ಶಿರಾಡಿ: ಆಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ; ಅಪಘಾತದ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧ

(ನ್ಯೂಸ್‌ ಕಡಬ) newskadaba.com,  ಜು.04 ಉಪ್ಪಿನಂಗಡಿ: ರಸ್ತೆ ಅಪಘಾತದ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಿರಾಡಿ ಗ್ರಾಮದ ಪಿ.ವಿ. ಜೋಸ್ (64) ಎಂಬುವವರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಗುರುವಾರ ಮನೆಯಲ್ಲಿದ್ದ ರಬ್ಬರ್ ಕೃಷಿಯ ಆಸಿಡ್ ಸೇವಿಸಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Scroll to Top