ಕರಾವಳಿ

ಮಹಿಳೆಯರ ರಕ್ಷಣೆಗೆ ಕಾನೂನು ಉಪಯೋಗವಾಗಲಿ ➤ ಡಾ. ಸೆಲ್ವಮಣಿ ಆರ್

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಮಹಿಳೆಯರು ಎಲ್ಲಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ, ಅವರ ಆತ್ಮರಕ್ಷಣೆ ಮತ್ತು ಸ್ವಾಭಿಮಾನದ ರಕ್ಷಣೆಗೆ ಕಾನೂನಿನ ಉಪಯೋಗ ಆಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸ್ವೆಲಮಣಿ ಆರ್ ಹೇಳಿದರು. ಸೋಮವಾರ ದ.ಕ. ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಾಂತ್ವನ ಯೋಜನೆ ಮತ್ತು ವರದಕ್ಷಿಣೆ ನಿಷೇಧ ಸಭೆಯಲ್ಲಿ ಮಾತನಾಡಿದರು. ಸಾಂತ್ವನ ಯೋಜನೆಯಡಿಯಲ್ಲಿ ನೊಂದವರಿಗೆ ಕಾನೂನು ವ್ಯಾಪ್ತಿಯಲ್ಲಿ ಸಹಾಯ ನೀಡಲಾಗುವುದು. ತಾಲೂಕಿನ ಆಯಾ ಭಾಗಗಳಲ್ಲಿ ಸಾಂತ್ವನ ಸಹಾಯ ಕೇಂದ್ರದಿಂದ […]

ಮಹಿಳೆಯರ ರಕ್ಷಣೆಗೆ ಕಾನೂನು ಉಪಯೋಗವಾಗಲಿ ➤ ಡಾ. ಸೆಲ್ವಮಣಿ ಆರ್ Read More »

ಕರಾವಳಿ, ಕರ್ನಾಟಕ

ಅಂಗನವಾಡಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ- ಆರ್. ಸೆಲ್ವಮಣಿ

  (ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಪ್ರಗತಿಯಲ್ಲಿರುವ ಅಂಗನವಾಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಪ್ರತೀ ಅಂಗನವಾಡಿಗಳ ಕೆಲಸ ಕಾರ್ಯಗಳು ಫೆಬ್ರವರಿ 29 ರೊಳಗೆ ಪೂರ್ಣಗೊಳಿಸಬೇಕು, ಶಿಶು ಅಭಿವೃದ್ಧಿ ಇಲಾಖಾ ಸಿಬ್ಬಂದಿಗಳು ತಕ್ಷಣ ಪ್ರಗತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿ ಅಭಿವೃದ್ಧಿ ಕುರಿತು ವರದಿ ನೀಡಬೇಕು ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ಆರ್. ಸೆಲ್ವಮಣಿ ಸೂಚಿಸಿದರು. ಸೋಮವಾರ ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಮೀಕ್ಷಾ

ಅಂಗನವಾಡಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ- ಆರ್. ಸೆಲ್ವಮಣಿ Read More »

ಕರಾವಳಿ, ಕರ್ನಾಟಕ

ಕಂಬಳದ ‘ಹೀರೋ’ ಶ್ರೀನಿವಾಸ ಗೌಡರನ್ನು ಸನ್ಮಾನಿಸಿದ ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಫೆ.18. ಕೆರೆ ಕಂಬಳ ಓಟದಲ್ಲಿ ದಾಖಲೆ ನಿರ್ಮಿಸಿದ ಮಂಗಳೂರು ತಾಲ್ಲೂಕು ಅಶ್ವತ್ಥಪುರದ ಶ್ರೀನಿವಾಸ ಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಂಬಳದ ‘ಹೀರೋ’ ಶ್ರೀನಿವಾಸ ಗೌಡರನ್ನು ಸನ್ಮಾನಿಸಿದ ಯಡಿಯೂರಪ್ಪ Read More »

ಕರಾವಳಿ, ಕರ್ನಾಟಕ

ಶ್ರೀನಿವಾಸ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com,  ಸುರತ್ಕಲ್. ಫೆ.18. ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳು ಮತ್ತು ವಿಜಯಲಕ್ಷ್ಮಿ ಶಿಕ್ಷಣ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭವು ಮುಕ್ಕದ ಶ್ರೀನಿವಾಸ ನಗರದಲ್ಲಿರುವ ಶ್ರೀನಿವಾಸ ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಾಲೇಜು ದಿನಗಳಲ್ಲಿ ನಾನು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ನನಗೆ ತೃತೀಯ ಸ್ಥಾನ ಗಳಿಸಿತ್ತು. ಈ ತೃತೀಯ ಸ್ಥಾನವು ನನಗಿಂದು ಈ ಸ್ಥಾನಕ್ಕೆ ಬರಲು

ಶ್ರೀನಿವಾಸ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭ Read More »

ಕರಾವಳಿ

ಅಕ್ರಮವಾಗಿ ಇರಿಸಿದ್ದ ಸ್ಫೋಟಕ ತಿಂದ ಹಸು ➤ ಸ್ಫೋಟಕ ಸಿಡಿದು ಹಸು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಅಕ್ರಮವಾಗಿ ಇರಿಸಿದ್ದ ಸ್ಫೋಟಕವನ್ನು ತಿಂದ ಹಸುವೊಂದು ಸ್ಫೋಟಕ ಸಿಡಿದ ಪರಿಣಾಮ ದವಡೆ ಕಿತ್ತುಹೋಗಿ ಗಂಭೀರ ಗಾಯಗೊಂಡ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ದೇರಾಜೆಯ ಸಂಪಡ್ಕ ನಿವಾಸಿ ಬಾಲಚಂದ್ರ ಎಂಬವರಿಗೆ ಸೇರಿದ ಹಸು ಯಾರೋ ಕಿಡಿಗೇಡಿಗಳು ಇರಿಸಿದ್ದ ಸ್ಪೋಟಕವನ್ನು ತಿಂದಿದೆ. ಹಸುವಿನ ದವಡೆ ಸೀಳಿ ಬಂದಿದ್ದು, ಗಂಭೀರ ಗಾಯಗೊಂಡಿದೆ‌. ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಅಕ್ರಮವಾಗಿ ಇರಿಸಿದ್ದ ಸ್ಫೋಟಕ ತಿಂದ ಹಸು ➤ ಸ್ಫೋಟಕ ಸಿಡಿದು ಹಸು ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಟೊ, ಇಬ್ಬರು ಮಹಿಳೆಯರು ಮೃತ್ಯು

ಬೆಳ್ತಂಗಡಿ, ಫೆ.17: ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಇಂದಬೆಟ್ಟು ಗ್ರಾಮದ ಪಡಂಬಿಲ ಎಂಬಲ್ಲಿ ಸೋಮವಾರ ಸಂಭವಿಸಿದೆ. ಮೃತರನ್ನು ನಡ ಗ್ರಾಮದ ಜೊಲ್ಲೊಟ್ಟು ನಿವಾಸಿ ಹಾಜಿರಾಬಿ (55) ಹಾಗೂ ನಡಬೈಲು ದರ್ಖಾಸು ನಿವಾಸಿ ಸಾಜಿದಾಬಿ ಎಂದು ಗುರುತಿಸಲಾಗಿದೆ. ರಿಕ್ಷಾದಲ್ಲಿದ್ದ ಮಮ್ತಾಝ್ (30) ಹಾಗೂ ಶೈನಾಝ್ (29) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿ ಎಂದು ತಿಳಿದು ಬಂದಿದೆ. ರಿಕ್ಷಾ ಚಾಲಕ ನವೀದ್ ಎಂಬವರೂ ಗಾಯಗೊಂಡಿದ್ದು, ಬೆಳ್ತಂಗಡಿ

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಟೊ, ಇಬ್ಬರು ಮಹಿಳೆಯರು ಮೃತ್ಯು Read More »

ಕರಾವಳಿ

ಉಪ್ಪಳ: ಸರಣಿ ಅಪಘಾತ; ಟಿಪ್ಪರ್‌ನಲ್ಲಿ ಸಿಲುಕಿದ ಚಾಲಕನ ರಕ್ಷಣೆ

ಕಾಸರಗೋಡು, ಫೆ.17: ಮೂರು ವಾಹನಗಳು ಢಿಕ್ಕಿಯಾಗಿದ್ದು, ಟಿಪ್ಪರ್ ಚಾಲಕ ವಾಹನದ ಒಳಗೆ ಸಿಲುಕಿದ ಘಟನೆ ಉಪ್ಪಳ ಸರಕಾರಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಟಿಪ್ಪರ್ ಚಾಲಕನನ್ನು ರಕ್ಷಣೆ ಮಾಡಿದ್ದು, ಗಾಯಗೊಂಡ ಚಾಲಕನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ಅರ್ಧ ಗಂಟೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಉಪ್ಪಳ ಶಾಲಾ ಬಳಿ ಪ್ರಯಾಣಿಕರನ್ನು ಇಳಿಸಲೆಂದು ನಿಂತಿದ್ದ ಸಂದರ್ಭದಲ್ಲಿ ಉಪ್ಪಳ ಭಾಗದಿಂದ

ಉಪ್ಪಳ: ಸರಣಿ ಅಪಘಾತ; ಟಿಪ್ಪರ್‌ನಲ್ಲಿ ಸಿಲುಕಿದ ಚಾಲಕನ ರಕ್ಷಣೆ Read More »

ಕರಾವಳಿ

ಆತೂರು: ಹಫ್ವಾ ಕುಟುಂಬ ಸಮ್ಮಿಲನ-2020 ➤ ಸಂಘಟಿತ ಕುಟುಂಬ ಸಂಬಂಧದಿಂದ ಸಮುದಾಯ ಸಬಲೀಕರಣ ಸಾಧ್ಯ-ಹೆಚ್. ಮಹಮ್ಮದ್ ಆಲಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ.17. ಕುಟುಂಬ ಸಂಬಂಧವನ್ನು ಹತ್ತಿರ ಮಾಡಿಕೊಂಡು ಆ ಮೂಲಕ ಸಂಘಟಿತರಾಗಿ ಪರಸ್ಪರ ಸುಖ ದುಃಖಗಳಲ್ಲಿ ಕೈಜೋಡಿಸಿಕೊಂಡು ಬದುಕಿದರೆ ಸಮುದಾಯದ ಸಬಲೀಕರಣ ಸಾಧ್ಯ ಎಂದು ಪುತ್ತೂರು ನಗರ ಸಭೆಯ ಮಾಜಿ ಸದಸ್ಯ ಹೆಚ್. ಮಹಮ್ಮದ್ ಆಲಿ ಹೇಳಿದರು. ಅವರು ಫೆ. 16ರಂದು ಆತೂರುನಲ್ಲಿ ಹಫ್ವಾ ಕುಟುಂಬ ಸಮ್ಮಿಲನ-2020 ಸಮಾರಂಭದಲ್ಲಿ ಮಾತನಾಡಿ ಸಮುದಾಯದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಈ ಮೂಲಕ ಸಮುದಾಯದಲ್ಲಿ ಕಾಡುವ ಇನ್ನಷ್ಟು ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಆತೂರು

ಆತೂರು: ಹಫ್ವಾ ಕುಟುಂಬ ಸಮ್ಮಿಲನ-2020 ➤ ಸಂಘಟಿತ ಕುಟುಂಬ ಸಂಬಂಧದಿಂದ ಸಮುದಾಯ ಸಬಲೀಕರಣ ಸಾಧ್ಯ-ಹೆಚ್. ಮಹಮ್ಮದ್ ಆಲಿ Read More »

ಕರಾವಳಿ

ಕಾಜೂರು ಉರೂಸ್ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com,  ಬೆಳ್ತಂಗಡಿ. ಫೆ.17. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಆಶಾ ಕೇಂದ್ರವಾದ ಕಾಜೂರು ದರ್ಗಾ ಶರೀಫ್ ನ  ಈ ವರ್ಷದ ಐತಿಹಾಸಿಕ ಉರೂಸ್ ಸಮಾರಂಭದಲ್ಲಿ ಸಾವಿರಾರು ಮಂದಿ ಸರ್ವ ಧರ್ಮೀಯರು ಪಾಲ್ಗೊಂಡಿದ್ದರು. ಪುಣ್ಯ ಪುರುಷರು ಸಮಾಧಿಯಾದ ದರ್ಗಾಕ್ಕೆ ಭೇಟಿ ನೀಡಿದ ಸರ್ವ ಮುಸ್ಲಿಂ ಬಾಂಧವರು ಕುರಾನ್ ಪಠಿಸಿ ತಮ್ಮ ಇಷ್ಟಾರ್ಥ ನೆರವೇರಲು ಹರಕೆ ರೂಪವಾಗಿ ಮಲ್ಲಿಗೆ ಹೂ ಹಾಗೂ ಚಾದರವನ್ನು ಅರ್ಪಿಸಿದರು. ಉರೂಸ್ ಪ್ರಯುಕ್ತ ಫೆ.7ರಿಂದ ಆರಂಭಗೊಂಡ ಸಾಮೂಹಿಕ ಸಂಭ್ರಮ ಫೆ.16ರವರೆಗೆ

ಕಾಜೂರು ಉರೂಸ್ ಸಮಾರೋಪ ಸಮಾರಂಭ Read More »

ಕರಾವಳಿ

ಮಂಗಳೂರು: ಡೊಂಗರಕೇರಿ ಶ್ರಿ ವೆಂಕಟರಮಣ ದೇವಸ್ಥಾನದಲ್ಲಿ 7 ದಿನಗಳ ಕಾಲ ಶ್ರೀಮದ್ ಬಾಗವತ ಸಪ್ತಾಹ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.17. ನಗರದ ಡೊಂಗರಕೇರಿ ಶ್ರಿ ವೆಂಕಟರಮಣ ದೇವಸ್ಥಾನದಲ್ಲಿ 7 ದಿನಗಳ ಕಾಲ ನಡೆಯಲಿರುವ ಶ್ರೀಮದ್ ಬಾಗವತ ಸಪ್ತಾಹವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಈ ಸಂಧರ್ಭ ಶ್ರೀಮದ್ ಬಾಗವತ್ ಪ್ರವಚನಕಾರ ವಿದ್ವಾನ್ ಡಾ| ಉದಯಕುಮಾರ್ ಸರಳತ್ತಾಯ, ವೇದಮೂರ್ತಿ ಜಯರಾಂಭಟ್ ಚಂಚಲ್ಗಡ್, ಗೋಪಿಚಾಂಧವ ಶೇಟ್, ವಿನಾಯಕ್ ಶೇಟ್, ದಯಾನಂದ್. ಕೆ. ಶೇಟ್, ಮ್ಯಾನೇಜರ್ ಹರಿಂದ್ರನಾಥ್, ವೆಂಕಟಕೃಷ್ಣ ಶೇಟ್ ಕುಟುಂಬ, ರೇಖಾ ತೋಲೆದಾರ್, ವೈಶ್ಯ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀನಿವಾಸ್ ಪುಂಡಲೀಕ ಶೇಟ್ ಉಪಸ್ಥಿತರಿದ್ದರು. ಪ್ರಥಮ ದಿನದ

ಮಂಗಳೂರು: ಡೊಂಗರಕೇರಿ ಶ್ರಿ ವೆಂಕಟರಮಣ ದೇವಸ್ಥಾನದಲ್ಲಿ 7 ದಿನಗಳ ಕಾಲ ಶ್ರೀಮದ್ ಬಾಗವತ ಸಪ್ತಾಹ Read More »

ಕರಾವಳಿ
Scroll to Top