ಕರಾವಳಿ

ಕಡಬದಲ್ಲೊಂದು ಸ್ವಾರಸ್ಯಕರ ಘಟನೆ ಪ್ರೇಮಿಗಳ ಜಗಳಕ್ಕೆ ಚರಂಡಿ ಸೇರಿದ ಕೀ- ನಾಲ್ಕು ಗಂಟೆ ಹುಡುಕಾಟ

(ನ್ಯೂಸ್ ಕಡಬ) newskadaba.com ಜು. 25. ಸಣ್ಣ ವಿಷಯಕ್ಕೆ ಆರಂಭವಾದ ಮಾತಿನ ಚಕಮಕಿಯೊಂದು ಕಾರಿನ ಕೀ ಚರಂಡಿಗೆ ಸೇರುವಂತೆ ಮಾಡಿದ್ದು, ಬಳಿಕ ಕೀಗಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಹುಡುಕಾಟ ನಡೆಸಿದ ಸ್ವಾರಸ್ಯಕರ ಘಟನೆ ಶುಕ್ರವಾರ ಕಡಬ ಸಂತೆಕಟ್ಟೆ ಬಳಿ ನಡೆದಿದೆ.   ಮಾಹಿತಿಯ ಪ್ರಕಾರ, ಈಶ್ವರಮಂಗಲ ಮೂಲದ ಯುವಕನೊಬ್ಬ ಸ್ನೇಹಿತನ ಕಾರಿನಲ್ಲಿ ಕಡಬಕ್ಕೆ ಆಗಮಿಸಿದ್ದು, ಜನ್ಮದಿನದ ಶುಭಾಶಯ ತಿಳಿಸಲು ಸಂತೆಕಟ್ಟೆ ಸಮೀಪದ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯದ ಯುವತಿಯನ್ನು ಭೇಟಿ ಮಾಡಿದ್ದಾನೆ ಎನ್ನಲಾಗಿದೆ. ಕಚೇರಿ […]

ಕಡಬದಲ್ಲೊಂದು ಸ್ವಾರಸ್ಯಕರ ಘಟನೆ ಪ್ರೇಮಿಗಳ ಜಗಳಕ್ಕೆ ಚರಂಡಿ ಸೇರಿದ ಕೀ- ನಾಲ್ಕು ಗಂಟೆ ಹುಡುಕಾಟ Read More »

ಕರಾವಳಿ

ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಜು. 24. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ಜು. 25ರ ಶನಿವಾರದಂದು ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ

2025-26ನೇ ಸಾಲಿನ ಅಖಿಲ ಭಾರತ ಅಂತರ್ ಎನ್ಐಟಿ ಕ್ರೀಡಾಕೂಟ ಸಮಗ್ರ ಚಾಂಪಿಯನ್ ಷಿಪ್ ಗೆದ್ದ ಸುರತ್ಕಲ್ ಎನ್.ಐಟಿಕೆ

(ನ್ಯೂಸ್ ಕಡಬ) newskadaba.com ಜು. 24. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಭಾರತದ ಎಲ್ಲಾ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ (ಎನ್‌ಐಟಿ) ಪೈಕಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅಖಿಲ ಭಾರತ ಅಂತರ್ ಎನ್‌ಐಟಿ (ಎಐಐಎನ್‌ಐಟಿ) ಕ್ರೀಡಾಕೂಟದಲ್ಲಿ ಭಾಗವಹಿಸಿದ ಎನ್‌ಐಟಿಗಳ ಪೈಕಿ ಗರಿಷ್ಠ 144 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದಿದೆ. ಈ ಸಾಧನೆಯೊಂದಿಗೆ ಅಥ್ಲೆಟಿಕ್ಸ್, ತಂಡ ಕ್ರೀಡೆಗಳು, ರಾಕೆಟ್ ಕ್ರೀಡೆಗಳು ಮತ್ತು ಶಕ್ತಿ ಆಧಾರಿತ ಕ್ರೀಡೆಗಳಲ್ಲಿ ಎನ್‌ಐಟಿಕೆ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದು,

2025-26ನೇ ಸಾಲಿನ ಅಖಿಲ ಭಾರತ ಅಂತರ್ ಎನ್ಐಟಿ ಕ್ರೀಡಾಕೂಟ ಸಮಗ್ರ ಚಾಂಪಿಯನ್ ಷಿಪ್ ಗೆದ್ದ ಸುರತ್ಕಲ್ ಎನ್.ಐಟಿಕೆ Read More »

ಕರಾವಳಿ, ಕ್ರೀಡಾ ನ್ಯೂಸ್

ಐಫೋನ್ ಬದಲು ಎಣ್ಣೆ ಪಾರ್ಸೆಲ್! ಫ್ಲಿಪ್‌ಕಾರ್ಟ್‌ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

(ನ್ಯೂಸ್‌ ಕಡಬ) newskadaba.com,  ಜು.24: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ‘ಗಡ್ಡ ಬೆಳೆಸುವ ಎಣ್ಣೆ’ಕಳುಹಿಸಿದ್ದ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ. ಏಪ್ರಿಲ್ 2023ರಲ್ಲಿ ಮುಂಬೈನ ಪೊವೈ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್‌ನಲ್ಲಿ ₹1,11,793 ಮೌಲ್ಯದ ಆ್ಯಪಲ್ ಐಫೋನ್ 14 ಪ್ರೊ ಆರ್ಡರ್ ಮಾಡಿದ್ದರು. ಆದರೆ, ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಫೋನ್ ಬದಲು ಗಡ್ಡದ ಎಣ್ಣೆ ಬಾಟಲಿ ಪತ್ತೆಯಾಗಿತ್ತು. ಗ್ರಾಹಕ ಸಾಕ್ಷ್ಯಗಳೊಂದಿಗೆ ದೂರು ನೀಡಿದರೂ,

ಐಫೋನ್ ಬದಲು ಎಣ್ಣೆ ಪಾರ್ಸೆಲ್! ಫ್ಲಿಪ್‌ಕಾರ್ಟ್‌ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ: 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್

(ನ್ಯೂಸ್‌ ಕಡಬ) newskadaba.com,  ಜು.24:  ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ ಪಡೆದಿದ್ದ 249 ಅತಿಥಿ ಉಪನ್ಯಾಸಕರ ವಂಚನೆ ಬೆಳಕಿಗೆ ಬಂದಿದೆ.ಸಂಬಂಧಿತ ಉಪನ್ಯಾಸಕರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಿ, ಭವಿಷ್ಯದ ನೇಮಕಾತಿಗಳಿಂದ ಕಪ್ಪುಪಟ್ಟಿಗೆ ಸೇರಿಸಲು ಆದೇಶಿಸಲಾಗಿದೆ. ಇಲಾಖೆಯ ಆಯುಕ್ತರು ಎಲ್ಲಾ 249 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 1 ವಾರದೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.ಒಟ್ಟು 249 ಪ್ರಕರಣಗಳಲ್ಲಿ 148 ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲೇ ವರದಿಯಾಗಿವೆ. ಕಲಬುರಗಿ

ನಕಲಿ PhD ಪ್ರಮಾಣಪತ್ರ ನೀಡಿ ಉದ್ಯೋಗ: 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್: ಶಿಕ್ಷೆ ಅವಧಿ 10 ವರ್ಷಕ್ಕೆ ಏರಿಕೆ ಸಾಧ್ಯತೆ!

(ನ್ಯೂಸ್‌ ಕಡಬ) newskadaba.com,  ಜು. 24:ದೇಶದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ತಡೆಯಲು ಹಾಲಿ ಇರುವ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ 2024 ಕ್ಕೆ ತಿದ್ದುಪಡಿ ತರಲು ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಗುವ ಸಾಧ್ಯತೆಯಿದೆ. ಹಾಲಿ ನಿಯಮವು 3 ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ  ಇತ್ತು.ಆದರೆ ಪ್ರಸ್ತಾವಿತ ತಿದ್ದುಪಡಿಯಲ್ಲಿ 5 ರಿಂದ 10 ವರ್ಷ ಜೈಲು

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್: ಶಿಕ್ಷೆ ಅವಧಿ 10 ವರ್ಷಕ್ಕೆ ಏರಿಕೆ ಸಾಧ್ಯತೆ! Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ: ಕ್ಯಾಮೆರಾದಲ್ಲಿ ದೃಶ್ಯ ಸೆರೆ

(ನ್ಯೂಸ್ ಕಡಬ) newskadaba.com ಜು. 24. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ ವೇಳೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಚಾರ್ಮಾಡಿ ಘಾಟ್‌ನ 11 ನೇ ಹೇರ್‌ ಪಿನ್ ತಿರುವಿನಲ್ಲಿ ರಸ್ತೆಬದಿಯ ತಡೆಗೋಡೆಯ ಮೇಲೆ ಕುಳಿತಿದ್ದ ಚಿರತೆ, ಬಳಿಕ ರಸ್ತೆಬದಿಯಲ್ಲಿ ಸಂಚರಿಸಿದೆ. ಈ ದೃಶ್ಯಗಳನ್ನು ಹಾದುಹೋಗುತ್ತಿದ್ದ ವಾಹನ ಸವಾರರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಕಳೆದ ತಿಂಗಳು ಈ ಸ್ಥಳದಿಂದ ಸುಮಾರು 6 ಕಿ.ಮೀ ದೂರದ ಘಾಟ್ ಭಾಗದಲ್ಲಿ

ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ: ಕ್ಯಾಮೆರಾದಲ್ಲಿ ದೃಶ್ಯ ಸೆರೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣ: ಆಗಸ್ಟ್ 1 ರಂದು ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು

(ನ್ಯೂಸ್ ಕಡಬ) newskadaba.com ಜು. 24. ಮೈ ಭಾರತ್ ಕೇಂದ್ರ ದಕ್ಷಿಣ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ದಕ್ಷಿಣ ಕನ್ನಡ), ರಾಷ್ಟ್ರೀಯ ಸೇವಾ ಯೋಜನೆ (ಓSS), ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಶ್ರೀ ರಾಮಕೃಷ್ಣ ಕಾಲೇಜು ಮಂಗಳೂರು ಜಂಟಿ ಆಶ್ರಯದಲ್ಲಿ “ನಶಾ ಮುಕ್ತ ಯುವ – ವಿಕಸಿತ ಭಾರತ” ದೇಶವ್ಯಾಪಿ ಅಭಿಯಾನದಡಿ, ಯುವಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು   ಆಗಸ್ಟ್ 1 ರಂದು

ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣ: ಆಗಸ್ಟ್ 1 ರಂದು ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು Read More »

ಕರಾವಳಿ

ಎಸ್.ಐ.ಆರ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13.72 ಲಕ್ಷ ಫಾರಂ ಡಿಜಿಟೈಸ್

(ನ್ಯೂಸ್ ಕಡಬ) newskadaba.com ಜು. 24. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 22 ರವರೆಗೆ  18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 13,72,632 ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರವಾರು ನಮೂನೆ ಡಿಜಿಟೈಸ್ ಮಾಡಿದ ವಿವರ: ಬೆಳ್ತಂಗಡಿ-183809, ಮೂಡಬಿದ್ರೆ-160469, ಮಂಗಳೂರು ನಗರ ಉತ್ತರ-165189, ಮಂಗಳೂರು ನಗರ ದಕ್ಷಿಣ-162326, ಮಂಗಳೂರು-182916, ಬಂಟ್ವಾಳ-169517, ಪುತ್ತೂರು-168382, ಸುಳ್ಯ-180024.

ಎಸ್.ಐ.ಆರ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13.72 ಲಕ್ಷ ಫಾರಂ ಡಿಜಿಟೈಸ್ Read More »

ಕರಾವಳಿ

ಅಪೂರ್ಣ ರಸ್ತೆ ಕಾಮಗಾರಿಗೆ ಬಲಿಯಾದ ವಾಹನ: ಸೇಡಿಯಾಪು ಕಾಪುವಿನಲ್ಲಿ ಟಾಟಾ ಏಸ್ ಮಗುಚಿ ಅಪಘಾತ

(ನ್ಯೂಸ್‌ ಕಡಬ) newskadaba.com,  ಜು. 24: ಉಪ್ಪಿನಂಗಡಿ ಸಮೀಪದ ಸೇಡಿಯಾಪು ಕಾಪು ಎಂಬಲ್ಲಿ ಜುಲೈ 23ರಂದು ಟಾಟಾ ಏಸ್ ಸರಕು ಸಾಗಣೆ ವಾಹನವೊಂದು ಪಲ್ಟಿಯಾಗಿ 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಕೊಯಿಲಾದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಚಲಾಯಿಸುತ್ತಿದ್ದ ವಾಹನದ ಚಕ್ರ ರಸ್ತೆಯಂಚಿಗೆ ಇಳಿದು ಈ ಅಪಘಾತ ಸಂಭವಿಸಿದೆ. ಪರಿಣಾಮ ವಾಹನದಲ್ಲಿದ್ದ ಅವರ ಪುತ್ರ ಗಾಯಗೊಂಡಿದ್ದಾರೆ. ಇತ್ತೀಚೆಗೆ ಪೂರ್ಣಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿಯ ಬಳಿಕ ರಸ್ತೆಯಂಚಿಗೆ ಮಣ್ಣು ಹಾಕದ ಕಾರಣ ಆಳವಾದ

ಅಪೂರ್ಣ ರಸ್ತೆ ಕಾಮಗಾರಿಗೆ ಬಲಿಯಾದ ವಾಹನ: ಸೇಡಿಯಾಪು ಕಾಪುವಿನಲ್ಲಿ ಟಾಟಾ ಏಸ್ ಮಗುಚಿ ಅಪಘಾತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top