ಮಂಗಳೂರು: ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕುಳಾಯಿ ಆಯುಷ್ ಆರ್ ಕೆ. ನಾಯರ್ ಗೆ ಚಿನ್ನದ ಪದಕ

(ನ್ಯೂಸ್‌ ಕಡಬ) newskadaba.com, ಅ. 10 . ಪುಣೆಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಗೋಜುರಿಯೋ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕುಳಾಯಿಯ ಆಯುಷ್ ಆರ್.ಕೆ. ನಾಯರ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ…

12-13 ವಯೋಮಾನದ 50 ಕೆ.ಜಿ ದೇಹ ತೂಕದ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ.ಸುರತ್ಕಲ್‌ನ ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ. ಕುಳಾಯಿಯ ರಾಕೇಶ್ ಹಾಗೂ ಸಂಧ್ಯಾ ರಾಕೇಶ್ ದಂಪತಿಗಳ ಪುತ್ರ.

ಕುಳಾಯಿಯ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಮಂದಿರದಲ್ಲಿ ಕರಾಟೆ ಮುಖ್ಯ ಶಿಕ್ಷಕ ಶರತ್ ಕರಿಕಟ್ಟ ಹಾಗೂ ಸೆನ್ಸಾಯಿ ವಿಕಾಸ್ ಎಸ್ ಕುಮಾರ್ ಇವರಿಂದ ತರಬೇತಿ ಪಡೆದಿದ್ದಾರೆ.

Scroll to Top