ಆನ್‌ಲೈನ್ ಟ್ರೇಡಿಂಗ್ ದರೋಡೆ ಪ್ರಕರಣ: ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ಬಂಧನ!

(ನ್ಯೂಸ್‌ ಕಡಬ) newskadaba.com,ಜೂ.20 ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಕೇರಳ ಮೂಲದ ಯುವಕರನ್ನು ನಂಬಿಸಿ, ಅವರಿಂದ 20 ಲಕ್ಷಕ್ಕೂ ಅಧಿಕ ಹಣವನ್ನು ದರೋಡೆ ಮಾಡಿದ ಆರೋಪದ ಮೇಲೆ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಮೂವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳು. ಆನ್‌ಲೈನ್ ಟ್ರೇಡಿಂಗ್‌ನಲ್ಲಿ 25 ಲಕ್ಷ ರೂ. ಹೂಡಿಕೆ ಮಾಡಿದರೆ 50 ಲಕ್ಷ ರೂ. ನೀಡುವುದಾಗಿ ಕೇರಳದ ಯುವಕರಿಗೆ ಆಮಿಷ ಒಡ್ಡಲಾಗಿತ್ತು.ಇದನ್ನು ನಂಬಿ ಯುವಕರು ಮಡಿವಾಳದ […]

ಆನ್‌ಲೈನ್ ಟ್ರೇಡಿಂಗ್ ದರೋಡೆ ಪ್ರಕರಣ: ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ಬಂಧನ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಧೈರ್ಯವಿದ್ದರೆ ಕಾಂಗ್ರೆಸ್‌ಗೆ ಹೋಗಿ, ಬೆನ್ನಿಗೆ ಇರಿಯಬೇಡಿ: ಅಡ್ಡ ಮತದಾನ ಮಾಡಿದ ಶಾಸಕರಿಗೆ ಹೆಚ್.ಡಿ. ಕುಮಾರಸ್ವಾಮಿ ನೇರ ಎಚ್ಚರಿಕೆ!

(ನ್ಯೂಸ್‌ ಕಡಬ) newskadaba.com,ಜೂ.20 ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಪಕ್ಷದ ನಿಯಮ ಮೀರಿ ಅಡ್ಡ ಮತದಾನ ಮಾಡಿದ ಸ್ವಪಕ್ಷೀಯ ಶಾಸಕರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ಅನಿಸಿದರೆ ಧೈರ್ಯವಾಗಿ ಕಾಂಗ್ರೆಸ್‌ಗೆ ಹೋಗಿ, ಆದರೆ ಈ ರೀತಿ ಬೆನ್ನಿಗೆ ಇರಿಯುವ ಕೆಲಸ ಮಾಡಬೇಡಿ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಬಿಜೆಪಿ ಈಗಾಗಲೇ ಸಿ.ಟಿ. ರವಿ

ಧೈರ್ಯವಿದ್ದರೆ ಕಾಂಗ್ರೆಸ್‌ಗೆ ಹೋಗಿ, ಬೆನ್ನಿಗೆ ಇರಿಯಬೇಡಿ: ಅಡ್ಡ ಮತದಾನ ಮಾಡಿದ ಶಾಸಕರಿಗೆ ಹೆಚ್.ಡಿ. ಕುಮಾರಸ್ವಾಮಿ ನೇರ ಎಚ್ಚರಿಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ರಾಹಕರಿಗೆ ಶಾಕ್: ಶನಿವಾರ ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಳ್ಳಿ ದರ ಸ್ಥಿರ!

(ನ್ಯೂಸ್‌ ಕಡಬ) newskadaba.com,ಜೂ.20 : ಶುಕ್ರವಾರ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಶನಿವಾರ ಮತ್ತೆ ಭಾರಿ ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. 22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹20 ಏರಿಕೆಯಾಗಿದ್ದು, ಪ್ರಸ್ತುತ ₹13,390 ತಲುಪಿದೆ. (10 ಗ್ರಾಂಗೆ ₹1,33,900) 24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹22 ಹೆಚ್ಚಳವಾಗಿದ್ದು, ಪ್ರಸ್ತುತ ₹14,608 ತಲುಪಿದೆ. (10 ಗ್ರಾಂಗೆ ₹1,46,080) ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ

ಗ್ರಾಹಕರಿಗೆ ಶಾಕ್: ಶನಿವಾರ ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಳ್ಳಿ ದರ ಸ್ಥಿರ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೇತ್ರಾವತಿ ನದಿಯ ನಡುವೆ ಹಚ್ಚ ಹಸಿರಿನ ಬೆಟ್ಟದ ಮೇಲಿದೆ ಈ ಸುಂದರ ಕ್ಷೇತ್ರ ಇದರ ಇತಿಹಾಸ ನಿಮಗೊತ್ತೇ?

(ನ್ಯೂಸ್‌ ಕಡಬ) newskadaba.com,ಜೂ.20 : 3 ಸುತ್ತಲೂ ಹರಿಯುವ ನೇತ್ರಾವತಿ ನದಿಯ ನಡುವೆ, ಹಚ್ಚ ಹಸಿರಿನ ಬೆಟ್ಟದ ತುದಿಯಲ್ಲಿ ಕಂಗೊಳಿಸುತ್ತಿರುವ ಮಂಗಳೂರು ತಾಲೂಕಿನ ಇನ್ನೋಳಿ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ಕ್ಷೇತ್ರ ಭಕ್ತರು ಹಾಗೂ ಪ್ರಕೃತಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಧಾರ್ಮಿಕ ಮಹತ್ವದೊಂದಿಗೆ ನೈಸರ್ಗಿಕ ಸೌಂದರ್ಯವನ್ನೂ ಹೊಂದಿರುವ ಈ ಕ್ಷೇತ್ರಕ್ಕೆ ಸುಮಾರು 2,000 ವರ್ಷಗಳ ಸುದೀರ್ಘ ಇತಿಹಾಸವಿದೆ. ಟಿಪ್ಪು ಸುಲ್ತಾನನ ಕಾಲದ ಫಿರಂಗಿ ದಾಳಿಯಿಂದ ಈ ಕ್ಷೇತ್ರ ಹಾನಿಗೊಳಗಾಗಿತ್ತು. ಫಿರಂಗಿ ಸಿಡಿಸಿದ ಆ ಸ್ಥಳವೇ ಇಂದು ‘ಪರಂಗಿಪೇಟೆ’ ಎಂದು ಪ್ರಸಿದ್ಧಿಯಾಗಿದೆ.ದೀರ್ಘಕಾಲ

ನೇತ್ರಾವತಿ ನದಿಯ ನಡುವೆ ಹಚ್ಚ ಹಸಿರಿನ ಬೆಟ್ಟದ ಮೇಲಿದೆ ಈ ಸುಂದರ ಕ್ಷೇತ್ರ ಇದರ ಇತಿಹಾಸ ನಿಮಗೊತ್ತೇ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಯಲ್ ಎನ್‌ಫೀಲ್ಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲಿಯಾ C6’ ಭಾರತದಲ್ಲಿ ಬಿಡುಗಡೆ!

(ನ್ಯೂಸ್‌ ಕಡಬ) newskadaba.com,ಜೂ.20: ನವದೆಹಲಿ: ಕ್ಲಾಸಿಕ್ ಬೈಕ್‌ಗಳ ಖ್ಯಾತಿಯ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಹೊಸ ಉಪ-ಬ್ರಾಂಡ್ ‘ಫ್ಲೈಯಿಂಗ್ ಫ್ಲಿಯಾ’ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ‘ಫ್ಲೈಯಿಂಗ್ ಫ್ಲಿಯಾ C6’ ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೊದಲ ಬ್ಯಾಚ್ ವಿತರಣೆಯನ್ನು ಆರಂಭಿಸಿದೆ.ಮೈಲೇಜ್ & ಬ್ಯಾಟರಿ: 3.91 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 154 ಕಿಲೋಮೀಟರ್ ಚಲಿಸಬಲ್ಲದು. ಕೇವಲ 65 ನಿಮಿಷಗಳಲ್ಲಿ ಶೇ. 20 ರಿಂದ 80 ರಷ್ಟು ಚಾರ್ಜ್ ಆಗಲಿದ್ದು, ಪೂರ್ಣ

ರಾಯಲ್ ಎನ್‌ಫೀಲ್ಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲಿಯಾ C6’ ಭಾರತದಲ್ಲಿ ಬಿಡುಗಡೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇನ್ಮುಂದೆ 9 ಮತ್ತು 10ನೇ ತರಗತಿಗಳಿಗೂ ಪಿಯು ಉಪನ್ಯಾಸಕರ ಬೋಧನೆ ಕಡ್ಡಾಯ ನಿಯಮಕ್ಕೆ ತಿದ್ದುಪಡಿ

(ನ್ಯೂಸ್‌ ಕಡಬ) newskadaba.com,ಜೂ.20: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎದುರಾಗಿರುವ ಶಿಕ್ಷಕರ ಕೊರತೆಯನ್ನು ನಿವಾರಿಸಲು ಕರ್ನಾಟಕ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರು 9 ಮತ್ತು 10ನೇ ತರಗತಿಗಳಿಗೂ ಪಾಠ ಮಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.’ಪದವಿ ಪೂರ್ವ ಶಿಕ್ಷಣ ನೇಮಕಾತಿ ನಿಯಮಗಳು-2013′ ಕ್ಕೆ ಸರ್ಕಾರ ಮಹತ್ವದ ತಿದ್ದುಪಡಿ ತಂದಿದ್ದು, ಇದರ ಕರಡು ಪ್ರತಿಯನ್ನು ಈಗಾಗಲೇ ಪ್ರಕಟಿಸಿದೆ. ಈ ಕರಡು ನಿಯಮದ ಕುರಿತು ಸಾರ್ವಜನಿಕರು ಅಥವಾ ಸಂಬಂಧಪಟ್ಟವರಿಂದ ಆಕ್ಷೇಪಣೆ ಸಲ್ಲಿಸಲು 7

ಇನ್ಮುಂದೆ 9 ಮತ್ತು 10ನೇ ತರಗತಿಗಳಿಗೂ ಪಿಯು ಉಪನ್ಯಾಸಕರ ಬೋಧನೆ ಕಡ್ಡಾಯ ನಿಯಮಕ್ಕೆ ತಿದ್ದುಪಡಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೈಸ್ಕೂಲ್ ಶಿಕ್ಷಕರ ಕೊರತೆ ನೀಗಿಸಲು ಮಾಸ್ಟರ್ ಪ್ಲಾನ್: ಪಿಯು ಉಪನ್ಯಾಸಕರಿಗೆ 9, 10ನೇ ತರಗತಿ ಬೋಧನೆ ಕಡ್ಡಾಯ

(ನ್ಯೂಸ್‌ ಕಡಬ) newskadaba.com,ಜೂ.20: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎದುರಾಗಿರುವ ಶಿಕ್ಷಕರ ಕೊರತೆಯನ್ನು ನಿವಾರಿಸಲು ಕರ್ನಾಟಕ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕರು 9 ಮತ್ತು 10ನೇ ತರಗತಿಗಳಿಗೂ ಪಾಠ ಮಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.’ಪದವಿ ಪೂರ್ವ ಶಿಕ್ಷಣ ನೇಮಕಾತಿ ನಿಯಮಗಳು-2013′ ಕ್ಕೆ ಸರ್ಕಾರ ಮಹತ್ವದ ತಿದ್ದುಪಡಿ ತಂದಿದ್ದು, ಇದರ ಕರಡು ಪ್ರತಿಯನ್ನು ಈಗಾಗಲೇ ಪ್ರಕಟಿಸಿದೆ. ಈ ಕರಡು ನಿಯಮದ ಕುರಿತು ಸಾರ್ವಜನಿಕರು ಅಥವಾ ಸಂಬಂಧಪಟ್ಟವರಿಂದ ಆಕ್ಷೇಪಣೆ ಸಲ್ಲಿಸಲು 7

ಹೈಸ್ಕೂಲ್ ಶಿಕ್ಷಕರ ಕೊರತೆ ನೀಗಿಸಲು ಮಾಸ್ಟರ್ ಪ್ಲಾನ್: ಪಿಯು ಉಪನ್ಯಾಸಕರಿಗೆ 9, 10ನೇ ತರಗತಿ ಬೋಧನೆ ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರೈತರ ಖಾತೆಗೆ ಇಂದು ‘ಪಿಎಂ ಕಿಸಾನ್’ ಹಣ ಜಮೆ: 23ನೇ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com,ಜೂ.20 ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ದೇಶದ 9.44 ಕೋಟಿಗೂ ಹೆಚ್ಚು ಅರ್ಹ ರೈತರ ಖಾತೆಗೆ ತಲಾ 2,000 ರೂಪಾಯಿಯಂತೆ ಒಟ್ಟು ₹18,880 ಕೋಟಿಗೂ ಅಧಿಕ ಹಣ ನೇರವಾಗಿ ಜಮೆಯಾಗಲಿದೆ. ಪಶ್ಚಿಮ ಬಂಗಾಳದ ತಾರಕೇಶ್ವರದಲ್ಲಿ ಶನಿವಾರ ಮಧ್ಯಾಹ್ನ 3:45 ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಕಂತು ಬಿಡುಗಡೆಯಾಗಲಿದೆ.ಪಶ್ಚಿಮ

ರೈತರ ಖಾತೆಗೆ ಇಂದು ‘ಪಿಎಂ ಕಿಸಾನ್’ ಹಣ ಜಮೆ: 23ನೇ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರೈಲ್ವೆ ನಿಯಮ ಪರಿಷ್ಕರಣೆ: ಜುಲೈ 1 ರಿಂದ ಟಿಕೆಟ್‌ರಹಿತ ಪ್ರಯಾಣಕ್ಕೆ ಬೀಳಲಿದೆ ದುಪ್ಪಟ್ಟು ದಂಡ!

(ನ್ಯೂಸ್‌ ಕಡಬ) newskadaba.com,ಜೂ.20 ನವದೆಹಲಿ: ರೈಲು ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಮತ್ತು ರೈಲ್ವೆ ಆವರಣದಲ್ಲಿ ಶಿಸ್ತು ಕಾಪಾಡಲು ಭಾರತೀಯ ರೈಲ್ವೆ ಇಲಾಖೆಯು ವಿವಿಧ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಮಹಿಳೆಯರಿಗಾಗಿ ಮೀಸಲಾದ ಬೋಗಿಗಳಿಗೆ ಪುರುಷ ಪ್ರಯಾಣಿಕರು ಅನಧಿಕೃತವಾಗಿ ಪ್ರವೇಶಿಸಿದರೆ ಗರಿಷ್ಠ ₹2,500 ವರೆಗೆ ದಂಡ ವಿಧಿಸಲಾಗುತ್ತದೆ.ರೈಲ್ವೆ ಆವರಣ ಅಥವಾ ರೈಲುಗಳಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ಮಾಡುವುದು ಅಥವಾ ಭಿಕ್ಷೆ ಬೇಡುವುದು ಕಂಡುಬಂದಲ್ಲಿ ₹2,000 ದಂಡ ಪಾವತಿಸಬೇಕಾಗುತ್ತದೆ. ರೈಲಿನಲ್ಲಿ ಅಪಾಯಕಾರಿ ಅಥವಾ ನಿಷೇಧಿತ

ರೈಲ್ವೆ ನಿಯಮ ಪರಿಷ್ಕರಣೆ: ಜುಲೈ 1 ರಿಂದ ಟಿಕೆಟ್‌ರಹಿತ ಪ್ರಯಾಣಕ್ಕೆ ಬೀಳಲಿದೆ ದುಪ್ಪಟ್ಟು ದಂಡ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲಂಡನ್ ಸಮೀಪ ಹಳಿ ಮೇಲೆ ದುರಂತ: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಬಲಿ, ಹಲವರು ಗಂಭೀರ

(ನ್ಯೂಸ್‌ ಕಡಬ) newskadaba.com,ಜೂ.20: ಬ್ರಿಟನ್‌ನ ಲಂಡನ್ ನಗರದ ಉತ್ತರ ಭಾಗದಲ್ಲಿರುವ ಬೆಡ್‌ಫೋರ್ಡ್ ಪ್ರದೇಶದ ಸಮೀಪ ಶುಕ್ರವಾರ ಸಂಜೆ ಎರಡು ಪ್ಯಾಸೆಂಜರ್ ರೈಲುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಓರ್ವ ರೈಲು ಚಾಲಕ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶುಕ್ರವಾರ ಸಂಜೆ ಸುಮಾರು 5:15ರ ವೇಳೆಗೆ ಬೆಡ್‌ಫೋರ್ಡ್ ಪಟ್ಟಣದ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಎರಡೂ ರೈಲುಗಳು ದಕ್ಷಿಣ ದಿಕ್ಕಿನಲ್ಲಿ ಲಂಡನ್‌ನ ಸೇಂಟ್ ಪ್ಯಾಂಕ್ರಾಸ್ ನಿಲ್ದಾಣದತ್ತ ಸಂಚರಿಸುತ್ತಿದ್ದವು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ

ಲಂಡನ್ ಸಮೀಪ ಹಳಿ ಮೇಲೆ ದುರಂತ: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಬಲಿ, ಹಲವರು ಗಂಭೀರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top