ಕಲ್ಲಡ್ಕ: ಸಿಕ್ಕಿದ ಪರ್ಸ್ ಅನ್ನು ವಾರಸುದಾರರಿಗೆ ತಲುಪಿಸಿ ಮಾನವೀಯತೆ ಮೆರೆದ ಆಟೋ ಚಾಲಕ

(ನ್ಯೂಸ್‌ ಕಡಬ) newskadaba.com,  ಜು.04 ಬಂಟ್ವಾಳ: ಕಲ್ಲಡ್ಕದ ಸರ್ವಿಸ್ ರಸ್ತೆಯಲ್ಲಿ ಕಳೆದುಹೋಗಿದ್ದ ನಗದು ಮತ್ತು ಪ್ರಮುಖ ದಾಖಲೆಗಳಿದ್ದ ಪರ್ಸ್ ಅನ್ನು ಅದರ ನಿಜವಾದ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಆಟೋ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಉಪ್ಪಿನಂಗಡಿ ಸಮೀಪದ ಪೆರ್ನೆಯ ಆಟೋ ಚಾಲಕ ರುದ್ರೇಶ್ ಪೆರ್ನೆ ಅವರಿಗೆ ಕಲ್ಲಡ್ಕದಲ್ಲಿ ಬಿದ್ದಿದ್ದ ಪರ್ಸ್ ಒಂದು ದೊರೆತಿತ್ತು.ಪರ್ಸ್‌ನಲ್ಲಿದ್ದ ಮಾಹಿತಿಯ ಆಧಾರದ ಮೇಲೆ ರುದ್ರೇಶ್ ಅವರು ತಕ್ಷಣವೇ ಅದರ ಮಾಲೀಕರನ್ನು ಸಂಪರ್ಕಿಸಿದ್ದಾರೆ.

ಮಾಲೀಕರಾದ ಬೆಂಗಳೂರು ಮೂಲದ ಹಫೀಜ್ (ಮೇಲ್ಕಾರ್‌ನ ಭಗವತಿ ಸ್ಟೀಲ್ಸ್ ಉದ್ಯೋಗಿ) ಅವರನ್ನು ಕಲ್ಲಡ್ಕ ಮಸೀದಿಯ ಬಳಿ ಕರೆಸಿ, ಪರ್ಸ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.

Scroll to Top