ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಮುಗಿದರೂ ಕತ್ತಲಲ್ಲೇ ರಸ್ತೆ; ಸವಾರರ ಆತಂಕ



(ನ್ಯೂಸ್‌ ಕಡಬ) newskadaba.com, ಜು.03 : ಬಹುನಿರೀಕ್ಷಿತ ಉಡುಪಿಯ ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದ್ದರೂ, ಇಲ್ಲಿನ ಬೀದಿ ದೀಪಗಳು ರಾತ್ರಿಯ ವೇಳೆ ಕಾರ್ಯನಿರ್ವಹಿಸುತ್ತಿಲ್ಲ.







ಅಂಡರ್‌ಪಾಸ್ ಹಾಗೂ ಸರ್ವಿಸ್ ರಸ್ತೆಗಳು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳ ಸುರಕ್ಷತೆಗೆ ಆತಂಕ ಎದುರಾಗಿದೆ.ಮಳೆಗಾಲದ ಕಾರಣ ರಸ್ತೆ ಬದಿಯ ಹೊಂಡ ಹಾಗೂ ನೀರು ನಿಂತಿರುವ ಜಾಗಗಳು ಕತ್ತಲಲ್ಲಿ ಕಾಣಿಸದೆ ಅಪಘಾತಗಳ ಭಯ ಹೆಚ್ಚಾಗಿದೆ.






ಮೂಲಸೌಕರ್ಯ ಸಿದ್ಧವಿದ್ದರೂ ಅತ್ಯಗತ್ಯ ಸೌಲಭ್ಯ ಕಲ್ಪಿಸದ ಅಧಿಕಾರಿಗಳ ನಡೆಗೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣವೇ ವಿದ್ಯುತ್ ದೀಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

error: Content is protected !!
Scroll to Top