಾರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಅಭ್ಯರ್ಥಿಗಳು ಅಕ್ಟೋಬರ್ 8ರ ಬೆಳಿಗ್ಗೆ 10:30ರ ಒಳಗಾಗಿ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು. KEA Objections Portal ಮೂಲಕ ಲಾಗಿನ್ ಆಗಿ ಆಕ್ಷೇಪಣೆ ನಮೂದಿಸಬೇಕು.ಆಕ್ಷೇಪಣೆ ಸಲ್ಲಿಸುವಾಗ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಬೆಂಬಲಿತ ಆಧಾರ ದಾಖಲೆಗಳನ್ನು PDF ರೂಪದಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ.
ಪ್ರತಿಯೊಂದು ಆಕ್ಷೇಪಣೆಗೆ ₹25/- ಶುಲ್ಕ ಪಾವತಿಸಬೇಕಿದ್ದು, ಈ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ನಮೂದಿಸದ, ಅಪೂರ್ಣ ಅಥವಾ ಆಧಾರರಹಿತ ಮತ್ತು ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು. ವಿಷಯ ತಜ್ಞರ ಸಮಿತಿಯು ಆಕ್ಷೇಪಣೆಗಳನ್ನು ಪರಿಶೀಲಿಸಿ ಪ್ರಕಟಿಸುವ ಕೀ ಉತ್ತರಗಳೇ ಅಂತಿಮವಾಗಿರುತ್ತವೆ ಎಂದು ಕೆಇಎ ಸ್ಪಷ್ಟಪಡಿಸಿದೆ.




