ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣ: ಆಗಸ್ಟ್ 1 ರಂದು ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳು



(ನ್ಯೂಸ್ ಕಡಬ) newskadaba.com ಜು. 24. ಮೈ ಭಾರತ್ ಕೇಂದ್ರ ದಕ್ಷಿಣ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ದಕ್ಷಿಣ ಕನ್ನಡ), ರಾಷ್ಟ್ರೀಯ ಸೇವಾ ಯೋಜನೆ (ಓSS), ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಶ್ರೀ ರಾಮಕೃಷ್ಣ ಕಾಲೇಜು ಮಂಗಳೂರು ಜಂಟಿ ಆಶ್ರಯದಲ್ಲಿ “ನಶಾ ಮುಕ್ತ ಯುವ – ವಿಕಸಿತ ಭಾರತ” ದೇಶವ್ಯಾಪಿ ಅಭಿಯಾನದಡಿ, ಯುವಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು   ಆಗಸ್ಟ್ 1 ರಂದು ಬೆಳಿಗ್ಗೆ 9:30 ರಿಂದ ನಗರದ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ಆಯೋಜಿಸಲಾಗಿದೆ.







ಸ್ಪರ್ಧೆಗಳ ವಿವರ






ಸಮೂಹ ಗೀತೆ (Group Song), ಸಮೂಹ ನೃತ್ಯ (Group Dance), ರೀಲ್ಸ್ / ಕಿರುಚಿತ್ರ ಸ್ಪರ್ಧೆ (Reels / Short Film), ಮೂಕಾಭಿನಯ (Mime Competition), ಸ್ಲ್ಯಾಮ್ ಪೋಯೆಟ್ರಿ (Slam Poetry/ ಕವನ ವಾಚನ), ಭಾಷಣ ಸ್ಪರ್ಧೆ (Speech Competition), ಘೋಷವಾಕ್ಯ ಬರಹ (Slogan Writing), ಚಿತ್ರಕಲೆ ಸ್ಪರ್ಧೆ (Painting Competition)
ಜಿಲ್ಲಾಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ವಿಜೇತರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.

ಅರ್ಹತೆ ಮತ್ತು ನೋಂದಣಿ ವಿವರಗಳು

ಜುಲೈ 1, 2026ಕ್ಕೆ ಅನ್ವಯವಾಗುವಂತೆ 15 ರಿಂದ 29 ವರ್ಷದೊಳಗಿನ  ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳು, ವಿದ್ಯಾರ್ಥಿಗಳು, ಯುವಕ-ಯುವತಿಯರು ಭಾಗವಹಿಸಬಹುದು. ನೋಂದಣಿಗೆ ಕೊನೆಯ ದಿನ ಜುಲೈ 30.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ  ಮೈ ಭಾರತ್ ಕೇಂದ್ರದ ದೂ.ಸಂ: 9961332968 ಅಥವಾ ವೆಬ್‍ಸೈಟ್ mybharat.gov.in ಸಂಪರ್ಕಿಸಬಹುದು ಎಂದು ಮೈ ಭಾರತ್  ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top