ಕಡಬ: ತಿಂಗಳುಗಳ ಬಳಿಕ ಮನೆಗೆ ಹಿಂತಿರುಗಿದ ಯುವಕ ➤ ನಾಪತ್ತೆ ಪ್ರಕರಣ ಸುಖಾಂತ್ಯ



(ನ್ಯೂಸ್ ಕಡಬ) newskadaba.com ಕಡಬ, ಡಿ.06. ಕಳೆದ ಮಾರ್ಚ್‌ನಲ್ಲಿ ಕಡಬದಿಂದ ನಾಪತ್ತೆಯಾಗಿದ್ದ ಯುವಕನೋರ್ವ ಮನೆಗೆ ಹಿಂತಿರುಗಿದ್ದು, ಈ ಬಗ್ಗೆ ಕಡಬ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವು ಸುಖಾಂತ್ಯಗೊಂಡಿದೆ.







ಕಡಬದ ತಾಲೂಕು ತಿಮರಡ್ಡ ನಿವಾಸಿ ಹಸೈನಾರ್ ಎಂಬವರ ಪುತ್ರ ಅನ್ಸಾರ್ ಎಂಬಾತ ಕಳೆದ ಮಾರ್ಚ್ 21 ರಂದು ನಾಪತ್ತೆಯಾಗಿದ್ದರಿಂದ ಹುಡುಕಾಡಿದ ಮನೆಯವರು ಕಡಬ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾಗಿದ್ದ ಈತ ಬೆಂಗಳೂರಿನಲ್ಲಿ ಕೆಲಸಕ್ಕೆ‌ ಸೇರಿದ್ದು, ಡಿಸೆಂಬರ್ 02 ರಂದು ಮನೆಗೆ ಹಿಂತಿರುಗಿದ್ದಾನೆ ಎನ್ನಲಾಗಿದೆ. ಶುಕ್ರವಾರದಂದು ಕಡಬ ಠಾಣೆಗೆ ಹಾಜರಾಗಿ ಹಿಂತಿರುವುದಾಗಿ ಹೇಳಿಕೆ ನೀಡಿದ್ದು, ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದೆ.






error: Content is protected !!
Scroll to Top