
(ನ್ಯೂಸ್ ಕಡಬ) newskadaba.com, ಅ. 15 . ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ಆಹಾರ ಇಲಾಖೆ ಗುಡ್ನ್ಯೂಸ್ ನೀಡಿದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲದೆ, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ e-KYC ಪೂರ್ಣಗೊಳಿಸಲು ‘ಅನ್ನಸೇವೆ’ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.
ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ 5 ವರ್ಷಕ್ಕೊಮ್ಮೆ ರೇಷನ್ ಕಾರ್ಡ್ e-KYC ಮಾಡಿಸುವುದು ಕಡ್ಡಾಯ. ವಲಸೆ ಹೋದವರು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಈ ಡಿಜಿಟಲ್ ಸೇವೆಯನ್ನು ತರಲಾಗಿದೆ.
ಮೊಬೈಲ್ನಲ್ಲಿ e-KYC ಮಾಡುವ ಸುಲಭ ಹಂತಗಳು:’ಅನ್ನಸೇವೆ’ ಆ್ಯಪ್ ತೆರೆದು ‘ಸ್ವಯಂ/ನಾಗರಿಕ’ ಲಾಗಿನ್ ಆಯ್ಕೆ ಮಾಡಿ.ನಂತರ ನಿಮ್ಮ ಜಿಲ್ಲೆ ಹಾಗೂ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಮತ್ತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ.ಪರದೆಯ ಮೇಲೆ ಬರುವ ಕುಟುಂಬದ ಸದಸ್ಯರಲ್ಲಿ e-KYC ಮಾಡಬೇಕಾದವರನ್ನು ಆಯ್ಕೆ ಮಾಡಿ.Face Authentication ಮೂಲಕ ಕೇವಲ 5 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ.




