ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ AI ಕೋರ್ಸ್ ಪ್ರಾರಂಭ: ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ



(ನ್ಯೂಸ್‌ ಕಡಬ) newskadaba.com,  ಜು.25: ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ತಾಂತ್ರಿಕ ಕೌಶಲ, ಸೃಜನಶೀಲತೆ ಹಾಗೂ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. 2026-27ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ವಿಷಯವನ್ನು ಬೋಧಿಸಲು ನಿರ್ಧರಿಸಲಾಗಿದೆ.







ವಿಷಯ ಬದಲಾವಣೆಗಳು ಈ ಹಿಂದೆ ಇದ್ದ ಬ್ಯೂಟಿ ಆಂಡ್ ವೆಲ್‌ನೆಸ್, ರಿಟೇಲ್ ಹಾಗೂ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗಳ ಬದಲಿಗೆ, ತೃತೀಯ ಭಾಷೆಯ ಸ್ಥಾನದಲ್ಲಿ ಎಐ ಕೌಶಲ ಶಿಕ್ಷಣವನ್ನು ನೀಡಲಾಗುತ್ತದೆ.ಶಾಲಾ ವಿವರಣೆಯು ಹೊಸದಾಗಿ ಅನುಮೋದಿತ ಸರ್ಕಾರಿ ಪ್ರೌಢಶಾಲೆಗಳು: 1,180, ಎನ್‌ಎಸ್‌ಕ್ಯೂಎಫ್ ಶಾಲೆಗಳು: 381 , ಹಾಗೂ ಚಾಲ್ತಿಯಲ್ಲಿರುವ ಸಿಂಗಲ್ ಸೆಕ್ಟರ್ ಶಾಲೆಗಳು: 81..






ಯೋಜನೆ ಅನುಷ್ಠಾನಕ್ಕಾಗಿ ಪ್ರತಿ ಶಾಲೆಗೆ ಒಬ್ಬರಂತೆ ಎಐ ಅತಿಥಿ ಶಿಕ್ಷಕರನ್ನು SDMC ಮೂಲಕ ನೇಮಕ ಮಾಡಿಕೊಳ್ಳಲಾಗುವುದು.ಕಂಪ್ಯೂಟರ್ ಸೈನ್ಸ್/ಐಟಿಯಲ್ಲಿ ಡಿಪ್ಲೊಮಾ, BCA, B.Sc (CS/IT), PGDCA ಅಥವಾ DOEACC ‘A’ ಲೆವೆಲ್ ಪ್ರಮಾಣಪತ್ರ ಹೊಂದಿರಬೇಕು.

ತಿಂಗಳಿಗೆ ₹20,000 ಗೌರವಧನ ನಿಗದಿಪಡಿಸಲಾಗಿದ್ದು, ಜುಲೈ 28ರೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಆಗಸ್ಟ್ ಮೊದಲ ವಾರದಲ್ಲಿ ಆಯ್ಕೆಯಾದ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.

error: Content is protected !!
Scroll to Top