ಕರ್ನಾಟಕ

ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ನವದೆಹಲಿ,ಜು.04: ಮತ್ತೊಮ್ಮೆ ನಭೋ ಮಂಡಲದಲ್ಲಿ ಕೌತುಕಗೊಳ್ಳಲಿದೆ.ಇತ್ತೀಚೆಗಷ್ಟೇ ಬಾನಂಗಳದಲ್ಲಿ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು. ಇದೀಗ ಪ್ರಸಕ್ತ ವರ್ಷದ ಮೂರನೇ ತೆಳು ಛಾಯೆಯ ಚಂದ್ರಗ್ರಹಣ ಜುಲೈ 5ರ ಭಾನುವಾರ ಸಂಭವಿಸಲಿದೆ. 2020ರಲ್ಲಿ ಎರಡು ಬಾರಿ ಚಂದ್ರಗ್ರಹಣ, ಒಂದು ಬಾರಿ ಸೂರ್ಯಗ್ರಹಣ ಗೋಚರಿಸಿದ್ದು, ನಾಲ್ಕನೇ ಗ್ರಹಣ ಜುಲೈ 5ರಂದು ಗೋಚರಿಸಲಿದೆ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ.ಜುಲೈ 5ರ ಭಾನುವಾರ ಸಂಭವಿಸುವ ತೆಳುಛಾಯೆ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ 11.22ಕ್ಕೆ ಗ್ರಹಣ […]

ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಅಸೌಖ್ಯಕ್ಕೊಳಗಾಗಿ ಮೃತಪಟ್ಟ ವೃದ್ದೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆ ➤ ಜಿಲ್ಲೆಯಲ್ಲಿ 20ಕ್ಕೇರಿದ ಸಾವಿನ ಸಂಖ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ,ಜು.04: ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ, ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆ ನಿವಾಸಿಯಾಗಿದ್ದ ವೃದ್ಧೆಯ ಪರೀಕ್ಷೆಯ ವರದಿಯಲ್ಲಿ ಕೊವೀಡ್ -19 ಪಾಸಿಟಿವ್ ಬಂದಿದ್ದು ಈ ಮೂಲಕ ದಕ್ಷಿಣ ಕನ್ನಡ ಜಿಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 20ಕ್ಕೇರಿದೆ.   ಅಸೌಖ್ಯದಿಂದ ಮೃತಪಟ್ಟ ವೃದ್ಧೆ ವಾರದ ಹಿಂದೆಯಷ್ಟೇ ಅನಾರೋಗ್ಯಕ್ಕೆ ಒಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು. ಇದೇ ಸಮಯದಲ್ಲಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ವೃದ್ದರೊಬ್ಬರು ಅದೇ ವಾರ್ಡಿಗೆ ದಾಖಲಾಗಿದ್ದು, ಇವರಿಗೆ ಕೊರೊನಾ ದೃಢಪಟ್ಟಿತ್ತು.

ಅಸೌಖ್ಯಕ್ಕೊಳಗಾಗಿ ಮೃತಪಟ್ಟ ವೃದ್ದೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆ ➤ ಜಿಲ್ಲೆಯಲ್ಲಿ 20ಕ್ಕೇರಿದ ಸಾವಿನ ಸಂಖ್ಯೆ Read More »

ಕರಾವಳಿ, ಕರ್ನಾಟಕ

ಕೊರೊನಾ ಅಟ್ಟಹಾಸ ➤ ನಾಳೆಯಿಂದ (ಜುಲೈ 5 ರಿಂದ) ಜುವ್ಯೆಲ್ಲರಿ ಶಾಪ್ ಕ್ಲೋಸ್

(ನ್ಯೂಸ್ ಕಡಬ) newskadaba.com ., ಮಂಗಳೂರು, ಜು.04., ದ.ಕ ಜಿಲ್ಲೆಯಲ್ಲಿ ಕೊರೊನಾ ‌ಪ್ರಕರಣ ಹೆಚ್ಚಳದ ಹಿನ್ನಲೆ ನಾಳೆಯಿಂದ ಐದು ದಿನಗಳ ‌ಕಾಲ ಜಿಲ್ಲೆಯ ಜ್ಯುವೆಲ್ಲರಿ ಮಳಿಗೆಯನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ನಿರ್ಧರಿಸಿವೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಜಿಲ್ಲೆಯ ಜ್ಯುವೆಲ್ಲರಿಗಳು ಜುಲೈ 5 ರಿಂದ ಜುಲೈ 9ರವರೆಗೆ ಬಂದ್‌‌ ಮಾಡಲು ತೀರ್ಮಾನ ಮಾಡಿವೆ. ಕಾರ್ಪೊರೇಟ್ ಸ್ವರ್ಣಾಭರಣ ಮಳಿಗೆ ಸೇರಿ ಎಲ್ಲವೂ ಬಂದ್‌ ಆಗಲಿದ್ದು, ಇನ್ನು ಚಿನ್ನಾಭರಣ

ಕೊರೊನಾ ಅಟ್ಟಹಾಸ ➤ ನಾಳೆಯಿಂದ (ಜುಲೈ 5 ರಿಂದ) ಜುವ್ಯೆಲ್ಲರಿ ಶಾಪ್ ಕ್ಲೋಸ್ Read More »

ಕರಾವಳಿ, ಕರ್ನಾಟಕ

ವಟ ಯಕ್ಷಿಣಿ ವಶ ಮತ್ತು ದಿನ ಭವಿಷ್ಯ

ದಶಾಕ್ಷರ ವಟ ಯಕ್ಷಿಣಿ ಮಂತ್ರದಿಂದ ನಿಮ್ಮ ಮನಸ್ಸಿಗೆ ಹಿತವೆನಿಸುವ ಹಾಗೂ ಬೇಕು ಎನಿಸುವ ಕಾರ್ಯವು ಸರಳವಾಗಿ ವಶವಾಗುತ್ತದೆ. ಈ ಜಪ ಮಂತ್ರವನ್ನು ನೀವು ಪ್ರತಿನಿತ್ಯ 108 ಸಾರಿ ಜಪಿಸಬೇಕು. ಹೀಗೆ 21ದಿನಗಳ ಕಾಲ ಮಾಡತಕ್ಕದ್ದು. ಶ್ರೀಂ ಶ್ರೀಂ ಯಕ್ಷಿಣಿ ಹಂ ಹಂ ಹಂ ಸ್ವಾಹಾ! ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ,

ವಟ ಯಕ್ಷಿಣಿ ವಶ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಮಗನಿಗೆ ಕೊರೋನಾ ದೃಢ ➤ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಜು.03: ಎರಡೂವರೆ ವರ್ಷದ ಮಗನಿಗೆ ಕೊರೋನಾ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರೊಬ್ಬರಿಗೆ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.   ಧಾರವಾಡ ಮೂಲದ ಈ ನೌಕರನ ಪತ್ನಿ ಹಾಗು ಮಕ್ಕಳು ಊರಲ್ಲಿಯೇ ಇದ್ದರು. ಮಗುವಿಗೆ ಜ್ವರ ಇದ್ದಕಾರಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂದರ್ಭ ಕೊರೋನಾ ಪರೀಕ್ಷೆಗೆ ಗಂಟಲ ದ್ರವದ ಮಾದರಿಯನ್ನ ತೆಗೆಯಲಾಗಿತ್ತು. ಇನ್ನು, ನಿನ್ನೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರ ಮರಳಿ ಕತ್ವ್ಯಕ್ಕೆ ಹಾಜರಾಗಿದ್ದರು.ಇಂದು ಮಗುವಿನ ಗಂಟಲ

ಮಗನಿಗೆ ಕೊರೋನಾ ದೃಢ ➤ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಹೋಂ ಕ್ವಾರಂಟೈನ್ Read More »

ಕರಾವಳಿ, ಕರ್ನಾಟಕ

ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವರಿಗೆ ಕೊರೊನಾ ಪಂಚಾಯತ್ ಸೀಲ್‍ಡೌನ್

(ನ್ಯೂಸ್ ಕಡಬ) newskadaba.com.ಬೈಂದೂರು,ಜು.3: ತಾಲೂಕಿನ ಪಡುವರಿ ಗ್ರಾಮ ಪಂಚಾಯತಿನ ಸಿಬ್ಬಂದಿಯೋರ್ವರಿಗೆ ಕೊರೊನಾ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸೇರಿ ಪಂಚಾಯತ್ ಸಂಕೀರ್ಣವನ್ನು ಸೀಲ್‍ಡೌನ್ ಮಾಡಲಾಗಿದೆ. ಪಡುವರಿ ಗ್ರಾಮ ಪಂಚಾಯತ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು ಶುಕ್ರವಾರ ವರದಿ ಪಾಸಿಟಿವ್ ಬಂದಿದ್ದು ಇದರಿಂದಗಿ ತಕ್ಷಣ ಪಂಚಾಯತ್‍ನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪಂಚಾಯತ್ ಸಂಕೀರ್ಣದಲ್ಲಿ ಅಂಚೆ ಕಛೇರಿ, ವಿ.ಎ ಕಛೇರಿ, ಗ್ರಂಥಾಲಯ ಇದೆ. ಎಲ್ಲವನ್ನು ಬಂದ್ ಮಾಡಿ

ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವರಿಗೆ ಕೊರೊನಾ ಪಂಚಾಯತ್ ಸೀಲ್‍ಡೌನ್ Read More »

ಕರ್ನಾಟಕ

SSLC ಪರೀಕ್ಷೆ ಮುಕ್ತಾಯ ➤ ಶಿಕ್ಷಕರಿಗೆ ಧನ್ಯವಾದ ತಿಳಿಸಿದ ಶಿಕ್ಷಣ ಸಚಿವರು

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.03: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯು ಮುಕ್ತಾಯಗೊಂಡಿದೆ. ಪರೀಕ್ಷೆ ವೇಳೆ ಕಾರ್ಯನಿರ್ವಾಹಿಸಿದ ಶಿಕ್ಷಕರಿಗೆ ಶಿಕ್ಷಣ ಸಚಿವರು ಧನ್ಯವಾದ ತಿಳಿಸಿದ್ದಾರೆ.   ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ಮಾಡಿದರೆ ಯಾವುದೂ ಸಾಧ್ಯ ಎಂಬುದನ್ನು ಈ ಪರೀಕ್ಷೆಗಳು ರುಜುವಾತು ಮಾಡಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.ಶುಕ್ರವಾರದಂದು ಎಸ್‌‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯಗೊಂಡ ಹಿನ್ನೆಲೆ ಟ್ವೀಟ್‌ ಮಾಡಿರುವ ಅವರು, ಅಸಾಧ್ಯವನ್ನು ಸಾಧ್ಯವಾಗಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ

SSLC ಪರೀಕ್ಷೆ ಮುಕ್ತಾಯ ➤ ಶಿಕ್ಷಕರಿಗೆ ಧನ್ಯವಾದ ತಿಳಿಸಿದ ಶಿಕ್ಷಣ ಸಚಿವರು Read More »

ಕರಾವಳಿ, ಕರ್ನಾಟಕ

ಕಡಬ :ಹಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಕೊರೋನಾ ದೃಢ.!

(ನ್ಯೂಸ್ ಕಡಬ) newskadaba.com ಕಡಬ ,ಜು.03: ಕಡಬದಲ್ಲಿ ಈಗಾಗಲೇ ಎರಡು ದಿನಗಳ ಹಿಂದೆ ಕೊರೋನಾ ವಾರಿಯರ್ ಒಬ್ಬರಿಗೆ ಕೊವೀಡ್ ಸೋಂಕು ದೃಢ ಪಟ್ಟಿತ್ತು. ಇದರ ಬೆನ್ನಲೆ, ಇದೀಗ ಮತ್ತೆ ಕಡಬದಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಗೆ ಸೋಂಕು ತಲುಲಿದೆ. ಕಡಬ ತಾಲೂಕಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಕೊರೋನಾ ದೃಢಟ್ಟಿದೆ. ಕಡಬ ತಾಲೂಕಿನ ಹೊಸ್ಮಠ ನಿವಾಸಿಯಾಗಿರುವ ಹಿರಿಯ ಆರೋಗ್ಯ ಸಹಾಯಕಿಯಾಗಿರುವ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯು ಜು. 3ರಂದು ಬಂದಿದ್ದು, ಕೊರೋನಾ

ಕಡಬ :ಹಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಕೊರೋನಾ ದೃಢ.! Read More »

ಕರಾವಳಿ, ಕರ್ನಾಟಕ

ದಿಡುಪೆ ಕಡಮಗುಂಡಿಯಲ್ಲಿ ಪ್ರವಾಸಿಗರ ದಂಡು ➤ ಕಲುಷಿತಗೊಳ್ಳುತ್ತಿದೆ ಜಲಪಾತದ ನೀರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜು.03: ಕರಾವಳಿಯನ್ನ ತಬ್ಬಿಕೊಂಡಿರುವ ಕೊರೋನಾ ಎಗ್ಗಿಲ್ಲದೆ ದಿನೆ ದಿನೇ ಸದ್ದು ಮಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪ್ರವಾಸಿತಾಣಗಳನ್ನ ಬಂದ್ ಕೂಡ ಮಾಡಿದ್ದಾರೆ. ಇದರ ನಡುವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ದಂಚಿನಲ್ಲಿರುವ ದಿಡುಪೆ ಕಡಮಗುಂಡಿ ಪ್ರದೇಶದಲ್ಲಿ ಪ್ರವಾಸಿಗರ ಕಿರಿ ಕಿರಿ ಅತಿಯಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸರಕಾರ ಲಾಕ್‌ಡೌನ್‌ ಸಡಿಲಿಸಿದ ಬಳಿಕ ಬೆಂಗಳೂರು, ಮೈಸೂರು, ರಾಮನಗರ ಸಹಿತ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಿದ್ದು, ಕೆಲವರು ಜಲಪಾತಕ್ಕೆ ತೆರಳದೆ ಪರಿಸರದ ಗದ್ದೆ ತೋಟಗಳಲ್ಲೇ ಮಜಾ ಮಾಡುತ್ತಿರುತ್ತಾರೆ. ಮತ್ತೆ ಕೆಲವರು

ದಿಡುಪೆ ಕಡಮಗುಂಡಿಯಲ್ಲಿ ಪ್ರವಾಸಿಗರ ದಂಡು ➤ ಕಲುಷಿತಗೊಳ್ಳುತ್ತಿದೆ ಜಲಪಾತದ ನೀರು Read More »

ಕರಾವಳಿ, ಕರ್ನಾಟಕ

ಮಂಗಳೂರು :ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದ ಪತಿ.!

(ನ್ಯೂಸ್ ಕಡಬ) newskadaba.com ಮಂಗಳೂರು,ಜು.03: ಕಾವೂರಿನ ಟಿಪ್ಪರ್ ಚಾಲಕ ಗಣೇಶ್ ತನ್ನ ಪತ್ನಿ ಶಾಂತಾ  ಅವರನ್ನು ಬಜ್ಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕ್ವಾರಿಗೆ ದೂಡಿ ಕೊಲೆ ಮಾಡಿ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಪತಿ-ಪತ್ನಿ ಮಧ್ಯೆ ವಿರಸ ಉಂಟಾದ ಕಾರಣ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದು, ಕೆಲವು ಸಮಯ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಆತ ಆಕೆಯ ಮನೆಗೆ ತೆರಳಿ ಮಾತುಕತೆ ನಡೆಸಿ ಕಾವೂರಿಗೆ ಕರೆಸಿಕೊಂಡಿದ್ದನು.   ಬುಧವಾರ ಸಂಜೆ ಗಣೇಶ್ ಪತ್ನಿ ಶಾಂತಾಳನ್ನು

ಮಂಗಳೂರು :ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದ ಪತಿ.! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top