ಕರ್ನಾಟಕ

ಪುತ್ತೂರು : ಜುಲೈ 04, 07, ಹಾಗೂ 09 ರಂದು ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.03. ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತವು ಪ್ರಕಟಣೆ ಹೊರಡಿಸಿದ್ದು, 33.ಕೆ.ವಿ ಪುತ್ತೂರು-ಕಡಬ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಜುಲೈ 04 ಶನಿವಾರ, ಜುಲೈ 07 ಮಂಗಳವಾರ ಹಾಗೂ ಜುಲೈ 09 ಗುರುವಾರ ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11 ಕೆ.ವಿ. ಕಡಬ, ನೆಲ್ಯಾಡಿ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜಾಗುವ […]

ಪುತ್ತೂರು : ಜುಲೈ 04, 07, ಹಾಗೂ 09 ರಂದು ವಿದ್ಯುತ್ ನಿಲುಗಡೆ Read More »

ಕರಾವಳಿ, ಕರ್ನಾಟಕ

ಉಡುಪಿ : 1 ವರ್ಷದ ಮಗು ಸಹಿತ 14 ಕರೊನಾ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಉಡುಪಿ ,ಜು.03: ಜಿಲ್ಲೆಯಲ್ಲಿ ಕೊರೋನಾ ತನ್ನ ವರಸೆಯನ್ನು ಬದಲಾಯಿಸುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಉಡುಪಿಯಲ್ಲಿ ಒಂದು ವರ್ಷದ ಹೆಣ್ಣು ಮಗು ಸಹಿತ 14 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಮಹಾರಾಷ್ಟ್ರದಿಂದ ಬಂದವರು ನಾಲ್ವರು. ಕೇರಳದಿಂದ ಬಂದ ಒಬ್ಬರಿದ್ದಾರೆ. ಬೆಂಗಳೂರಿನ ಆತಂಕ ಮುಂದುವರಿದಿದ್ದು, ಅಲ್ಲಿಂದ ಬಂದ 4 ಮಂದಿಗೆ ಸೋಂಕು ತಗುಲಿದೆ.   ಸೋಂಕು ಕಾಣಿಸಿಕೊಂಡ ಪ್ರಾಥಮಿಕ ಸಂಪರ್ಕದಿಂದ ಐವರಿಗೆ ಸೋಂಕು ತಗುಲಿದೆ. ಎಲ್ಲ 14 ಮಂದಿಯನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ

ಉಡುಪಿ : 1 ವರ್ಷದ ಮಗು ಸಹಿತ 14 ಕರೊನಾ ಸೋಂಕು ದೃಢ Read More »

ಕರಾವಳಿ, ಕರ್ನಾಟಕ

ಉಡುಪಿ ಜುಲೈ 31ರ ತನಕ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಭಾಗ್ಯವಿಲ್ಲ

(ನ್ಯೂಸ್ ಕಡಬ) newskadaba.com.ಉಡುಪಿ,ಜು. 03 :ಕೊರೊನಾ ತನ್ನ ನಾಗಾಲೋಟ ಇದೇ ರೀತಿ ಮುಂದುವರಿಸುತ್ತಿದ್ದರೆ. ಇತ್ತ ಕೃಷ್ಣನ ದರ್ಶನವು ಮುಂದೂಡಲ್ಪಡುತ್ತಿದೆ. ಜುಲೈ 31ರ ತನಕ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಭಕ್ತರು ಹಾಗೂ ಕೃಷ್ಣ ಮಠದ ಸಿಬ್ಬಂದಿಗಳ ಆರೋಗ್ಯದ ಈ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಭಕ್ತರ ಮತ್ತು ಕೃಷ್ಣಮಠದ ಸಿಬ್ಬಂದಿ ಆರೋಗ್ಯ ಮುಖ್ಯ. ಕೃಷ್ಣಮಠದಲ್ಲಿ ಬಹಳ ಹಿಂದಿನಿಂದ ಯತಿಗಳೇ ಪೂಜೆ ಮಾಡಿಕೊಂಡು

ಉಡುಪಿ ಜುಲೈ 31ರ ತನಕ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಭಾಗ್ಯವಿಲ್ಲ Read More »

ಕರ್ನಾಟಕ

‘ಏಕ್ ದೋ ತೀನ್’ ಖ್ಯಾತಿಯ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ,ಜು.03:  ಬಾಲಿವುಡ್‌ ಮಾಸಿ- ಕ್ಲಾಸಿ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು (ಜುಲೈ 3) ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಂಬೈನ ಗುರು ನಾನಕ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗೆ ಚಿಕಿತ್ಸೆಪಡೆಯುತ್ತಿದ್ದರು.   2000 ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜಿಸಿರುವ ಸರೋಜ್‌ ಖಾನ್‌ ಅವರನ್ನು ಬಿ-ಟೌನ್‌ನಲ್ಲಿ ಎಲ್ಲರೂ ‘ಮಾಸ್ಟರ್‌ಜಿ’ ಎಂದೇ ಸಂಬೋಧಿಸುತ್ತಿದ್ದರು. ಸರೋಜ್‌ ಖಾನ್‌ಗೆ ಕೋವಿಡ್‌-19 ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿತ್ತು ಎಂದು ತಿಳಿದು ಬಂದಿದೆ. .

‘ಏಕ್ ದೋ ತೀನ್’ ಖ್ಯಾತಿಯ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಸಂಬಂಧಗಳಲ್ಲಿ ಸಮಸ್ಯೆ ಇದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ

ನಿಮ್ಮ ಗುಪ್ತ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಿದ್ದರೆ ಅಥವಾ ನಿಮ್ಮ ಪ್ರಿಯರು ನಿಮ್ಮಿಂದ ದೂರವಾಗಿದ್ದರೆ ಈ ತಂತ್ರ ಅನುಸರಿಸಿ. ಅರಳಿ ಮರದ ಎಲೆಯಲ್ಲಿ ಕಪ್ಪು ಕಾಡಿಗೆಯಿಂದ ದೂರವಾಗಿರುವ ನಿಮ್ಮ ಪ್ರಿಯರ ಹೆಸರನ್ನು ಬರೆದು ಸುರುಳಿಯಾಕಾರದಲ್ಲಿ ಸುತ್ತೆ ಮುಚ್ಚಿಡಿ ಇದು ಒಣಗಿದ ನಂತರ ದಹನ ಮಾಡಿ ಅದರ ಅವಶೇಷವನ್ನು ನೀರಿಗೆ ಬಿಡಿ ಇದು ನಿಮ್ಮ ಇಬ್ಬರ ದೋಷಗಳನ್ನು ಪರಿವರ್ತಿಸಿ ಒಂದು ಮಾಡಲು ಸಹಾಯಕವಾಗಿರುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.

ಸಂಬಂಧಗಳಲ್ಲಿ ಸಮಸ್ಯೆ ಇದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಕರಾವಳಿಯ ಶಾಸಕರಿಗೂ ತಟ್ಟಿದ ಕೊರೋನಾ ಬಿಸಿ ➤ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.02. ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸ್ವತಃ ಭರತ್ ಶೆಟ್ಟಿಯೇ ಟ್ವೀಟ್ ಮೂಲಕ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಶಾಸಕರು ಮಂಗಳೂರಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಕಾರಣ ಸ್ವಯಂ ಪ್ರೇರಿತವಾಗಿ ಕೊರೊನಾ ತಪಾಸಣೆ ನಡೆಸಿದ ಸಂದರ್ಭ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕರಾವಳಿಯ ಶಾಸಕರಿಗೂ ತಟ್ಟಿದ ಕೊರೋನಾ ಬಿಸಿ ➤ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಿಗೆ ಕೊರೋನಾ ಪಾಸಿಟಿವ್ Read More »

ಕರ್ನಾಟಕ

ಸ್ಯಾಂಡಲ್ ವುಡ್ ನ ‘ಗೋಲ್ಡನ್ ಗಣಿ’ಗೆ ಬರ್ತ್ ಡೇ ಸಂಭ್ರಮ ➤ ಸೆಟ್ಟೇರಿದೆ ಹೊಸ ಸಿನಿಮಾ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.02: ಗೋಲ್ಡನ್​ ಸ್ಟಾರ್​ ಗಣೇಶ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ನಟ ಗಣೇಶ್​ ಅವರ ಫೋಟೋ ಹಾಕಿಕೊಂಡು ಬರ್ತ್​​​ ಡೇಗೆ ವಿಶ್​ ಮಾಡುತ್ತಿದ್ದಾರೆ. ಟ್ವಿಟ್ಟರ್​ನಲ್ಲಿ ಹ್ಯಾಪಿ ಬತ್​​​ ಡೇ ಗಣೇಶ್​ ಎಂಬ ಹ್ಯಾಶ್​​ಟ್ಯಾಗ್​ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ.  ಈ ದಿನಕ್ಕೆ ಅವರ ಅಭಿಮಾನಿಗಳಾಗಿ ಎರಡು ಹೊಸ ಸಿನಿಮಾಗಳ ಘೋಷಣೆಯ ಸಿಹಿ ಸುದ್ದಿ ಸಿಕ್ಕಿದೆ. ಇನ್ನು, ಈ ಬಾರಿ ಕೊರೋನಾದಿಂದಾಗಿ ಗಣೇಶ್ ಅಭಿಮಾನಿಗಳೊಂದಿಗೆ ಬರ್ತ್

ಸ್ಯಾಂಡಲ್ ವುಡ್ ನ ‘ಗೋಲ್ಡನ್ ಗಣಿ’ಗೆ ಬರ್ತ್ ಡೇ ಸಂಭ್ರಮ ➤ ಸೆಟ್ಟೇರಿದೆ ಹೊಸ ಸಿನಿಮಾ Read More »

ಕರಾವಳಿ, ಕರ್ನಾಟಕ, ಲೈಫ್‍ಸ್ಟೈಲ್

ಪುತ್ತೂರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ವ್ಯಕ್ತಿಗಳಿಬ್ಬರ ಕೊವೀಡ್ ವರದಿ ನೆಗೆಟಿವ್

(ನ್ಯೂಸ್ ಕಡಬ) newskadaba.com ಪುತ್ತೂರು ,ಜು.02: ಪುತ್ತೂರಿನ ಎರಡು ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಬಜತ್ತೂರಿನ 80ರ ವೃದ್ದ ಮತ್ತು ಬಪ್ಪಳಿಗೆಯ 20 ವರ್ಷದ ಯುವಕನಿಗೆ ಜೂ.27 ರಂದು ಕೊರೋನಾ ದೃಢಪಟ್ಟಿತ್ತು.   ಅದೇ ದಿನ ಅವರಿಬ್ಬರನ್ನ ಮಂಗಳೂರು ಕೋವಿಡ್ ಆಸ್ಪತ್ರೆ ಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರಿಬ್ಬರು ಗುಣಮುಖ ಹೊಂದಿದ್ದು ಕೊವೀಡ್ ನೆಗೆಟಿವ್ ವರದಿ ಬಂದಿದೆ.ಎಂದು ಆರೋಗ್ಯಧಿಕಾರಿಯವರು ತಿಳಿಸಿದ್ದಾರೆ.      

ಪುತ್ತೂರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ವ್ಯಕ್ತಿಗಳಿಬ್ಬರ ಕೊವೀಡ್ ವರದಿ ನೆಗೆಟಿವ್ Read More »

ಕರಾವಳಿ, ಕರ್ನಾಟಕ

ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಚಿಂತನೆ ➤ ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಸಚಿವ ಎಸ್ ಟಿ. ಸೋಮಶೇಖರ್

(ನ್ಯೂಸ್ ಕಡಬ) newskadaba.com.ಮಡಿಕೇರಿ,ಜು.2:  ಕೊರೊನಾ ಕಾರಣದಿಂದ ರೈತರ ಸಾಲ ಮರುಪಾವತಿ ಅವಧಿಯನ್ನು ಎರಡರಿಂದ ಮೂರು ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗುವುದು ಎಂದು ಸಹಕಾರಿ ಸಚಿವ ಎಸ್‌ಟಿ ಸೋಮಶೇಖರ್ ತಿಳಿಸಿದ್ದಾರೆ. ಜೂನ್ 30 ಕ್ಕೆ ರೈತರ ಸಾಲ ವಾಪಸ್ ಕೊಡಲು ಕೊನೇ ದಿನಾಂಕವಿತ್ತು. ಇನ್ನೂ ಡಿಸೆಂಬರ್ ವರೆಗೆ ಮರುಪಾವತಿ ಮಾಡುವಂತೆ ಆಗ್ರಹಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಲ್ಲದೆ, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಇನ್ನು 2-3 ದಿನಗಳಲ್ಲಿ ತೀರ್ಮಾನವನ್ನು ಪ್ರಕಟಿಸಲಾಗುವುದು ಎಂದು ಸಹಕಾರ

ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಚಿಂತನೆ ➤ ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಸಚಿವ ಎಸ್ ಟಿ. ಸೋಮಶೇಖರ್ Read More »

ಕರ್ನಾಟಕ

ಬೆಂಗಳೂರು: BMTC ಯ 32 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.02: ಬೆಂಗಳೂರು ನಗರದ ಜನರ ಜೀವನಾಡಿ ಬಿಎಂಟಿಸಿ ಬಸ್. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲುತ್ತಿದೆ. ಕಳೆದ ಒಂದು ವಾರದಲ್ಲಿ 20 ಸಿಬ್ಬಂದಿಗೆ ಸೋಂಕು ತಗುಲಿದೆ. ಬಿಎಂಟಿಸಿಯ ಒಟ್ಟು 32 ಸಿಬ್ಭಂದಿಗಳಿಗೆ ಇದುವರೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ ಕೆಲವೇ ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿದ್ದು, ರಾತ್ರಿ 8 ಗಂಟೆಗೆ ಬಸ್ ಸಂಚಾರ ಸ್ಥಗಿತಗೊಳ್ಳುತ್ತಿದೆ.ಜೂನ್ 12ರಂದು ಬಿಎಂಟಿಸಿ ಸಿಬ್ಬಂದಿಗೆ ಸೋಂಕು ತಗುಲಿದ ಮೊದಲ ಪ್ರಕರಣ ದಾಖಲಾಗಿತ್ತು.

ಬೆಂಗಳೂರು: BMTC ಯ 32 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು Read More »

ಕರಾವಳಿ, ಕರ್ನಾಟಕ
Scroll to Top