ಮಿಸ್‌ ಯುನಿವರ್ಸ್‌ ಇಂಡಿಯಾ 2025ರ ಕಿರೀಟ ಮಣಿಕಾ ವಿಶ್ವಕರ್ಮ ಮುಡಿಗೆ

(ನ್ಯೂಸ್‌ ಕಡಬ) newskadaba.com ಆ. 19.  ಜೈಪುರ: ಆ.18 ನೇ ಸೋಮವಾರದಂದು ರಾತ್ರಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2025 ಸ್ಪರ್ಧೆಯ ಕಿರೀಟವನ್ನು ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುಡಿಗೇರಿಸಿಕೊಂಡಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2024 ರಿಯಾ ಸಿಂಘಾ ಮಣಿಕಾ ವಿಶ್ವಕರ್ಮಗೆ ಕಿರೀಟ ತೊಡಿಸಿದ್ದಾರೆ. ಈ ಗೆಲುವಿನೊಂದಿಗೆ, ಈ ನವೆಂಬರ್‌ನಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಣಿಕಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ವಿಜೇತರ ವೇದಿಕೆಯಲ್ಲಿ ಮಣಿಕಾ ವಿಶ್ವಕರ್ಮ ಅವರೊಂದಿಗೆ ಮೊದಲ ರನ್ನರ್ ಅಪ್ ಆಗಿ ಉತ್ತರ ಪ್ರದೇಶದ ತಾನ್ಯಾ ಶರ್ಮಾ, ಎರಡನೇ ರನ್ನರ್ ಅಪ್ ಆಗಿ ಹರಿಯಾಣದ ಮೆಹಕ್ ಧಿಂಗ್ರಾ ಮತ್ತು ಮೂರನೇ ರನ್ನರ್ ಅಪ್ ಆಗಿ ಅಮಿಶಿ ಕೌಶಿಕ್ ಇದ್ದರು.

Scroll to Top