ನೆಲ್ಯಾಡಿ: ಹಸಿವಿನಿಂದ ಕಂಗೆಟ್ಟಿದ್ದ ಭಿಕ್ಷುಕನಿಗೆ ಪೊಲೀಸರಿಂದ ಉಪಚಾರ ➤ ಮಾಸ್ಕ್, ಉಪಹಾರ, ಹಣ್ಣುಹಂಪಲು ನೀಡಿದ ಪೊಲೀಸರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.27. ನೆಲ್ಯಾಡಿ ಬಳಿ ರಸ್ತೆಯಲ್ಲಿ ಹಸಿವಿನಿಂದ ಸಂಚರಿಸುತ್ತಿದ್ದ ಭಿಕ್ಷುಕನೋರ್ವನನ್ನು ಉಪಚರಿಸಿ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಭಿಕ್ಷುಕನನ್ನು ಗಮನಿಸಿದ ನೆಲ್ಯಾಡಿ ಹೊರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಮಾಸ್ಕ್ ಹಾಕಿಸಿ, ಹಣ್ಣು ಹಂಪಲು, ಉಪಾಹಾರ ನೀಡಿದ್ದು, ಕರ್ತವ್ಯದ ನಡುವೆ ನಿರ್ಗತಿಕರಿಗೆ ಸಹಾಯ ಮಾಡುವುದರೊಂದಿಗೆ ಭೇಷ್ ಅನಿಸಿಕೊಂಡಿದ್ದಾರೆ.

Scroll to Top