ಕರಾವಳಿ

ರೆಂಜಿಲಾಡಿ; ರಾಷ್ಟ್ರೀಯ ಕ್ರೀಡಾಪಟು ಮೋಹನ್ ಕೆರೆಕೋಡಿ ಅವರಿಗೆ ಸಮ್ಮಾನ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಫೆ.16. ರಾಷ್ಟ್ರಮಟ್ಟದ ಅತ್ಲೇಟಿಕ್ಸ್ ನಲ್ಲಿ ಚಿನ್ನದ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಮೋಹನ್ ಕೆರೆಕೋಡಿ ಅವರನ್ನು ರೆಂಜಿಲಾಡಿ ಗೋಳಿಯಡ್ಕ ಪುಂಡಿಕ್‍ಮಾಡ ಶ್ರೀ ರಾಜನ್ ದೈವದ ನೇಮೋತ್ಸವದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲರು ಸಾಧಕ ಕ್ರೀಡಾಪಟುವನ್ನು ಸಮ್ಮಾನಿಸಿ ಗೌರವಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಶುಭಹಾರೈಸಿದರು. ಪ್ರಮುಖರಾದ ರಾಜೇಂದ್ರ ಮಳಮಜಲು, ಭಾಸ್ಕರ ಗೌಡ ಎಳುವಾಳೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಉಮೇಶ್ ಶೆಟ್ಟಿ […]

ರೆಂಜಿಲಾಡಿ; ರಾಷ್ಟ್ರೀಯ ಕ್ರೀಡಾಪಟು ಮೋಹನ್ ಕೆರೆಕೋಡಿ ಅವರಿಗೆ ಸಮ್ಮಾನ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ಹಾಫ್ ಮ್ಯಾರಥಾನ್; ಚಂದ್ರಶೇಖರ್ ಬಿಳಿನೆಲೆ ಪ್ರಥಮ

(ನ್ಯೂಸ್ ಕಡಬ) newskadaba.com, ಸುಬ್ರಹ್ಮಣ್ಯ, ಫೆ.17: ಮಣಿಪಾಲದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 21 ಕಿಲೋಮೀಟರ್ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಬೈಲು ಬಿಳಿನೆಲೆ ಸ.ಹಿ.ಪ್ರಾ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬಿಳಿನೆಲೆ ಅವರು 40-55 ವಯೋಮಾನದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿ ಹಾಗೂ ನಗದು ಬಹುಮಾನ ಗಳಿಸಿರುತ್ತಾರೆ.

ಹಾಫ್ ಮ್ಯಾರಥಾನ್; ಚಂದ್ರಶೇಖರ್ ಬಿಳಿನೆಲೆ ಪ್ರಥಮ Read More »

ಕರಾವಳಿ

ಬೈಂದೂರು: ಭೂ ಕುಸಿತದಿಂದ ಕೊಳವೆ ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

ಬೈಂದೂರು, ಫೆ.16: ಬೈಂದೂರು ತಾಲೂಕಿನ ಮರವಂತೆಯಲ್ಲಿ ಭೂ ಕುಸಿತದಲ್ಲಿ ಭಾನುವಾರ ಕೊಳವೆ ಬಾವಿಯೊಳಗೆ ಸಿಲುಕಿದ್ದ ವ್ಯಕ್ತಿಯನ್ನು 6 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ. ಭೂ ಕುಸಿತಕ್ಕೆ ಸಿಲುಕಿದ ರೋಹಿತ್ ಖಾರ್ವಿಯವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾವಿಯೊಳಗಿಂದ ಹೊರತೆಗೆಯಲಾಗಿದೆ. ಬಳಿಕ ವೈದ್ಯರು ಆಗಮಿಸಿ ರೋಹಿತ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ರೋಹಿತ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊಳವೆಬಾವಿ ಕೊರೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅದರ ಸುತ್ತ ಭಾರೀ

ಬೈಂದೂರು: ಭೂ ಕುಸಿತದಿಂದ ಕೊಳವೆ ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ Read More »

ಕರಾವಳಿ

ಪೊಳಲಿ: ಬಸ್ಸುಗಳೆರೆಡು ಢಿಕ್ಕಿ, 20ಕ್ಕೂ ಅಧಿಕ ಮಂದಿಗೆ ಗಾಯ

ಬಂಟ್ವಾಳ, ಫೆ.16: ಖಾಸಗಿ ಎರಡು ಬಸ್‌ಗಳು ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿ.ಸಿ.ರೋಡ್- ಪೊಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ನಡೆದಿದೆ. ಬಿ.ಸಿ .ರೋಡ್‌ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದ ಸರ್ವೀಸ್ ಬಸ್‌ಗೆ ಮದುವೆ ದಿಬ್ಬಣದ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆನ್ನಲಾಗಿದೆ. ಇದರಿಂದ ಎರಡು ಬಸ್‌ಗಳನಲ್ಲಿದ್ದ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬಂಟ್ವಾಳ

ಪೊಳಲಿ: ಬಸ್ಸುಗಳೆರೆಡು ಢಿಕ್ಕಿ, 20ಕ್ಕೂ ಅಧಿಕ ಮಂದಿಗೆ ಗಾಯ Read More »

ಕರಾವಳಿ

ಮಂಗಳೂರು: ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾದ ತಂದೆ-ಮಗ

ಮಂಗಳೂರು, ಫೆ.16: ತಂದೆ ಹಾಗೂ ಐದು ವರ್ಷದ ಪುತ್ರ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ರವಿವಾರ ಬೆಳಗ್ಗೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾದವರನ್ನು ಬಂಟ್ವಾಳ, ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ(45), ಹಾಗೂ ಅವರ ಪುತ್ರ ಅನೀಶ್ ರೈ(6) ಎಂದು ಗುರುತಿಸಲಾಗಿದೆ. ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಅವರು ಕಳೆದ ಎರಡು ದಿನಗಳ ಹಿಂದೆ ಮುಂಬೈಯಿಂದ ಕೊಣಾಜೆಯ ಪಾವೂರಿಗೆ ಸಂಬಂಧಿಕರ ಮನೆಗೆ ನೇಮಕ್ಕೆ ಬಂದಿದ್ದರೆನ್ನಲಾಗಿದೆ. ರವಿವಾರ ನಸುಕಿನ

ಮಂಗಳೂರು: ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾದ ತಂದೆ-ಮಗ Read More »

ಕರಾವಳಿ

ಬೈಂದೂರು: ಕೊಳವೆ ಬಾವಿ ಕೊರೆಯುತ್ತಿದ್ದ ವೇಳೆ ಭೂ ಕುಸಿತ: 15ಅಡಿ ಅಳದಲ್ಲಿ ಸಿಲುಕಿದ ವ್ಯಕ್ತಿ

ರಕ್ಷಣಾ ಕಾರ್ಯ ಬಿರುಸು ಬೈಂದೂರು, ಫೆ.16: ಕೊಳೆವೆ ಬಾವಿ ಕೊರೆಯುತ್ತಿದ್ದ ವೇಳೆ ಉಂಟಾದ ಭೂ ಕುಸಿತದಲ್ಲಿ ವ್ಯಕ್ತಿಯೋರ್ವ ಸಿಲುಕಿರುವ ಘಟನೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ರವಿವಾರ ನಡೆದಿದೆ. ಸ್ಥಳೀಯ ನಿವಾಸಿ ಸುಬ್ಬಾ ಖಾರ್ವಿಯ ಮಗ ರೋಹಿತ್ ಭೂ ಕುಸಿತದಲ್ಲಿ ಸಿಲುಕಿರುವ ವ್ಯಕ್ತಿ. ಕೊಳವೆಬಾವಿ ಕೊರೆಯುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಅದರ ಸುತ್ತ ಭಾರೀ ಆಳಕ್ಕೆ ಭೂ ಕುಸಿತ ಉಂಟಾಗಿದೆ. ಈ ಸಂದರ್ಭ ಸುಮಾರು 15 ಅಡಿಯಷ್ಟು ಮಣ್ಣು ಕುಸಿದಿದ್ದು, ಸ್ಥಳದಲ್ಲಿದ್ದ ರೋಹಿತ್ ಖಾರ್ವಿ ಅದರಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ

ಬೈಂದೂರು: ಕೊಳವೆ ಬಾವಿ ಕೊರೆಯುತ್ತಿದ್ದ ವೇಳೆ ಭೂ ಕುಸಿತ: 15ಅಡಿ ಅಳದಲ್ಲಿ ಸಿಲುಕಿದ ವ್ಯಕ್ತಿ Read More »

ಕರಾವಳಿ

ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯದ ಎನ್ ಎಸ್ ಯು ಐ ಉಸ್ತುವಾರಿಯಾಗಿ ಸಿ.ವಿ ಆದಿಲ್ ಅಲಿ ಆಯ್ಕೆ

(ನ್ಯೂಸ್ ಕಡಬ) newskadaba.com, ಫೆ.16. ದೆಹಲಿಯ ಎನ್ ಎಸ್ ಯು ಐ ಸಂದರ್ಶನದಲ್ಲಿ ದೇಶಾದ್ಯಂತ ಆಯ್ದ 2500 ವಿದ್ಯಾರ್ಥಿ ನಾಯಕರಲ್ಲಿ 200 ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯಕ್ಕೆ ಎನ್ ಎಸ್ ಯು ಐ ನ ಉಸ್ತುವಾರಿಯನ್ನಾಗಿ ಸಿ.ವಿ ಆದಿಲ್ ಅಲಿ ಇವರನ್ನು ರಾಷ್ಟೀಯ ಎನ್ ಎಸ್ ಯು ಐ ಅಧ್ಯಕ್ಷ ನೀರಜ್ ಕುಂದನ್ ಆಯ್ಕೆ ಮಾಡಿರುತ್ತಾರೆ. ಇವರು ಕಲ್ಲಿಕೋಟೆ ಸಿ.ವಿ. ರಾಫಿ ಹಾಗೂ ಅರಂತೋಡಿನ ರಾಜ್ಯ ನಾಯಕರಾದ ಟಿ.ಎಮ್. ಶಹೀದ್

ಬೆಂಗಳೂರಿನಲ್ಲಿರುವ ನ್ಯಾಶನಲ್ ಕಾನೂನು ವಿಶ್ವವಿದ್ಯಾಲಯದ ಎನ್ ಎಸ್ ಯು ಐ ಉಸ್ತುವಾರಿಯಾಗಿ ಸಿ.ವಿ ಆದಿಲ್ ಅಲಿ ಆಯ್ಕೆ Read More »

ಕರಾವಳಿ, ಕರ್ನಾಟಕ

ಫೆ.19 ಮತ್ತು 20ರಂದು ಅರಂತೋಡಿನಲ್ಲಿ ದ್ಸಿಕ್ರ್ ಸ್ವಲಾತ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಫೆ. 16. ಸುಳ್ಯ. ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಪ್ರತೀ ತಿಂಗಳಿಗೊಮ್ಮೆ ಶೇಕ್ ಮುಹಿಯ್ಯದ್ದೀನ್ ಜಿಸ್ತಿ ಅಜೀರ್ ಖ್ವಾಜಾರವರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ದ್ಸಿಕ್ರ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಹಾಗೂ ಏಕದಿನ ಮತಪ್ರಭಾಷಣ ಕಾರ್ಯಕ್ರಮವು ಫೆಬ್ರವರಿ 19 ಮತ್ತು 20 ರಂದು ಅರಂತೋಡು ಮಸೀದಿ ವಠಾರದಲ್ಲಿ ನಡೆಯಲಿದೆ. ಫೆ.19 ರಂದು ರಾತ್ರಿ 7 ಗಂಟೆಗೆ ಕಲ್ಲೆಗ ಜುಮ್ಮಾಮಸೀದಿ ಖತೀಬರಾದ ಬಹು ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ಜಲಾಲಿಯವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಫೆ.20

ಫೆ.19 ಮತ್ತು 20ರಂದು ಅರಂತೋಡಿನಲ್ಲಿ ದ್ಸಿಕ್ರ್ ಸ್ವಲಾತ್ ಕಾರ್ಯಕ್ರಮ Read More »

ಕರಾವಳಿ

ನೆಲ್ಯಾಡಿ: ಮದುವೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಪಲ್ಟಿ ➤ ನಾಲ್ವರು ಗಂಭೀರ, ಹತ್ತಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ‌.16. ಚಾಲಕನ ನಿಯಂತ್ರಣ ತಪ್ಪಿದ ಟೂರಿಸ್ಟ್ ಟೆಂಪೋವೊಂದು ಪಲ್ಟಿಯಾದ ಪರಿಣಾಮ 20 ಮಂದಿ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ‌. ಪುತ್ತೂರಿನಲ್ಲಿ ನಡೆಯಲಿದ್ದ ಮದುವೆಗೆಂದು ಸಕಲೇಶಪುರದಿಂದ ಹೊರಟಿದ್ದ ಮಿನಿಬಸ್ ಅಡ್ಡಹೊಳೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಿನಿಬಸ್ ನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ

ನೆಲ್ಯಾಡಿ: ಮದುವೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಪಲ್ಟಿ ➤ ನಾಲ್ವರು ಗಂಭೀರ, ಹತ್ತಕ್ಕೂ ಅಧಿಕ ಮಂದಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಿಳಿನೆಲೆ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ➤ ರಮೇಶ್ ವಾಲ್ತಾಜೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ವೆಂಕಟ್ ವಳಲಂಬೆ

(ನ್ಯೂಸ್ ಕಡಬ) newskadaba.com ಕಡಬ, ಫೆ.14. ಬಿಳಿನೆಲೆ ಸಿ.ಎ. ಬ್ಯಾಂಕ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಸಹಕಾರ ಭಾರತಿಯ ತೀರ್ಮಾನದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಮೇಶ್ ವಾಲ್ತಾಜೆ ಮತ್ತು ಅವರ ಜೊತೆ ಸ್ಪರ್ಧಿಸುತ್ತಿರುವವರನ್ನು ಬಿಜೆಪಿಯ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ರಮೇಶ್ ವಾಲ್ತಾಜೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಳಿನೆಲೆ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ➤ ರಮೇಶ್ ವಾಲ್ತಾಜೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ವೆಂಕಟ್ ವಳಲಂಬೆ Read More »

ಕರಾವಳಿ
Scroll to Top