ಉದ್ಯೋಗಾವಕಾಶ: ಜುಲೈ 30ರಂದು ಸಂದರ್ಶನ



(ನ್ಯೂಸ್ ಕಡಬ) newskadaba.com ಜು. 25. ಎಕ್ಸ್‍ ಪರ್ಟ್ ಕಾಲೇಜು, ಕ್ಯಾಲಿಬರ್ ಹಾಗೂ ಕೋಜೆಂಟ್ ಇ-ಸರ್ವಿಸಸ್ ಕಂಪೆನಿಯ ವತಿಯಿಂದ ಖಾಲಿ ಇರುವ ಹಾಸ್ಟೆಲ್ ವಾರ್ಡನ್, ಕಸ್ಟಮರ್ ಸಪೋರ್ಟ್ ಅಸೋಸಿಯೇಟ್ ಮತ್ತು ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್ ಲೀಡರ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ಜುಲೈ 30 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೀಲ್ ಪ್ರಜಾಸೌಧದ ನೆಲಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಆಯೋಜಿಸಲಾಗಿದೆ.
ನೇರ ಸಂದರ್ಶನದಲ್ಲಿ ಪಿ.ಯು.ಸಿ, ಡಿಪ್ಲೊಮಾ, ಯಾವುದೇ ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ಭಾಗವಹಿಸಬಹುದು. ಕೆಲಸದ ಸ್ಥಳ: ಮಂಗಳೂರು.







ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top