(ನ್ಯೂಸ್ ಕಡಬ) newskadaba.com, ಸೆ.18 .ತರಬೇತಿ ಕಾರ್ಯಾಚರಣೆಯಲ್ಲಿದ್ದ ಅಮೆರಿಕದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್ಗೆ ಸೇರಿದ F-16 ಫೈಟಿಂಗ್ ಫಾಲ್ಕನ್ (149ನೇ ಫೈಟರ್ ವಿಂಗ್) ವಿಮಾನ ಪತನಗೊಂಡಿದೆ.

ಅಮೆರಿಕದ ಮಿಚಿಗನ್ನ ಟ್ರಾವರ್ಸ್ ಸಿಟಿ ಸಮೀಪ.ಪೈಲಟ್ ಸರಿಯಾದ ಸಮಯಕ್ಕೆ ಎಜೆಕ್ಟ್ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರಿದಿದೆ.
1979 ರಿಂದ ಸೇವೆ ಸಲ್ಲಿಸುತ್ತಿರುವ F-16 ವಿಮಾನಗಳಲ್ಲಿ 2000ರ ನಂತರ ಸುಮಾರು 14 ‘Class A’ ಮಾದರಿಯ ಪ್ರಮುಖ ಅಪಘಾತಗಳು ದಾಖಲಾಗಿವೆ.




