ಕರಾವಳಿ

ಬಂಟ್ವಾಳ: ಶಾಲಾ ಬಸ್ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ – ಅಪಾಯಕಾರಿ ಮರಗಳ ಕೊಂಬೆ ತೆರವು

(ನ್ಯೂಸ್‌ ಕಡಬ) newskadaba.com,  ಜು.25:ಬರಿಮಾರು ಗ್ರಾಮದ ಕಲ್ಲೆಟ್ಟಿ ಬಳಿ ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ಮೃತಪಟ್ಟ ಭೀಕರ ದುರಂತದ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಬಂಟ್ವಾಳ ಪಟ್ಟಣ ಹಾಗೂ ಬಿ.ಸಿ.ರೋಡ್ ಸುತ್ತಮುತ್ತಲಿನ ರಸ್ತೆಬದಿಯ ಅಪಾಯಕಾರಿ ಮರಗಳು ಮತ್ತು ಚಾಚಿಕೊಂಡಿದ್ದ ಬೃಹತ್ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಆರಂಭಗೊಂಡಿದೆ. ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಆವರಣ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸಲಾಗಿದೆ.ಕಾರ್ಯಾಚರಣೆಯ ವೇಳೆಯಲ್ಲಿ […]

ಬಂಟ್ವಾಳ: ಶಾಲಾ ಬಸ್ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ – ಅಪಾಯಕಾರಿ ಮರಗಳ ಕೊಂಬೆ ತೆರವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Crime

ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ

(ನ್ಯೂಸ್ ಕಡಬ) newskadaba.com ಜು. 25. ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ ಶನಿವಾರ ಮಧ್ಯಾಹ್ನದ ವೇಳೆ ನಡೆದಿದೆ. ದಾಳಿಗೊಳಗಾದವರನ್ನು ವಿಕ್ಕಿ ಬಪ್ಪಲ್ ಎಂದು ಗುರುತಿಸಲಾಗಿದೆ. ರೌಡಿ ಶೀಟರ್ ಆಗಿದ್ದ ಈತ, ಪೊಲೀಸ್ ಕಣ್ಗಾವಲಿನಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಲಾಲ್ ಬಾಗ್ ಸಿಗ್ನಲ್ ಬಳಿ ಬೈಕಿನಲ್ಲಿ ಸಂಚರಿಸುತ್ತಿದ್ದ ವಿಕ್ಕಿ ಬಪ್ಪಲ್ ನನ್ನು ಬೇರೊಂದು ಬೈಕಿನಲ್ಲಿ ಹಿಂಬಾಳಿಸಿಕೊಂಡ ಬಂದ ದುಷ್ಕರ್ಮಿಯೋರ್ವ ತಲವಾರಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಮಾದಕ ವಸ್ತು ಸಾಗಾಟ ಜಾಲದ ಪ್ರಮುಖ ಆರೋಪಿ ವಿದ್ಯಾನಗರ ಪೊಲೀಸರ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಜು.25: ಕಾಸರಗೋಡು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೋರ್ವನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿಯನ್ನು ಚೆಂಗಳ ಸಮೀಪದ ಫೋರ್ಥ್ ಮೈಲ್ ನಿವಾಸಿ ಮೊಹಮ್ಮದ್ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೀರ್ಘಕಾಲದಿಂದ ಮಾದಕ ದ್ರವ್ಯ ಸಾಗಾಟದ ಜಾಲ ನಡೆಸುತ್ತಿದ್ದ ಆರೋಪವಿದೆ.ವಿದ್ಯಾನಗರ, ಮೇಲ್ಪರಂಬ ಹಾಗೂ ಅಡೂರು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಮಾದಕ ದ್ರವ್ಯ ಕಾಯ್ದೆ (NDPS Act) ಅಡಿಯಲ್ಲಿ ಹಲವು ಪ್ರಕರಣಗಳು

ಕಾಸರಗೋಡು: ಮಾದಕ ವಸ್ತು ಸಾಗಾಟ ಜಾಲದ ಪ್ರಮುಖ ಆರೋಪಿ ವಿದ್ಯಾನಗರ ಪೊಲೀಸರ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಬೃಹತ್ ಪ್ರತಿಭಟನೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿದ್ಯಾರ್ಥಿಗಳ ಆಗ್ರಹ

(ನ್ಯೂಸ್ ಕಡಬ) newskadaba.com ಜು. 25. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಹಗರಣವನ್ನು ಖಂಡಿಸಿ ‘ವಿ ದಿ ಪೀಪಲ್ ಆಫ್ ಇಂಡಿಯಾ’ ಮಂಗಳೂರು ಸಂಘಟನೆಯ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಇಲ್ಲಿನ ಹಂಪನಕಟ್ಟೆಯ ಮಿಲಾಗ್ರಿಸ್ ಸರ್ಕಲ್‌ನಿಂದ ಕುದ್ಮುಲ್ ರಂಗರಾವ್ ಪುರಭವನದವರೆಗೆ ಮೆರವಣಿಗೆ ನಡೆಸಿ, ಶಾಂತಿಯುತ ಸಮಾವೇಶ ನಡೆಸಲಾಯಿತು. ನೀಟ್ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು.

ಮಂಗಳೂರು ಬೃಹತ್ ಪ್ರತಿಭಟನೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿದ್ಯಾರ್ಥಿಗಳ ಆಗ್ರಹ Read More »

ಕರಾವಳಿ

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗಿನ ಮೇಲೆ ದಾಳಿ: ಓರ್ವ ಭಾರತೀಯ ನಾಗರಿಕ ಮೃತ್ಯು

(ನ್ಯೂಸ್‌ ಕಡಬ) newskadaba.com,  ಜು.25: ಕಪ್ಪು ಸಮುದ್ರದ ಮೂಲಕ ಸಾಗುತ್ತಿದ್ದ MV OMORFI ಎಂಬ ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ ನಡೆದಿದ್ದು, ಭಾರತೀಯ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಜುಲೈ 18 ರಂದು ರಷ್ಯಾದ ಪ್ರಾದೇಶಿಕ ಜಲಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ವಿದೇಶಾಂಗ ಸಚಿವಾಲಯ (MEA) ಶುಕ್ರವಾರ ಈ ಮಾಹಿತಿಯನ್ನು ಖಚಿತಪಡಿಸಿದೆ. ದಾಳಿಯ ಸಮಯದಲ್ಲಿ ಹಡಗಿನಲ್ಲಿ ಒಟ್ಟು 10 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ಮೂವರು ಭಾರತೀಯ ಪ್ರಜೆಗಳಾಗಿದ್ದರು.ಘಟನೆಯಲ್ಲಿ ಓರ್ವ ಭಾರತೀಯ ಪ್ರಜೆ ಅಸುನೀಗಿದ್ದು, ಹಡಗಿನಲ್ಲಿದ್ದ ಉಳಿದ ಇಬ್ಬರು

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗಿನ ಮೇಲೆ ದಾಳಿ: ಓರ್ವ ಭಾರತೀಯ ನಾಗರಿಕ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

‘ಅನ್ನಭಾಗ್ಯ’ ಫಲಾನುಭವಿಗಳಿಗೆ ‘ಇಂದಿರಾ ಕಿಟ್’: ಸಿಗದಿದ್ದರೆ ನೇರ ಖಾತೆಗೆ ಹಣ जमा!

(ನ್ಯೂಸ್‌ ಕಡಬ) newskadaba.com,  ಜು.25: ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು ಪ್ರಸ್ತುತ ಇರುವ ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಫಾರಸಿನಂತೆ ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ತೆರಿಗೆ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಪಡಿತರ ತಡೆಹಿಡಿಯಲಾದ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.ಬಿಪಿಎಲ್ ಕುಟುಂಬದ ಮುಖ್ಯಸ್ಥೆ ನಿಧನರಾದರೆ, ಅವರ ಸ್ಥಾನಕ್ಕೆ ಸೊಸೆ ಅಥವಾ

‘ಅನ್ನಭಾಗ್ಯ’ ಫಲಾನುಭವಿಗಳಿಗೆ ‘ಇಂದಿರಾ ಕಿಟ್’: ಸಿಗದಿದ್ದರೆ ನೇರ ಖಾತೆಗೆ ಹಣ जमा! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ AI ಕೋರ್ಸ್ ಪ್ರಾರಂಭ: ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ

(ನ್ಯೂಸ್‌ ಕಡಬ) newskadaba.com,  ಜು.25: ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ತಾಂತ್ರಿಕ ಕೌಶಲ, ಸೃಜನಶೀಲತೆ ಹಾಗೂ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. 2026-27ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ವಿಷಯವನ್ನು ಬೋಧಿಸಲು ನಿರ್ಧರಿಸಲಾಗಿದೆ. ವಿಷಯ ಬದಲಾವಣೆಗಳು ಈ ಹಿಂದೆ ಇದ್ದ ಬ್ಯೂಟಿ ಆಂಡ್ ವೆಲ್‌ನೆಸ್, ರಿಟೇಲ್ ಹಾಗೂ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗಳ ಬದಲಿಗೆ, ತೃತೀಯ ಭಾಷೆಯ ಸ್ಥಾನದಲ್ಲಿ ಎಐ ಕೌಶಲ ಶಿಕ್ಷಣವನ್ನು

ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ AI ಕೋರ್ಸ್ ಪ್ರಾರಂಭ: ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಬಾರ್ & ರೆಸ್ಟೋರೆಂಟ್ ಗೆ ದಾಳಿ: ಕಿಶೋರ ಕಾರ್ಮಿಕ ಪತ್ತೆ

(ನ್ಯೂಸ್ ಕಡಬ) newskadaba.com ಜು. 25. ಕಾರ್ಮಿಕ ಇಲಾಖಾ ಅಧಿಕಾರಿಗಳು, ಪುತ್ತೂರು ಹಾಗೂ ಚೈಲ್ಡ್ ಲೈನ್ ಸಂಯೋಜಕರು  ಶುಕ್ರವಾರದಂದು ಅನಿರೀಕ್ಷಿತ  ತಪಾಸಣೆ ನಡೆಸಿದಾಗ ಉಪ್ಪಿನಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‍ನಲ್ಲಿ ಬಿಹಾರ ಮೂಲದ 15 ವರ್ಷದ ಕಿಶೋರ ಕಾರ್ಮಿಕನನ್ನು ದುಡಿಸಿಕೊಳ್ಳುತ್ತಿದ್ದು ಪತ್ತೆಯಾಗಿದ್ದು, ಕ್ಲೀನರ್ ಕೆಲಸಕ್ಕೆ ನೇಮಿಸಿಕೊಂಡಿದ್ದ ಕಿಶೋರ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪುನರ್ ವಸತಿಗಾಗಿ ಹಾಜರುಪಡಿಸಲಾಯಿತು. ಕಾರ್ಯಚರಣೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ( ಪುತ್ತೂರು ವೃತ್ತ) ವಿರೇಂದ್ರ ಕುಂಬಾರ್, ಜಿಲ್ಲಾ

ಉಪ್ಪಿನಂಗಡಿ: ಬಾರ್ & ರೆಸ್ಟೋರೆಂಟ್ ಗೆ ದಾಳಿ: ಕಿಶೋರ ಕಾರ್ಮಿಕ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಮೊಡಂಕಾಪು ದೇವಸ್ಥಾನದಲ್ಲಿ ಕಳವು — 57,000 ರೂ. ಮೌಲ್ಯದ ಪೂಜಾ ಸಾಮಗ್ರಿಗಳು ಗಾಯಬ್!

(ನ್ಯೂಸ್‌ ಕಡಬ) newskadaba.com,  ಜು.25:  ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಖ್ಯ ಪ್ರವೇಶ ದ್ವಾರದ ಬೀಗ ಒಡೆದು ಕಳ್ಳರು ಪುರಾತನ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ. ಬೆಳ್ಳಿ ವಸ್ತುಗಳು, ಒಂದು ಕಾಣಿಕೆ ಪಾತ್ರೆ, 10 ಸಾಂಪ್ರದಾಯಿಕ ದೀಪಗಳು, 10 ಹಿತ್ತಾಳೆ ಕಲಶಗಳು, 5 ಹಿತ್ತಾಳೆ ತಟ್ಟೆಗಳು, ತಾಮ್ರದ ಹಾಗೂ ಉಕ್ಕಿನ ಪಾತ್ರೆಗಳು ಸೇರಿ ಒಟ್ಟು ₹57,000 ಮೌಲ್ಯದ ಸಾಮಗ್ರಿಗಳು.ಮೂವರು ಕಳ್ಳರು ಕದ್ದ ವಸ್ತುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿರುವ ದೃಶ್ಯ ದೇವಸ್ಥಾನದ ಸಿಸಿಟಿವಿ

ಬಂಟ್ವಾಳ: ಮೊಡಂಕಾಪು ದೇವಸ್ಥಾನದಲ್ಲಿ ಕಳವು — 57,000 ರೂ. ಮೌಲ್ಯದ ಪೂಜಾ ಸಾಮಗ್ರಿಗಳು ಗಾಯಬ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉದ್ಯೋಗಾವಕಾಶ: ಜುಲೈ 30ರಂದು ಸಂದರ್ಶನ

(ನ್ಯೂಸ್ ಕಡಬ) newskadaba.com ಜು. 25. ಎಕ್ಸ್‍ ಪರ್ಟ್ ಕಾಲೇಜು, ಕ್ಯಾಲಿಬರ್ ಹಾಗೂ ಕೋಜೆಂಟ್ ಇ-ಸರ್ವಿಸಸ್ ಕಂಪೆನಿಯ ವತಿಯಿಂದ ಖಾಲಿ ಇರುವ ಹಾಸ್ಟೆಲ್ ವಾರ್ಡನ್, ಕಸ್ಟಮರ್ ಸಪೋರ್ಟ್ ಅಸೋಸಿಯೇಟ್ ಮತ್ತು ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್ ಲೀಡರ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಜುಲೈ 30 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೀಲ್ ಪ್ರಜಾಸೌಧದ ನೆಲಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಆಯೋಜಿಸಲಾಗಿದೆ. ನೇರ ಸಂದರ್ಶನದಲ್ಲಿ ಪಿ.ಯು.ಸಿ, ಡಿಪ್ಲೊಮಾ, ಯಾವುದೇ ಪದವಿ ಹಾಗೂ ಮೇಲ್ಪಟ್ಟ

ಉದ್ಯೋಗಾವಕಾಶ: ಜುಲೈ 30ರಂದು ಸಂದರ್ಶನ Read More »

ಕರಾವಳಿ
Scroll to Top