ಕುಡಿಯಲು ಮದ್ಯ ಸಿಗದೆ ಜೀವ ಕಳೆದುಕೊಳ್ಳುತ್ತಿರುವ ಮದ್ಯ ಪ್ರಿಯರು ➤ ಕಡಬದಲ್ಲಿ ಒಂದೇ ದಿನ ಇಬ್ಬರ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಮದ್ಯಪಾನ ಚಟ ಹೊಂದಿದ್ದ ವ್ಯಕ್ತಿಗಳಿಬ್ಬರು ಮದ್ಯ ಸಿಗದ ಕಾರಣ ಜುಗುಪ್ಸೆಗೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರತ್ಯೇಕ ಘಟನೆ ಶನಿವಾರದಂದು ಕಡಬದಲ್ಲಿ ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡವರನ್ನು ಕೋಡಿಂಬಾಳ ಗ್ರಾಮದ ಗಾಣದಕೆರೆ ನಿವಾಸಿ ತೋಮಸ್(70) ಹಾಗೂ ಕೇರಳದ ಕೊಟ್ಟಾಯಂ ಜಿಲ್ಲೆಯ ಪತ್ತನಂತಿಟ್ಟ ನಿವಾಸಿ ಟೋನಿ ಥೋಮಸ್(50) ಎಂದು ಗುರುತಿಸಲಾಗಿದೆ. ಇವರಿಬ್ಬರೂ ವಿಪರೀತ ಮದ್ಯ ಸೇವಿಸುತ್ತಿದ್ದುದರಿಂದ ಕಳೆದ ಕೆಲವು ದಿನಗಳಿಂದ ಮದ್ಯ ಸಿಗದೆ ಚಡಪಡಿಸುತ್ತಿದ್ದರು ಎನ್ನಲಾಗಿದೆ. ಶನಿವಾರದಂದು ಓರ್ವ ಮನೆಯ ಮೇಲ್ಛಾವಣಿಗೆ ಹಾಗೂ ಮತ್ತೋರ್ವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

 

Scroll to Top