10 ವರ್ಷಗಳ ನಂತರ ಕೊನೆಗೂ ಉದ್ಘಾಟನೆಗೊಂಡ ಪಂಪ್ ವೆಲ್ ➤ ಸದ್ದುಮಾಡುತ್ತಿದೆ ಫ್ಲೈಓವರ್ ಉದ್ಘಾಟನಾ ಟ್ರೋಲ್ ವೀಡಿಯೋ

(ನ್ಯೂಸ್ ಕಡಬ) newskadaba.com ಕಡಬ, ಡಿ.31. ಕಳೆದ 09 ವರ್ಷಗಳಿಂದ ಕಾಮಗಾರಿ ಮುಕ್ತಾಯವಾಗದೆ ಹಲವಾರು ಸಲ ಉದ್ಘಾಟನೆಗೆ ದಿನ ನಿಗದಿಯಾಗಿ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಡುತ್ತಿರುವ ಮಂಗಳೂರಿನ ಪಂಪ್ ವೆಲ್ ಫ್ಲೈಓವರ್ ಟ್ರೋಲಿಗರ ಪಾಲಿಗೆ ಸ್ವರ್ಗವಾಗುತ್ತಿದ್ದು, ಸಂಸದರ ಮಾತು ಈ ಬಾರಿಯೂ ಈಡೇರುವಂತೆ ಕಾಣುತ್ತಿಲ್ಲ.

2020 ರ ಜನವರಿ ಮೊದಲ ವಾರದಲ್ಲಿ ಪಂಪ್ ವೆಲ್ ಫ್ಲೈಓವರ್ ಉದ್ಘಾಟನೆ ನಡೆಯಲಿದೆ‌ ಎಂದು ಈ ಹಿಂದೆ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್ ಕಟೀಲ್ ಮುಹೂರ್ತ ಫಿಕ್ಸ್ ಮಾಡಿದ್ದು, ಕಾಮಗಾರಿಯು ಇನ್ನೂ ಮುಗಿಯದ ಕಾರಣ ಈ ಸಲವೂ ಉದ್ಘಾಟನಾ ಭಾಗ್ಯ ಕಾಣುತ್ತಿಲ್ಲ. ಎಲ್ಲೆಡೆ ಈ ಬಗ್ಗೆ ಟ್ರೋಲ್ ನಡೆಯುತ್ತಿದ್ದರೂ, ತಂಡವೊಂದು ಪಂಪ್ ವೆಲ್ ಫ್ಲೈಓವರನ್ನು ಉದ್ಘಾಟನೆ ಮಾಡುವಂತಹ ಟ್ರೋಲ್ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ‌. ವೀಡಿಯೋವನ್ನು ವೀಕ್ಷಿಸಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ

Scroll to Top