ಶಿರಾಡಿ ಘಾಟ್ ರಸ್ತೆ ಲಾರಿಗಳ ಸಂಚಾರಕ್ಕೆ ಮುಕ್ತವಾಗಿದೆ ಎಂಬ ವದಂತಿ ► ನಂಬಿ ಬಂದು ಪರದಾಡುತ್ತಿರುವ ನೂರಾರು ಲಾರಿಗಳ ಚಾಲಕರು..!!
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.12. ಶಿರಾಡಿ ಘಾಟ್ ರಸ್ತೆಯಲ್ಲಿ ಲಾರಿಗಳ ಸಂಚಾರಕ್ಕೆ ನವೆಂಬರ್ 12 ಸೋಮವಾರದಿಂದ ಅನುವು ಮಾಡಿ ಕೊಡಲಾಗುತ್ತದೆ ಎಂದು ನವೆಂಬರ್ 08 ರಂದು ಜಿಲ್ಲಾಡಳಿತವು ಘೋಷಿಸಿದ್ದನ್ನು ನಂಬಿ ಬಂದ ನೂರಾರು ಲಾರಿಗಳ ಚಾಲಕರು ಪರದಾಡಿದ ಘಟನೆ ಸೋಮವಾರದಂದು ಗುಂಡ್ಯದಲ್ಲಿ ನಡೆದಿದೆ. ಶಿರಾಡಿ ಘಾಟಿ ರಸ್ತೆ ಘನ ವಾಹನಗಳಾದ ಲಾರಿಗಳ ಸಂಚಾರಕ್ಕೆ ಇಂದು ಮುಕ್ತವಾಗುತ್ತದೆ ಅನ್ನುವ ಸುದ್ದಿಯನ್ನು ನಂಬಿ ಅನೇಕ ಲಾರಿಗಳು ಗುಂಡ್ಯಕ್ಕೆ ಆಗಮಿಸಿವೆ. ಸಕಲೇಶಪುರ ಕಡೆಗಳಿಂದಲೂ ಟನ್ ಗಟ್ಟಲೆ ಲೋಡು ತುಂಬಿದ ಲಾರಿಗಳು […]










