ತೆಂಗಿನ ಮರ ಬಿದ್ದು ಎರಡು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com, ಕಡಬ, ಡಿ.6   ನೂಜಿಬಾಳ್ತಿಲ ಗ್ರಾಮದ ನೀರಾರಿ ಎಂಬಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿಗೆ ತೆಂಗಿನ ಮರವೊಂದು ಬುಡ ಸಮೇತ ಉರುಳಿ ಬಿದ್ದ ಎರಡು ಮನೆಗಳಿಗೆ ಹಾನಿಯಾಗಿದೆ.


ನೀರಾರಿ ಪೀರು ಸಾಹೇಬು ಅವರ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ ಮತ್ತು ಪಕ್ಕದ ದಾವೂದ್ ಸಾಹೇಬ್ ಅವರ ಮನೆಗೂ ಹಾನಿಯಾಗಿ ನಷ್ಟವುಂಟಾಗಿದೆ ಎಂದು ಮನೆ ಮಾಲಿಕರು ತಿಳಿಸಿದ್ದಾರೆ.

Scroll to Top