Keerthana

ರಾಜ್ಯದಲ್ಲಿಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣ ಪತ್ತೆ: ಸೋಂಕಿತರ ಒಟ್ಟು ಸಂಖ್ಯೆ 9,721ಕ್ಕೆ ಏರಿಕೆ

ಬೆಂಗಳೂರು, ಜೂ.23: ರಾಜ್ಯದಲ್ಲಿ ಇಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು (107) ಹೊರತುಪಡಿಸಿದಂತೆ ಇಂದು ಬಳ್ಳಾರಿ (53), ಬೀದರ್ (22), ಮೈಸೂರು (21), ವಿಜಯಪುರ (16), ಯಾದಗಿರಿ (13) ಹಾಗೂ ಉಡುಪಿ (11) ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ ಇಂದು 274 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ 6,004 […]

ರಾಜ್ಯದಲ್ಲಿಂದು 322 ಹೊಸ ಕೊರೋನ ಪಾಸಿಟಿವ್ ಪ್ರಕರಣ ಪತ್ತೆ: ಸೋಂಕಿತರ ಒಟ್ಟು ಸಂಖ್ಯೆ 9,721ಕ್ಕೆ ಏರಿಕೆ Read More »

ಕರ್ನಾಟಕ

ಸಚಿವ ಡಾ.ಸುಧಾಕರ್ ತಂದೆಗೆ ಕೊರೋನ ದೃಢ

ಬೆಂಗಳೂರು, ಜೂ.22: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಂದೆಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢವಾಟ್ಟಿದೆ. ಈ ಕುರಿತು ಸಚಿವ ಸುಧಾಕರ್ ಅವರೇ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ‘‘ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ’’. ಎಂದು ಟ್ವೀಟ್ ಮಾಡಿದ್ದಾರೆ. ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿ ಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ

ಸಚಿವ ಡಾ.ಸುಧಾಕರ್ ತಂದೆಗೆ ಕೊರೋನ ದೃಢ Read More »

ಕರ್ನಾಟಕ

ರಾಜ್ಯದಲ್ಲಿಂದು 249 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 9,399ಕ್ಕೆ ಏರಿಕೆ

ಬೆಂಗಳೂರು, ಜೂ.22: ರಾಜ್ಯದಲ್ಲಿಂದು 249 ಮಂದಿಗೆ ಕೊರೋನ ಸೋಂಕು ದೃಢವಾಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,399ಕ್ಕೆ ಏರಿಕೆಯಾಗಿದೆ. ಇದುವರೆಗೆ 5,730 ಮಂದಿ ಸೋಂಕಿತರು ಗುಣಮುಖರಾಗಿದ್ದು, ಸದ್ಯ ರಾಜ್ಯದಲ್ಲಿ 3,523 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಇಂದು 126 ಜನರಿಗೆ ಸೋಂಕು ದೃಢವಾಗಿದೆ. ಕಲಬುರಗಿಯಲ್ಲಿ 27, ವಿಜಯಪುರದಲ್ಲಿ 15, ಉಡುಪಿಯಲ್ಲಿ 14, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12, ದಾವಣಗೆರೆಯಲ್ಲಿ 9, ಉತ್ತರ ಕನ್ನಡ ಮತ್ತು ಬಾಗಲಕೋಟೆಯಲ್ಲಿ 6, ಬೀದರ್ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 5, ಧಾರವಾಡ ಮತ್ತು

ರಾಜ್ಯದಲ್ಲಿಂದು 249 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 9,399ಕ್ಕೆ ಏರಿಕೆ Read More »

ಕರ್ನಾಟಕ

ವಿಧಾನ ಪರಿಷತ್‌ಗೆ ಎಲ್ಲ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆ

ಬೆಂಗಳೂರು, ಜೂ.22: ವಿಧಾನ ಪರಿಷತ್‌ಗೆ ನಾಮಪತ್ರ ಅಂಗೀಕಾರವಾದ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಬಿಜೆಪಿ ಪಕ್ಷದಿಂದ ನಾಲ್ವರು, ಕಾಂಗ್ರೆಸ್ ಪಕ್ಷದ ಇಬ್ಬರು, ಜೆಡಿಎಸ್ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸಿದ್ದ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತವಾಗಿದೆ. ಹೀಗಾಗಿ ಅಂಗೀಕಾರವಾದ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿಯಿಂದ ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ್, ಮಾಜಿ ಶಾಸಕ ಸುನೀಲ್ ವಲ್ಯಾಪುರೆ ಹಾಗೂ ಪಕ್ಷದ ಮುಖಂಡ ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್

ವಿಧಾನ ಪರಿಷತ್‌ಗೆ ಎಲ್ಲ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆ Read More »

ಕರ್ನಾಟಕ

ರಾಜ್ಯದಲ್ಲಿಂದು 416 ಹೊಸ ಕೊರೋನ ಪ್ರಕರಣ ಪತ್ತೆ: 9 ಮಂದಿ ಸಾವು

ಬೆಂಗಳೂರು, ಜೂ.20: ರಾಜ್ಯದಲ್ಲಿ ಶನಿವಾರ 416 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,697 ಆಗಿದ್ದು, ಸಾವಿನ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಈ ವರೆಗೆ 5,391 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 3,170 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು, 55 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಬೀದರ್ 73, ಬಳ್ಳಾರಿ, ರಾಮನಗರಗಳಲ್ಲಿ ತಲಾ 38, ಕಲಬುರ್ಗಿ

ರಾಜ್ಯದಲ್ಲಿಂದು 416 ಹೊಸ ಕೊರೋನ ಪ್ರಕರಣ ಪತ್ತೆ: 9 ಮಂದಿ ಸಾವು Read More »

ಕರ್ನಾಟಕ

ಉಡುಪಿ: ಶನಿವಾರ 13 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಜೂ.20: ಜಿಲ್ಲೆಯಲ್ಲಿ ಇಂದು ಒಂದೇ ದಿನ 13 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,063ಕ್ಕೆ ಏರಿಕೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ 11 ಜನರಿಗೆ ಸೋಂಕು ದೃಢವಾಗಿದ್ದು, ತೆಕ್ಕಟ್ಟೆಯ ಓರ್ವ ವ್ಯಕ್ತಿ ಮಹಾರಾಷ್ಟ್ರದಿಂದ ಬಂದ 4 ಗಂಟೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು ಶನಿವಾರ ಅವರ ಪತ್ನಿ ಹಾಗೂ ಪುತ್ರಿಗೆ ಸೋಂಕು ದೃಢ ಪಟ್ಟಿದ್ದು, ಸದ್ಯ ಅವರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಇಂದು ಜಿಲ್ಲೆಯಲ್ಲಿ ಒಂಬತ್ತು ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಇದರೊಂದಿಗೆ

ಉಡುಪಿ: ಶನಿವಾರ 13 ಮಂದಿಗೆ ಕೊರೋನ ಪಾಸಿಟಿವ್ Read More »

ಕರಾವಳಿ

ದ.ಕ. ಜಿಲ್ಲೆಗೆ ಕೊರೋನಾಘಾತ: ಇಂದು 79 ಮಂದಿಗೆ ಸೋಂಕು

ಮಂಗಳೂರು, ಜೂ.16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದಾಖಲೆ ಸಂಖ್ಯೆಯಲ್ಲಿ ಕೊರೋನ ಸೋಂಕಿತರು ಪತ್ತೆಯಾಗಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬರೋಬ್ಬರಿ 79 ಮಂದಿಯಲ್ಲಿ ಮಹಾಮಾರಿ ಪತ್ತೆಯಾಗಿದ್ದು, ಅವರನ್ನು ಕ್ವಾರಂಟೈನ್ ಕೇಂದ್ರದಿಂದ ಕೋವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಸೌದಿಯಿಂದ ಮರಳಿದ್ದ 74 ಮಂದಿ ಹಾಗೂ ಮಹಾರಾಷ್ಟ್ರದಿಂದ ಮರಳಿದ್ದ ಐವರಲ್ಲಿ ಸೋಂಕು ಪತ್ತೆಯಾಗಿದ್ದು, ಇದು ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಒಂದೇ ದಿನದ ದಾಖಲೆಯಾಗಿದೆ.

ದ.ಕ. ಜಿಲ್ಲೆಗೆ ಕೊರೋನಾಘಾತ: ಇಂದು 79 ಮಂದಿಗೆ ಸೋಂಕು Read More »

ಕರಾವಳಿ

ರಾಜ್ಯದಲ್ಲಿಂದು 317 ಮಂದಿಗೆ ಕೊರೋನ ಸೋಂಕು ದೃಢ: 7 ಮಂದಿ ಸಾವು

ಬೆಂಗಳೂರು, ಜೂ.16: ರಾಜ್ಯದಲ್ಲಿ ಇಂದು 317 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 7530ಕ್ಕೇರಿಕೆಯಾಗಿದೆ. ದಕ್ಷಿಣ ಕನ್ನಡ 79, ಕಲಬುರಗಿ 63, ಬಳ್ಳಾರಿ 53 ,ಬೆಂಗಳೂರು ನಗರ 47 ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿಂದು ಸೋಂಕಿನ ಕಾರಣದಿಂದ 7 ಮಂದಿ ಸಾವನ್ನಪ್ಪಿದ್ದಾರೆ. 322 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 2,976 ಸಕ್ರಿಯ ಸೋಂಕು ಪ್ರಕರಣಗಳಿವೆ.

ರಾಜ್ಯದಲ್ಲಿಂದು 317 ಮಂದಿಗೆ ಕೊರೋನ ಸೋಂಕು ದೃಢ: 7 ಮಂದಿ ಸಾವು Read More »

ಕರ್ನಾಟಕ

ರಾಜ್ಯದಲ್ಲಿ ಕೊರೋನ ಸೋಂಕಿಗೆ ಮೂವರು ಬಲಿ: 204 ಮಂದಿಗೆ ಸೋಂಕು ದೃಢ

ಬೆಂಗಳೂರು, ಜೂ.11: ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 72ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಎಸೆಸೆಲ್ಸಿ ವಿದ್ಯಾರ್ಥಿ ಸೇರಿದಂತೆ 204 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 6,245ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಗುರುವಾರ 114 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 2,976ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 2,976 ಸಕ್ರಿಯ ಪ್ರಕರಣಗಳಿದ್ದು, 10 ಮಂದಿ ಐಸಿಯುನಲ್ಲಿ ಚಿಕಿತ್ಸೆ

ರಾಜ್ಯದಲ್ಲಿ ಕೊರೋನ ಸೋಂಕಿಗೆ ಮೂವರು ಬಲಿ: 204 ಮಂದಿಗೆ ಸೋಂಕು ದೃಢ Read More »

ಕರ್ನಾಟಕ

ಡಿಕೆಶಿ ಪದಗ್ರಹಣಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಿಲ್

ಬೆಂಗಳೂರು, ಜೂ.11: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯಸರಕಾರ ಒಪ್ಪಿಗೆ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಪದಗ್ರಹಣದ ದಿನಾಂಕವನ್ನು ಪಕ್ಷದ ಹಿರಿಯಲ್ಲಿ ಚರ್ಚಿಸಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪದಗ್ರಹಣ ಕಾರ್ಯಕ್ರಮದ ಕುರಿತಂತೆ ಮುಖ್ಯಮಂತ್ರಿ ಮಾತನಾಡಿರೋದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು. ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ದೇಶದಲ್ಲಿ ವಿರೋಧ ಪಕ್ಷಗಳು ಕೂಡ ಇರಬೇಕು ಎಂದು ಅವರು ಹೇಳಿದ್ದಾರೆ ಎಂದರು.

ಡಿಕೆಶಿ ಪದಗ್ರಹಣಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಿಲ್ Read More »

ಕರ್ನಾಟಕ
Scroll to Top