ಮಂಗಳೂರು: ವಿಶ್ವದ ಮೊದಲ ‘ಎಐ ಕಾರ್ಡ್’ ಡೀಲರ್‌ ಆಗಲು ಸುವರ್ಣ ಅವಕಾಶ



(ನ್ಯೂಸ್‌ ಕಡಬ) newskadaba.com ಆ. 19 ಮಂಗಳೂರು: ಕೃತಕ ಬುದ್ಧಿಮತ್ತೆಯು ವಿಶ್ವದ ಭವಿಷ್ಯವಾಗಿರುವ ಈ ಕಾಲದಲ್ಲಿ, ಎಐ ಮೇಲಿನ ಹೂಡಿಕೆಯೆಂದರೆ ಚಿನ್ನದೇ ಫಸಲೇ ಸರಿ. ಇಂತಹ ಅವಕಾಶವೊಂದು ಈಗ ತೆರೆದುಕೊಂಡಿದೆ. ಶಿಕ್ಷಣದಲ್ಲಿ ಎಐ ಅಳವಡಿಕೆಯ ಚೊಚ್ಚಲ ಹೆಜ್ಜೆಯಾದ ʻವಿಶ್ವದ ಮೊದಲ ಎಐ ಕಾರ್ಡ್ʼ ಹೆಗ್ಗಳಿಕೆಯ ʻಯತಿಕಾರ್ಪ್ ಎಐ ಕಾರ್ಡ್ʼ ಇದೀಗ ರಾಜ್ಯಾದ್ಯಂತ ಡೀಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನಿಸಿದೆ.







ಈಗಾಗಲೇ ಮೊದಲ ಹಂತದಲ್ಲಿ ಒಂದು ಲಕ್ಷಕ್ಕೂ ಅಧಿಕವಾದ ಫಲಾನುಭವಿಗಳು ಈ ಕಾರ್ಡ್‌ನ ಬಳಕೆದಾರರಾಗಿದ್ದಾರೆ. ಇದೀಗ ಸಂಸ್ಥೆಯು 2ನೇ ಹಂತದ ವಿಸ್ತರಣಾ ಯೋಜನೆ ಹಾಕಿಕೊಂಡಿರುತ್ತದೆ.ಹಣವನ್ನು ಪಡೆಯಲು ಕೆಲವೇ ಹೆಜ್ಜೆಗಳ ದೂರದಲ್ಲಿರುವ ಈ ಕಾರ್ಡ್ ಮೇಲಿನ ಹೂಡಿಕೆ ಸುರಕ್ಷಿತ, ಲಾಭದಾಯಕ ಅಷ್ಟೇ ಆಗಿರದೆ, ಸಾಮಾನ್ಯ ಜನರಿಗೂ ಟೆಕ್ ಉದ್ಯಮಿಯಾಗಲು ವೇದಿಕೆ ಕಲ್ಪಿಸಿದೆ






ತಿಕಾರ್ಪ್ ಎಐ ಕಾರ್ಡ್ ಅಂದರೆ ಏನು?

ಯತಿಕಾರ್ಪ್, ಸ್ಟಾರ್ಟ್ಅಪ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಕೃತಕ ಬುದ್ಧಿಮತ್ತೆಯು ಎಲ್ಲಾ ಕ್ಷೇತ್ರ ಹಾಗೂ ವರ್ಗದ ಜನರಿಗೆ ದಕ್ಕಬೇಕು ಎಂಬುದು  ಈ ಸಂಸ್ಥೆಯ ಮಹತ್ವಾಕಾಂಕ್ಷೆಯ ಸಾಕಾರ ರೂಪವೇ ಈ ಎಐ ಕಾರ್ಡ್ ಆಗಿರುತ್ತದೆ.

 ಇದರ ಲಾಭವೇನು?

ಈ ಕಾರ್ಡ್ ಶಿಕ್ಷಣ, ಕೃಷಿ, ಉದ್ಯಮ, ಹೂಡಿಕೆ, ನಿರ್ಮಾಣ, ಮಾರ್ಕೆಟಿಂಗ್, ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ, ರಿಯಲ್ ಎಸ್ಟೇಟ್, ಸೈಬರ್ ಸೆಕ್ಯೂರಿಟಿ, ಸ್ಟಾರ್ಟ್ಅಪ್‌ಗಳಂತಹ ಕ್ಷೇತ್ರಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಪರಿಣಿತರಿಂದ ಸರಳವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ತರಬೇತಿ ಒದಗಿಸಲಾಗುವ ಕಾರಣ ಇದರ ಅಳವಡಿಕೆ ಮತ್ತು ಬಳಕೆ ಸುಲಭವಾಗಲಿದೆ.
ಈಗಾಗಲೇ ಹಲವು ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಯತಿಕಾರ್ಪ್ ಕಾರ್ಡ್ ಅನುಷ್ಠಾನ ಮಾಡಿದ್ದು, ʻಎಐ ಎನೇಬಲ್ಡ್ ಸ್ಕೂಲ್ʼ ಎಂಬ ಮಾನ್ಯತೆ ಪಡೆದಿವೆ. ಇಂತಹ ಶಾಲೆಗಳಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗುವುದರೊಂದಿಗೆ, ಶಿಕ್ಷಣ ಸಂಸ್ಥೆಯ ಬ್ರಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗಲಿದೆ.

error: Content is protected !!
Scroll to Top