ಕರ್ನಾಟಕ

ಡಿ. 5ರಿಂದ 9ರ ವರೆಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಜತ ಸಂಭ್ರಮ

ಕಾಣಿಯೂರು : ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಡಿ.೫ರಿಂದ ೯ರ ವರೆಗೆ ಪ್ರಗತಿ ವಿದ್ಯಾಸಂಸ್ಥೆ ಹಾಗೂ ಬೆಳ್ಳಿಹಬ್ಬ ವರ್ಷಾಚರಣ ಸಮಿತಿ ವತಿಯಿಂದ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಮಾಜದ ನಾನಾ ಕ್ಷೇತ್ರಗಳ ಸಾಧಕರ ಪಾಲ್ಗೊಳ್ಳುವಿಕೆ, ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ, ಸಾಧಕರಿಗೆ ಸನ್ಮಾನ, ಖ್ಯಾತ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತಾರಾ ಮೆರುಗು, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ಗುರುವಾರ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಕಾರ್ಯಕ್ರಮ ಕುರಿತಾಗಿ ವಿವರ ನೀಡಿದ ಶಾಲಾ ಆಡಳಿತ ಸಮಿತಿ ಅಧ್ಯಕ್ಷ […]

ಡಿ. 5ರಿಂದ 9ರ ವರೆಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ರಜತ ಸಂಭ್ರಮ Read More »

ಕರಾವಳಿ, ಕರ್ನಾಟಕ

ಖ್ಯಾತ ನಟ ಅಂಬರೀಶ್ ನಿಧನದ ಬೆನ್ನಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಆಘಾತ ► ಹಿರಿಯ ರಾಜಕಾರಣಿ ಜಾಫರ್ ಶರೀಫ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.25. ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಬೆನ್ನಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಆಘಾತವಾಗಿದ್ದು, ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ (85) ಭಾನುವಾರದಂದು ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಆಪ್ತರಾಗಿ ಗುರುತಿಸಿಕೊಂಡಿದ್ದ ಜಾಫರ್ ಶರೀಫ್ ರವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಶುಕ್ರವಾರದಂದು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಖ್ಯಾತ ನಟ ಅಂಬರೀಶ್ ನಿಧನದ ಬೆನ್ನಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಆಘಾತ ► ಹಿರಿಯ ರಾಜಕಾರಣಿ ಜಾಫರ್ ಶರೀಫ್ ವಿಧಿವಶ Read More »

ಕರ್ನಾಟಕ

ಕಡಬ ತಾಲೂಕು ಉದ್ಘಾಟನೆಗೆ ಮತ್ತೆ ವಿಘ್ನ..!! ► ನೂತನ ತಾಲೂಕು ಉದ್ಘಾಟನೆ ಕೊನೆಯ ಕ್ಷಣದಲ್ಲಿ ರದ್ದು…??

(ನ್ಯೂಸ್ ಕಡಬ) newskadaba.com ಕಡಬ, ನ.25. ಪರಿಸರದ ಜನತೆಯ ಬಹು ದಶಕಗಳ ಬೇಡಿಕೆಯಾದ ‘ನೂತನ ಕಡಬ ತಾಲೂಕು ಉದ್ಘಾಟನೆ’ ನೆರವೇರಲು ಕೆಲವೇ ತಾಸುಗಳು ಬಾಕಿ ಉಳಿದಿರುವಾಗ ತಾಲೂಕು ಉದ್ಘಾಟನೆಗೆ ಮತ್ತೊಂದು ವಿಘ್ನ ಎದುರಾಗಿದ್ದು, ಉದ್ಘಾಟನಾ ಸಮಾರಂಭವನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗುವ ಸಂಭವವಿದೆ. ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಜದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ನಡೆಯುತ್ತಿರುವುದರಿಂದ ಭಾನುವಾರದಂದು ನಡೆಯಬೇಕಾಗಿದ್ದ ಕಡಬ ಹಾಗೂ ಮೂಡಬಿದಿರೆ ತಾಲೂಕು

ಕಡಬ ತಾಲೂಕು ಉದ್ಘಾಟನೆಗೆ ಮತ್ತೆ ವಿಘ್ನ..!! ► ನೂತನ ತಾಲೂಕು ಉದ್ಘಾಟನೆ ಕೊನೆಯ ಕ್ಷಣದಲ್ಲಿ ರದ್ದು…?? Read More »

ಕರ್ನಾಟಕ

ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.24. ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್(66) ಬೆಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು. ಶ್ವಾಸಕೋಶ ಸಮಸ್ಯೆಯಿಂದ ಅವರು ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರದಂದು ಆರೋಗ್ಯ ಸ್ಥಿತಿ ಹದಗೆಟ್ಟಿದ್ದು,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶ Read More »

ಕರ್ನಾಟಕ

ಕಡಬ ನೂತನ ತಾಲೂಕು ಉದ್ಘಾಟನಾ ಐತಿಹಾಸಿಕ ಕ್ಷಣದಲ್ಲಿ ಭಾಗಿಗಳಾಗೋಣ ► ನ.25 ರಂದು ಉದ್ಘಾಟನೆ ನಡೆಯದೇ ಹೋದರೆ ಊರ ಜನರಿಂದಲೇ ಉದ್ಘಾಟನೆ..!! ► ತಾಲೂಕು ಹೋರಾಟ ಸಮಿತಿಯ ಸಂಚಾಲಕ ಕೃಷ್ಣ ಶೆಟ್ಟಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.22. ಸುಮಾರು ಆರು ದಶಕಗಳ ಕಾಲ ಊರಿನ ಪ್ರಮುಖರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ರಾಜಕೀಯ ರಹಿತವಾಗಿ ಪಕ್ಷ ಭೇದ ಮರೆತು ಹೋರಾಡಿದ ಫಲವಾಗಿ ಕಡಬವು ನೂತನ ತಾಲೂಕಾಗಿ ಘೋಷಣೆಯಾಗಿದ್ದು, ನ.25 ರಂದು ನಡೆಯಲಿರುವ ನೂತನ ತಾಲೂಕು ಉದ್ಘಾಟನೆಯ ಐತಿಹಾಸಿಕ ಕ್ಷಣದಲ್ಲಿ ನಾವೆಲ್ಲರೂ ಭಾಗಿಗಳಾಗೋಣ ಎಂದು ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕ, ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ ಹೇಳಿದರು. ಸುಮಾರು ಆರು ವರ್ಷಗಳ ಹಿಂದೆ ಬಿಜೆಪಿಯ ಜಗದೀಶ್ ಶೆಟ್ಟರ್

ಕಡಬ ನೂತನ ತಾಲೂಕು ಉದ್ಘಾಟನಾ ಐತಿಹಾಸಿಕ ಕ್ಷಣದಲ್ಲಿ ಭಾಗಿಗಳಾಗೋಣ ► ನ.25 ರಂದು ಉದ್ಘಾಟನೆ ನಡೆಯದೇ ಹೋದರೆ ಊರ ಜನರಿಂದಲೇ ಉದ್ಘಾಟನೆ..!! ► ತಾಲೂಕು ಹೋರಾಟ ಸಮಿತಿಯ ಸಂಚಾಲಕ ಕೃಷ್ಣ ಶೆಟ್ಟಿ ಎಚ್ಚರಿಕೆ Read More »

ಕರ್ನಾಟಕ

ಅಂತೂ ಇಂತೂ ಕಡಬ ತಾಲೂಕಿಗೆ ಮುಹೂರ್ತ ಬಂತು ► ನವೆಂಬರ್ 25 ರಂದು ಕಂದಾಯ ಸಚಿವರಿಂದ ನೂತನ ತಾಲೂಕಿಗೆ ಗ್ರೀನ್ ಸಿಗ್ನಲ್ ► ಕಡಬದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು

(ನ್ಯೂಸ್ ಕಡಬ) newskadaba.com ಕಡಬ, ನ.19. ಈ ಭಾಗದ ಜನರ ಬಹು ದಶಕಗಳ ಬೇಡಿಕೆಯಾದ ಕಡಬ ತಾಲೂಕು ಉದ್ಘಾಟನೆಗೆ ಸರಕಾರವು ಗ್ರೀನ್ ಸಿಗ್ನಲ್‌ ನೀಡಿದ್ದು, ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ‌. ನವೆಂಬರ್ 25 ಭಾನುವಾರದಂದು ಕಡಬದ ಅನುಗ್ರಹ ಸಭಾಭವನದ ವಠಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೂತನ ತಾಲೂಕನ್ನು ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಸಹಾಯಕ ಆಯುಕ್ತ ಕೃಷ್ಣ ಮೂರ್ತಿ ಎಚ್.ಕೆ.

ಅಂತೂ ಇಂತೂ ಕಡಬ ತಾಲೂಕಿಗೆ ಮುಹೂರ್ತ ಬಂತು ► ನವೆಂಬರ್ 25 ರಂದು ಕಂದಾಯ ಸಚಿವರಿಂದ ನೂತನ ತಾಲೂಕಿಗೆ ಗ್ರೀನ್ ಸಿಗ್ನಲ್ ► ಕಡಬದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು Read More »

ಕರ್ನಾಟಕ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ..? ಚಿಂತೆ ಬಿಡಿ.. ► ನ.17, 18 ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ.16. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನವೆಂಬರ್ 20 ಕೊನೆಯ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ನವೆಂಬರ್ 17 ಮತ್ತು 18ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನೋಂದಣಿ ಅಭಿಯಾನವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆವರೆಗೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ನಡೆಯಲಿದೆ. ಅರ್ಹತೆಗಳು: 01-01-2019 ರ ಅರ್ಹತಾ ದಿನಾಂಕದಂತೆ 18 ವರ್ಷ ವಯೋಮಾನದ ಭಾರತೀಯ ಪ್ರಜೆಯಾಗಿರಬೇಕು. ಆಯಾ ವಿಧಾನಸಭಾ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ..? ಚಿಂತೆ ಬಿಡಿ.. ► ನ.17, 18 ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನ Read More »

ಕರ್ನಾಟಕ

ಅಲೆಮಾರಿ ಮಹಿಳೆಯರನ್ನು ವಿಚಾರಿಸಿದಾಗ ಹೊರಬಂತು ಐಶಾರಾಮಿ ಜೀವನದ ರಹಸ್ಯ ► ಮಹಿಳೆಯರ ಮಾತು ಕೇಳಿ ಅಚ್ಚರಿಗೊಂಡ ಉಪ್ಪಿನಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.14. ಮನೆಗೆಲಸಕ್ಕೆಂದು ಸೇರಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಮೂವರು ಅಲೆಮಾರಿ ಮಹಿಳೆಯರನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು 4,39,680.00 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರದಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ ಮೂವರು ಹೆಂಗಸರು ಚಿಕ್ಕ ಮಕ್ಕಳೊಂದಿಗೆ ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದುಕೊಂಡು ಸಂಶಯಿತರಾಗಿ ಸುತ್ತಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌‌ಐ ನಂದಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದಾಗ ಮಹಿಳೆಯರು ನದಿಯ

ಅಲೆಮಾರಿ ಮಹಿಳೆಯರನ್ನು ವಿಚಾರಿಸಿದಾಗ ಹೊರಬಂತು ಐಶಾರಾಮಿ ಜೀವನದ ರಹಸ್ಯ ► ಮಹಿಳೆಯರ ಮಾತು ಕೇಳಿ ಅಚ್ಚರಿಗೊಂಡ ಉಪ್ಪಿನಂಗಡಿ ಪೊಲೀಸರು Read More »

ಕರ್ನಾಟಕ

ಸುಬ್ರಹ್ಮಣ್ಯ: ದೇವಸ್ಥಾನಕ್ಕೆ ಹೋಗಿ ಹೊರ ಬಂದವರಿಗೆ ಕಾದಿತ್ತು ಶಾಕ್..!! ► ಪರದಾಡಿದ ಮಡಿಕೇರಿ ಮೂಲದ ಕುಟುಂಬ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.13. ದೇವಸ್ಥಾನಕ್ಕೆಂದು ಆಗಮಿಸಿದ್ದ ಯಾತ್ರಾರ್ಥಿಯೋರ್ವರು ನಿಲ್ಲಿಸಿದ್ದ ಮಹೀಂದ್ರಾ ಬೊಲೆರೋ ವಾಹನವನ್ನು ಕಳವುಗೈದಿರುವ ಘಟನೆ ಸೋಮವಾರದಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮದ ಚೆಯ್ಯಂಡಾಣೆ ನಿವಾಸಿ ಬಿ‌.ಎಸ್‌. ಅಪ್ಪಚ್ಚ ಎಂಬವರ ಪುತ್ರ ಚಂದ್ರಶೇಖರ್ ಎಂಬವರು ಸೋಮವಾರದಂದು ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ಆಗಮಿಸಿ ಬೊಲೆರೋ (KA.04.MJ.9270) ವಾಹನವನ್ನು ಸುಬ್ರಹ್ಮಣ್ಯದ ಸವಾರಿ ಮಂಟಪದ ಬಳಿ ನಿಲ್ಲಿಸಿ ದೇವಸ್ಥಾನಕ್ಕೆ ತೆರಳಿದ್ದಾರೆ. ಮಧ್ಯಾಹ್ನ ಬಂದು ನೋಡಿದಾಗ ಇವರು ನಿಲ್ಲಿಸಿದ್ದ ಬೊಲೆರೋವನ್ನು ಯಾರೋ ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ. ಪರಿಸರದಲ್ಲೆಲ್ಲಾ

ಸುಬ್ರಹ್ಮಣ್ಯ: ದೇವಸ್ಥಾನಕ್ಕೆ ಹೋಗಿ ಹೊರ ಬಂದವರಿಗೆ ಕಾದಿತ್ತು ಶಾಕ್..!! ► ಪರದಾಡಿದ ಮಡಿಕೇರಿ ಮೂಲದ ಕುಟುಂಬ Read More »

ಕರ್ನಾಟಕ

ಅನಂತಕುಮಾರ್ ನಿಧನಕ್ಕೆ ವಿಕೃತಿ ಮೆರೆದ ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್‌ ಪೇಜ್ ► ಪಾಂಡೇಶ್ವರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ನ.13. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಸಂಬಂಧಿಸಿ ವಿಕೃತಿ ಮೆರೆದು ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್‌ ಪೇಜ್ ವಿರುದ್ಧ ಪಾಂಡೇಶ್ವರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್‌ ಪೇಜ್ ನಲ್ಲಿ ಕೋಮು ಪ್ರಚೋದಿಸುವಂತಹ ವಿವಾದಾತ್ಮಕ ಪೋಸ್ಟ್ ವೊಂದನ್ನು ಪ್ರಕಟಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಾವಿನಲ್ಲೂ ವಿಕೃತಿ ಮೆರೆದು ಕೀಳು ಮಟ್ಟದ ಪೋಸ್ಟ್

ಅನಂತಕುಮಾರ್ ನಿಧನಕ್ಕೆ ವಿಕೃತಿ ಮೆರೆದ ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್‌ ಪೇಜ್ ► ಪಾಂಡೇಶ್ವರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು Read More »

ಕರ್ನಾಟಕ
Scroll to Top