ಮಂಗಳೂರು: ವಿಶ್ವದ ಮೊದಲ ‘ಎಐ ಕಾರ್ಡ್’ ಡೀಲರ್‌ ಆಗಲು ಸುವರ್ಣ ಅವಕಾಶ

(ನ್ಯೂಸ್‌ ಕಡಬ) newskadaba.com ಆ. 19 ಮಂಗಳೂರು: ಕೃತಕ ಬುದ್ಧಿಮತ್ತೆಯು ವಿಶ್ವದ ಭವಿಷ್ಯವಾಗಿರುವ ಈ ಕಾಲದಲ್ಲಿ, ಎಐ ಮೇಲಿನ ಹೂಡಿಕೆಯೆಂದರೆ ಚಿನ್ನದೇ ಫಸಲೇ ಸರಿ. ಇಂತಹ ಅವಕಾಶವೊಂದು ಈಗ ತೆರೆದುಕೊಂಡಿದೆ. ಶಿಕ್ಷಣದಲ್ಲಿ ಎಐ ಅಳವಡಿಕೆಯ ಚೊಚ್ಚಲ ಹೆಜ್ಜೆಯಾದ ʻವಿಶ್ವದ ಮೊದಲ ಎಐ ಕಾರ್ಡ್ʼ ಹೆಗ್ಗಳಿಕೆಯ ʻಯತಿಕಾರ್ಪ್ ಎಐ ಕಾರ್ಡ್ʼ ಇದೀಗ ರಾಜ್ಯಾದ್ಯಂತ ಡೀಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಒಂದು ಲಕ್ಷಕ್ಕೂ ಅಧಿಕವಾದ ಫಲಾನುಭವಿಗಳು ಈ ಕಾರ್ಡ್‌ನ ಬಳಕೆದಾರರಾಗಿದ್ದಾರೆ. ಇದೀಗ ಸಂಸ್ಥೆಯು 2ನೇ ಹಂತದ […]

ಮಂಗಳೂರು: ವಿಶ್ವದ ಮೊದಲ ‘ಎಐ ಕಾರ್ಡ್’ ಡೀಲರ್‌ ಆಗಲು ಸುವರ್ಣ ಅವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವರುಣನ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರ: ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಹಲವು ನದಿಗಳು, ಪ್ರವಾಹದ ಎಚ್ಚರಿಕೆ

ನ್ಯೂಸ್‌ ಕಡಬ) newskadaba.com ಆ. 19.  ಬೆಂಗಳೂರು: ಕೊಡಗು, ಮಲೆನಾಡು, ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಅಧಿಕ ಮಳೆಯ ಪರಿಣಾಮವಾಗಿ ರಾಜ್ಯದ ಹಲವು ನದಿಗಳು, ಜಲಾಶಯಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ವರುಣನ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಹಲವಾರು ಸೇತುವೆಗಳು ಮುಳುಗಡೆಯಾಗಿದ್ದು, ಗದಗ ಜಿಲ್ಲೆಯ ಮಲಪ್ರಭಾ ಜಲಾನಯನ ಪ್ರದೇಶದ ಅನೇಕ ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮಂಡ್ಯ ಜಿಲ್ಲಾಡಳಿತವು

ವರುಣನ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರ: ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಹಲವು ನದಿಗಳು, ಪ್ರವಾಹದ ಎಚ್ಚರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

KSRTC ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗರಿ: 504 ಕೋಟಿ ಮಹಿಳೆಯರ ಪ್ರಯಾಣ!

(ನ್ಯೂಸ್‌ ಕಡಬ) newskadaba.com ಆ. 19.  ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ (ಕೆಎಸ್ಆರ್ ಟಿಸಿ), ಕಲ್ಯಾಣ ಕರ್ನಾಟಕ, ಈಶಾನ್ಯ ಕರ್ನಾಟಕ ಹಾಗೂ ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಸಂಸ್ಥೆಗಳ ಬಸ್ಸುಗಳಲ್ಲಿ 2023ರ ಜೂನ್ ನಿಂದ 2025ರ ಜುಲೈವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರನ್ನು ಹೊತ್ತೊಯ್ದ ದಾಖಲೆಗೆ ಭಾಜನವಾಗಿದೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಎಂಬ ಸಂಸ್ಥೆಯು ಈ ಬಗ್ಗೆ ಅಧ್ಯಯನ ಮಾಡಿ, ಕೆಎಸ್ ಆರ್ ಟಿಸಿಗೆ ದಾಖಲೆಯ ಪ್ರಮಾಣ ಪತ್ರ ನೀಡಿದೆ.

KSRTC ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗರಿ: 504 ಕೋಟಿ ಮಹಿಳೆಯರ ಪ್ರಯಾಣ! Read More »

ಕರ್ನಾಟಕ

ಮೈಸೂರು ದಸರಾ- 11 ಸಾವಿರ ಆಸನಗಳ ಕಡಿತಕ್ಕೆ ಮುಂದಾದ ಜಿಲ್ಲಾಡಳಿತ

(ನ್ಯೂಸ್ ಕಡಬ) newskadaba.com ಮೈಸೂರು, ಆ. 19. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವೇಳೆ ಅರಮನೆ ಆವರಣದಲ್ಲಿ ಗೊಂದಲವನ್ನು ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ, ಈ ಬಾರಿ 11,600 ಆಸನಗಳ ಕಡಿತಕ್ಕೆ ಮುಂದಾಗಿದೆ.   ಹೌದು, ಕಳೆದ ಬಾರಿ 59 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಆಸನಗಳ ಸಂಖ್ಯೆ 48 ಸಾವಿರದ ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಅವಘಡದಿಂದ ಎಚ್ಚೆತ್ತಿರುವ ಸರಕಾರ

ಮೈಸೂರು ದಸರಾ- 11 ಸಾವಿರ ಆಸನಗಳ ಕಡಿತಕ್ಕೆ ಮುಂದಾದ ಜಿಲ್ಲಾಡಳಿತ Read More »

ಕರ್ನಾಟಕ

ಮಿಸ್‌ ಯುನಿವರ್ಸ್‌ ಇಂಡಿಯಾ 2025ರ ಕಿರೀಟ ಮಣಿಕಾ ವಿಶ್ವಕರ್ಮ ಮುಡಿಗೆ

(ನ್ಯೂಸ್‌ ಕಡಬ) newskadaba.com ಆ. 19.  ಜೈಪುರ: ಆ.18 ನೇ ಸೋಮವಾರದಂದು ರಾತ್ರಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2025 ಸ್ಪರ್ಧೆಯ ಕಿರೀಟವನ್ನು ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2024 ರಿಯಾ ಸಿಂಘಾ ಮಣಿಕಾ ವಿಶ್ವಕರ್ಮಗೆ ಕಿರೀಟ ತೊಡಿಸಿದ್ದಾರೆ. ಈ ಗೆಲುವಿನೊಂದಿಗೆ, ಈ ನವೆಂಬರ್‌ನಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಣಿಕಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಜೇತರ ವೇದಿಕೆಯಲ್ಲಿ ಮಣಿಕಾ ವಿಶ್ವಕರ್ಮ ಅವರೊಂದಿಗೆ ಮೊದಲ

ಮಿಸ್‌ ಯುನಿವರ್ಸ್‌ ಇಂಡಿಯಾ 2025ರ ಕಿರೀಟ ಮಣಿಕಾ ವಿಶ್ವಕರ್ಮ ಮುಡಿಗೆ Read More »

ಬ್ರೇಕಿಂಗ್ ನ್ಯೂಸ್

ಮುಂಬೈಯಲ್ಲಿ ವರುಣನ ಆರ್ಭಟ: ವಿಮಾನ ಹಾರಾಟದಲ್ಲಿ ವ್ಯತ್ಯಯ

(ನ್ಯೂಸ್‌ ಕಡಬ) newskadaba.com, ಆ.19: ಮುಂಬೈಯಲ್ಲಿ ವರ್ಷಾಧಾರೆಯಾಗುತ್ತಿದ್ದು, ತಗ್ಗುಪ್ರದೇಶಗಳು ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವಾರು ಪ್ರದೇಶಗಳಲ್ಲಿ 200 ಮೀ.ಮೀ.ಗಿಂತಲೂ ಅಧಿಕ ಮಳೆಯಾಗಿದೆ. ಪೂರ್ವ ಉಪನಗರದ ಮಿಕ್ರೋಲಿಯಲ್ಲಿ ಅತೀ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂಬೈಯಲ್ಲಿ ಭಾರೀ ಮಳೆಯ ಪರಿಣಾಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಗ್ಗೆ ಇಂಡಿಗೊ ಪ್ರಯಾಣಿಕರಿಗೆ ಸೂಚನೆ ನೀಡಿದೆ. ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗಗಳಲ್ಲಿ ನೀರು ತುಂಬಿಕೊಂಡಿರುವುದರಿಂದ

ಮುಂಬೈಯಲ್ಲಿ ವರುಣನ ಆರ್ಭಟ: ವಿಮಾನ ಹಾರಾಟದಲ್ಲಿ ವ್ಯತ್ಯಯ Read More »

ರಾಷ್ಟ್ರೀಯ ನ್ಯೂಸ್

ನಟ ದರ್ಶನ್ ಬಳ್ಳಾರಿ ಶಿಫ್ಟ್ ವಿಚಾರ- ಆ.23ಕ್ಕೆ ವಿಚಾರಣೆ

(ನ್ಯೂಸ್‌ ಕಡಬ) newskadaba.com ಆ. 19. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್‌ ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಆ.23ಕ್ಕೆ ಮುಂದೂಡಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು, ದರ್ಶನ್ ಪರ ವಕೀಲರಿಗೆ ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಮುಂದಿನ 23ಕ್ಕೆ ವಿಚಾರಣೆಯನ್ನು ಮುಂದೂಡಿದರು. ಇನ್ನು ಸರ್ಕಾರಿ ಪರ ವಕೀಲರು ಹಾಜರಾಗಿ, ಕೊಲೆ ಕೇಸ್‌ ನಲ್ಲಿ ಜಾಮೀನು ಸಿಗುವ ಹಿಂದೆ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ಯಾವ್ಯಾವ ಜೈಲಿನಲ್ಲಿದ್ರು

ನಟ ದರ್ಶನ್ ಬಳ್ಳಾರಿ ಶಿಫ್ಟ್ ವಿಚಾರ- ಆ.23ಕ್ಕೆ ವಿಚಾರಣೆ Read More »

ಕರ್ನಾಟಕ

ಕಡಬ: ಪವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ ಬರೆದ ಯುವತಿ

(ನ್ಯೂಸ್‌ ಕಡಬ) newskadaba.com ಆ. 19. ಪವಿತ್ರ ಕುರಾನ್ ನ 30 ಕಾಂಡ(ಜುಝ್)ಗಳನ್ನು ಕೈಯಲ್ಲಿ ಬರೆಯುವ ಮೂಲಕ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಪುತ್ತೂರು ತಾಲೂಕಿನ ಬೈತಡ್ಕ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್‌ಲ ಇಸ್ಮಾಯಿಲ್ ಅವರು ಗಮನ ಸೆಳೆದಿದ್ದಾರೆ.   2021ರ ಜನವರಿಯಲ್ಲಿ ಕುರಾನ್ ಬರವಣಿಗೆಯನ್ನು ಆರಂಭಿಸಿದ್ದ ಅವರು 2025ರ ಆಗಸ್ಟ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಸಜ್‌ಲ ಅವರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು.

ಕಡಬ: ಪವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ ಬರೆದ ಯುವತಿ Read More »

ಕರಾವಳಿ

ರೈಲಿನಲ್ಲಿ ಟಿಕೆಟ್ ತಪಾಸಣೆ- 2.37 ಕೋಟಿ ರೂ. ದಂಡ ಸಂಗ್ರಹ

(ನ್ಯೂಸ್‌ ಕಡಬ) newskadaba.com ಆ. 19. ಟಿಕೆಟ್ ರಹಿತ ಪ್ರಯಾಣವನ್ನು ತಡೆಯಲು ಮತ್ತು ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಕೊಂಕಣ ರೈಲ್ವೆ ತನ್ನ ಟಿಕೆಟ್ ಪರಿಶೀಲನಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದು, 2025-26ರ ಆರ್ಥಿಕ ವರ್ಷದ ಆರಂಭದಿಂದ ರೈಲ್ವೆಯು 3,765 ಟಿಕೆಟ್ ಪರಿಶೀಲನಾ ಡ್ರೈವ್‌ಗಳನ್ನು ನಡೆಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.   ಈ ಕಾರ್ಯಾಚರಣೆಗಳ ಸಮಯದಲ್ಲಿ, ಅಧಿಕಾರಿಗಳು 40,602 ಅನಧಿಕೃತ ಅಥವಾ ಅನಿಯಮಿತ ಪ್ರಯಾಣದ ಪ್ರಕರಣಗಳನ್ನು ಪತ್ತೆಹಚ್ಚಿ, ಒಟ್ಟು 2,37,11,161 ರೂ. ದಂಡ ಸಂಗ್ರಹಿಸಿದ್ದಾರೆ. ಮಾನ್ಯ ಟಿಕೆಟ್ ಹೊಂದಿರುವವರಿಗೆ ಸುರಕ್ಷಿತ

ರೈಲಿನಲ್ಲಿ ಟಿಕೆಟ್ ತಪಾಸಣೆ- 2.37 ಕೋಟಿ ರೂ. ದಂಡ ಸಂಗ್ರಹ Read More »

ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ಅಶ್ಲೀಲ-ಬೆದರಿಕೆ ಸಂದೇಶ: ಇಬ್ಬರು ಆರೋಪಿಗಳು ವಶಕ್ಕೆ

(ನ್ಯೂಸ್‌ ಕಡಬ) newskadaba.com ಆ. 19.  ಬೆಂಗಳೂರು: ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಮತ್ತು ಬೆದರಿಕೆಯೊಡ್ಡಿದ್ದ ಆರೋಪದಡಿ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರನ್ನು ಉಡುಪಿ ಮೂಲದ ಆದರ್ಶ್ ಮತ್ತು ಸಂಜಯ್ ಎಂದು ಗುರುತಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇದೇ ಪ್ರಕರಣದಲ್ಲಿ ಆಗಸ್ಟ್ 4ರಂದು ಭುವನ್‌ ಗೌಡ ಹಾಗೂ ರಾಜೇಶ್ ಎಂಬುವವರನ್ನು ಬಂಧಿಸಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ

ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾಗೆ ಅಶ್ಲೀಲ-ಬೆದರಿಕೆ ಸಂದೇಶ: ಇಬ್ಬರು ಆರೋಪಿಗಳು ವಶಕ್ಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ
Scroll to Top