ಕರಾವಳಿ

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ. ಫೆ.21, ನದಿಯಲ್ಲಿ ಈಜಲು ಹೋದ ಯುವಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವಿನ ರಂಜಿತ್ ಎಂಬ ಯುವಕ ಸುಳ್ಯ ತಾಲೂಕಿನ ಕೊಡೆಂಕಿರಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದು, ಅಲ್ಲಿ ಮನೆಯ ಸಮೀಪದ ನದಿಗೆ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಿನ್ನಿಮುಲ್ಕಿ: ಖಾಸಗಿ ಬಸ್ ಢಿಕ್ಕಿ ಹೊಡೆದು ಸ್ಕೂಟಿ ಸವಾರೆ ಮೃತ್ಯು

ಉಡುಪಿ, ಫೆ.21: ಖಾಸಗಿ ಬಸ್ ಢಿಕ್ಕಿ ಹೊಡೆದು ಸ್ಕೂಟಿ ಸವಾರೆಯೊಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಕಿನ್ನಿಮುಲ್ಕಿ ಬಳಿ ನಡೆದಿದೆ. ಮೃತರನ್ನು ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಪೂಜಾರಿ ಪತ್ನಿ, ಬ್ಯೂಟಿ ಪಾರ್ಲರ್ ಮಾಲಕಿ ಅಂಬಾಲಪಾಡಿ ನಿವಾಸಿ ಮಮತ ಪೂಜಾರಿ(35) ಎಂದು ಗುರುತಿಸಲಾಗಿದೆ. ಇವರು ಕಿನ್ನಿಮುಲ್ಕಿ ಪೆಟ್ರೊಲ್ ಪಂಪ್‌ನಿಂದ ತನ್ನ ಸ್ಕೂಟಿಗೆ ಇಂಧನ ತುಂಬಿಸಿ ಗೋವಿಂದ ಕಲ್ಯಾಣ ಮಂಟಪ ಕಡೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಎಕೆಎಂಎಸ್‌ನ

ಕಿನ್ನಿಮುಲ್ಕಿ: ಖಾಸಗಿ ಬಸ್ ಢಿಕ್ಕಿ ಹೊಡೆದು ಸ್ಕೂಟಿ ಸವಾರೆ ಮೃತ್ಯು Read More »

ಕರಾವಳಿ

ರಾಮ ಮಂದಿರ ನಿರ್ಮಾಣಕ್ಕೆ ಉಡುಪಿ ಪೇಜಾವರ ಮಠದದಿಂದ 5 ಲಕ್ಷ ರೂ. ದೇಣಿಗೆ

ಉಡುಪಿ, ಫೆ.20: ಇಲ್ಲಿನ ಪೇಜಾವರ ಮಠದಿಂದ ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಥಮ ಸಭೆಯಲ್ಲಿ 5 ಲಕ್ಷ ರೂ. ಆರಂಭಿಕ ದೇಣಿಗೆ ನೀಡಿದೆ. ದಿಲ್ಲಿಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಪಾಲ್ಗೊಂಡ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ಟ್ರಸ್ಟ್ ಸಭೆಯಲ್ಲಿ ರಾಮ ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಣೆ ಮಾಡಲಾಗಿದೆ. ಈ ಸಭೆಗೆ ಅವಕಾಶ ನೀಡಿದ ಸರ್ವೋಚ್ಛ ನ್ಯಾಯಾಲಯಕ್ಕೆ, ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳು. ಪೇಜಾವರ ಮಠದ ವತಿಯಿಂದ

ರಾಮ ಮಂದಿರ ನಿರ್ಮಾಣಕ್ಕೆ ಉಡುಪಿ ಪೇಜಾವರ ಮಠದದಿಂದ 5 ಲಕ್ಷ ರೂ. ದೇಣಿಗೆ Read More »

ಕರಾವಳಿ

ನಾಳೆ (ಫೆ.20) ಬೇಲ್ಪಾಡಿ ದರ್ಗಾ ಶರೀಫಿನಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ

(ನ್ಯೂಸ್ ಕಡಬ) newskadaba.com ಕಡಬ. ಫೆ.19, ಇತಿಹಾಸ ಪ್ರಸಿದ್ಧವಾದ ಕುಂತೂರು ಬೇಲ್ಪಾಡಿ ಮಖಾಂ ಶರೀಫಿನಲ್ಲಿ ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮವು ಫೆ.20ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಯ್ಯದ್ ಅಬ್ದುಲ್ ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ರವರು ನೇತೃತ್ವ ನೀಡಲಿದ್ದು, ಸ್ಥಳೀಯ ಮಸೀದಿ ಖತೀಬರಾದ ಕೆ.ವಿ ಮಜೀದ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ನಾಳೆ (ಫೆ.20) ಬೇಲ್ಪಾಡಿ ದರ್ಗಾ ಶರೀಫಿನಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ Read More »

ಕರಾವಳಿ

ಬಂಟ್ವಾಳ: ರೈಲು ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟ್ವಾಳ, ಫೆ.18: ಇಲ್ಲಿನ ರೈಲು ಹಳಿಯ ಫುಟ್‌ಪಾತ್‌ನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆಯಾಗಿದ್ದು, ಮೃತದೇಹವನ್ನು ರೈಲ್ವೆ ಪೊಲೀಸರು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ. ಮೃತರನ್ನು ಬಿಸಿರೋಡಿನ ಬಿ.ಮೂಡ ಗ್ರಾಮದ ಅಲೆತ್ತೂರು ನಿವಾಸಿ ಮೋಹನ್ ಶೆಟ್ಟಿ (37) ಎಂದು ಗುರುತಿಸಲಾಗಿದೆ. ಬಿ.ಸಿ.ರೋಡಿನ ರೈಲ್ವೆ ಮೇಲ್ಸೇತಯವೆಯ ಅಡಿ ಭಾಗದ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುವ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದರೆಯೇ ಎಂಬುದು ತನಿಖೆಯ ಬಳಿಕ ತಿಳಿಯಬೇಕಾಗಿದೆ. ಸುಮಾರು 7:30 ರ ವೇಳೆ ಬಿಸಿರೋಡಿನ ರೈಲ್ವೆ ಮೇಲ್ಸೇತುವೆಯ

ಬಂಟ್ವಾಳ: ರೈಲು ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ

ದನದ ಹಟ್ಟಿಯ ಗೋಡೆ ಕುಸಿದು ಬಿದ್ದು ವ್ಯಕ್ತಿ ದುರ್ಮರಣ

(ನ್ಯೂಸ್ ಕಡಬ) newskadaba.com, ವೇಣೂರು, ಫೆ.18. ದನದ ಹಟ್ಟಿಯ ಗೋಡೆಯು ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸೋಮವಾರದಂದು ಬೆಳ್ತಂಗಡಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಬಡಕೋಡಿ ಗ್ರಾಮದ ಕಿಂರ್ಬಿ ನಿವಾಸಿ ರುಕ್ಮಯ್ಯ ಮೂಲ್ಯ ಎಂದು ಗುರುತಿಸಲಾಗಿದೆ. ಅವರು ತನ್ನ ಮನೆಯ ಹಿಂಬದಿಯಲ್ಲಿರುವ ಹಟ್ಟಿಯಿಂದ ದನವನ್ನು ಹೊರಗೆ ತರುತ್ತಿರುವಾಗ ಹಳೆಯದಾದ ಹಟ್ಟಿಯ ಗೋಡೆಯು ಆಕಸ್ಮಿಕವಾಗಿ ಕುಸಿದು ಮೈಮೇಲೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.

ದನದ ಹಟ್ಟಿಯ ಗೋಡೆ ಕುಸಿದು ಬಿದ್ದು ವ್ಯಕ್ತಿ ದುರ್ಮರಣ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೂಡಬಿದ್ರೆ : ಪೊಲೀಸ್ ಹಳೇ ಕ್ವಾಟ್ರಸ್ ವಿಲೇವಾರಿ -ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಮೂಡಬಿದ್ರೆ ಪೊಲೀಸ್ ಠಾಣೆಯ ಬ್ಲಾಕ್-1 ಮತ್ತು ಬ್ಲಾಕ್-2 ರಲ್ಲಿರುವ ಹಳೆಯ ಒಟ್ಟು 13 ವಸತಿ ಗೃಹಗಳನ್ನು ನೆಲಸಮಗೊಳಿಸಿ ಅವುಗಳಲ್ಲಿನ ಸಾಮಾಗ್ರಿಗಳನ್ನು ಹೇಗಿವೆಯೋ ಅದೇ ಸ್ಥಿತಿಯಲ್ಲಿ ಬಹಿರಂಗ ಹರಾಜು ಮುಖಾಂತರ ವಿಲೇವಾರಿ ಮಾಡಲಾಗುತ್ತದೆ. ಆಸಕ್ತಿ ಉಳ್ಳವರು ಸದರಿ ಟೆಂಡರ್/ ಬಹಿರಂಗ ಹರಾಜಿನಲ್ಲಿ ನಿಬಂಧನೆಗಳನ್ವಯ ಭಾಗವಹಿಸಬಹುದು. ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಶಿಥಿಲಾವಸ್ಥೆಯಲ್ಲಿರುವ 13 ಪೊಲೀಸ್ ವಸತಿ ಗೃಹ ಕಟ್ಟಡವನ್ನು ಮುಂಚಿತವಾಗಿ ವೀಕ್ಷಿಸಬಹುದು, ಯಶಸ್ವಿ ಬಿಡ್‍ದಾರರು ಕಟ್ಟಡ ತೆರವುಗೊಳಿಸುವ ಸಂಧರ್ಭದಲ್ಲಿ ಯಾವುದೇ ರೀತಿಯ ಅವಘಡಗಳು

ಮೂಡಬಿದ್ರೆ : ಪೊಲೀಸ್ ಹಳೇ ಕ್ವಾಟ್ರಸ್ ವಿಲೇವಾರಿ -ಬಹಿರಂಗ ಹರಾಜು Read More »

ಕರಾವಳಿ, ಕರ್ನಾಟಕ

ನಾಳೆಯಿಂದ ರಸ್ತೆ ಸಂಚಾರ ಗಣತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. 2020ನೇ ಸಾಲಿನಲ್ಲಿ ರಸ್ತೆ ಸಂಚಾರ ಗಣತಿಯು ಫೆಬ್ರವರಿ 19 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 26 ರ ಬೆಳಿಗ್ಗೆ 6 ಗಂಟೆಯವರೆಗೆ ಸತತವಾಗಿ 7 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿನ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ ಸ್ಥಳಗಳಲ್ಲಿ ನಡೆಯಲಿದೆ. ಗಣತಿ ಕಾರ್ಯ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಈ ಗಣತಿ ಕೇಂದ್ರಗಳಲ್ಲಿ ಒಂದು ನಿಮಿಷ ವಾಹನ ನಿಲ್ಲಿಸುವ ಮೂಲಕ

ನಾಳೆಯಿಂದ ರಸ್ತೆ ಸಂಚಾರ ಗಣತಿ Read More »

ಕರಾವಳಿ, ಕರ್ನಾಟಕ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಪ್ರವಾಸ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ಇವರ  ದ.ಕ ಜಿಲ್ಲಾ ಪ್ರವಾಸ ಇಂತಿವೆ. ಫೆಬ್ರವರಿ 25 ರಂದು ಮಧ್ಯಾಹ್ನ 12.30 ಗಂಟೆಗೆ ಮಂಗಳೂರಿಗೆ ಆಗಮಿಸಿ, 12.45 ಗಂಟೆಗೆ ಎನ್.ಐ.ಟಿ.ಕೆ ಸುರತ್ಕಲ್‍ನಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.30 ಗಂಟೆಗೆ ಹೆಲಿಕಾಪ್ಟರ್ ಮೂಲಕ ಕೇರಳಕ್ಕೆ ತೆರಳಲಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಪ್ರವಾಸ Read More »

ಕರಾವಳಿ, ಕರ್ನಾಟಕ

ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಪ್ರವಾಸ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಹೈಕೋರ್ಟ್ ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಇವರ ದ.ಕ ಜಿಲ್ಲಾ ಪ್ರವಾಸ ಕೈಗೊಂಡಿದ್ದು ವಿವರಗಳು ಇಂತಿವೆ. ಫೆಬ್ರವರಿ 21 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರಿಗೆ ಆಗಮಿಸಿ, 11.30 ಗಂಟೆಗೆ ಪುತ್ತೂರಿಗೆ ತೆರಳುವರು. ಮಧ್ಯಾಹ್ನ 2 ಗಂಟೆಗೆ ಆಲ್ ಇಂಡಿಯಾ ಕೋರ್ಟ್ ಸ್ಪರ್ಧೆ-2020 ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಕ್ರ್ಯೂಟ್ ಹೌಸ್‍ನಲ್ಲಿ ವಾಸ್ತವ್ಯ. ರಾತ್ರಿ 10 ಗಂಟೆಗೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ನಿರ್ಗಮಿಸುವರು.

ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಪ್ರವಾಸ Read More »

ಕರಾವಳಿ, ಕರ್ನಾಟಕ
Scroll to Top