(ನ್ಯೂಸ್ ಕಡಬ) newskadaba.com ಜು. 25. ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ ಶನಿವಾರ ಮಧ್ಯಾಹ್ನದ ವೇಳೆ ನಡೆದಿದೆ.
ದಾಳಿಗೊಳಗಾದವರನ್ನು ವಿಕ್ಕಿ ಬಪ್ಪಲ್ ಎಂದು ಗುರುತಿಸಲಾಗಿದೆ. ರೌಡಿ ಶೀಟರ್ ಆಗಿದ್ದ ಈತ, ಪೊಲೀಸ್ ಕಣ್ಗಾವಲಿನಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಲಾಲ್ ಬಾಗ್ ಸಿಗ್ನಲ್ ಬಳಿ ಬೈಕಿನಲ್ಲಿ ಸಂಚರಿಸುತ್ತಿದ್ದ ವಿಕ್ಕಿ ಬಪ್ಪಲ್ ನನ್ನು ಬೇರೊಂದು ಬೈಕಿನಲ್ಲಿ ಹಿಂಬಾಳಿಸಿಕೊಂಡ ಬಂದ ದುಷ್ಕರ್ಮಿಯೋರ್ವ ತಲವಾರಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಪರಿಣಾಮ ವಿಕ್ಕಿ ಬಪ್ಪಲ್ ನ ಕುತ್ತಿಗೆಯ ಬಳಿ ಆಳವಾದ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.









