ಕಡಬ: ಮದ್ಯಪಾನ ಸಿಗದ್ದಕ್ಕೆ ಜಿಗುಪ್ಸೆ ➤ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಮದ್ಯಪಾನ ಚಟ ಹೊಂದಿದ್ದ ವ್ಯಕ್ತಿಯೋರ್ವರು ಮದ್ಯ ಸಿಗದ ಕಾರಣ ಜುಗುಪ್ಸೆಗೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರದಂದು ಕಡಬದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಪತ್ತನಂತಿಟ್ಟ ನಿವಾಸಿ ಟೋನಿ ಥೋಮಸ್(50) ಎಂದು ಗುರುತಿಸಲಾಗಿದೆ. ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಅವರು ವಿಪರೀತ ಮದ್ಯ ಸೇವಿಸುತ್ತಿದ್ದು, ಶುಕ್ರವಾರದಂದು ಮದ್ಯ ಸಿಗದೆ ಚಡಪಡಿಸುತ್ತಿದ್ದರು ಎನ್ನಲಾಗಿದೆ. ಶನಿವಾರದಂದು ತಾನು ವಾಸಿಸುತ್ತಿದ್ದ ಬಂಟ್ರ ಗ್ರಾಮದ ನಂದುಗುರಿ ಎಂಬಲ್ಲಿ ಮನೆಯ ಮೇಲ್ಛಾವಣಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top