ಕರಾವಳಿ

breaking news ಕಾರ್ಕಳ: ಭೀಕರ ಅಪಘಾತಕ್ಕೆ 9 ಮಂದಿ ಮೃತ್ಯು

20ಕ್ಕೂ ಅಧಿಕ ಮಂದಿಗೆ ಗಾಯ ಉಡುಪಿ, ಫೆ.15: ಚಲಿಸುತ್ತಿದ್ದ ಪ್ರವಾಸಿ ಬಸ್ಸೊಂದು ಬಂಡೆ ಢಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟು 20ಕ್ಕೂ ಅಧಿಕ ಮಂದಿಗೆ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಮಾಳ ಚೆಕ್‌ಪೋಸ್ಟ್ ಸಮೀಪದ ಅಬ್ಬಾಸ್‌ಕಟ್ಟೆ ಬಳಿ ನಡೆದಿದೆ. ಮೈಸೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆ ಹೊರಟ ಬಸ್ಸು ಮೈಸೂರಿನಿಂದ ಕುದುರೆ ಮುಖ ಮಾರ್ಗವಾಗಿ ಕಾರ್ಕಳ ಕಡೆ ಅಗಮಿಸುತ್ತಿದ್ದ ವೇಳೆ ಮಾಳ ಮುಳ್ಳೂರು ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದಾರೆಂದು ತಿಳಿದುಬಂದಿದೆ. […]

breaking news ಕಾರ್ಕಳ: ಭೀಕರ ಅಪಘಾತಕ್ಕೆ 9 ಮಂದಿ ಮೃತ್ಯು Read More »

ಕರಾವಳಿ

ಶ್ರೀನಿವಾಸ ವಿಶ್ವವಿದ್ಯಾಲಯ ರಾಜ್ಯಕ್ಕೆ ಮಾದರಿ ➤ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಸುರತ್ಕಲ್, ಫೆ. 14 : ರಾಜ್ಯ ಬಜೆಟ್‍ನಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಅಭಿವೃದ್ಧಿ ವಿಚಾರವಾಗಿ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ನಮ್ಮ ಮುಖ್ಯಮಂತ್ರಿ ಜೊತೆ ವಿಶೇಷವಾಗಿ ಚರ್ಚಿಸಲಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ನುಡಿದರು ಅವರು ಶುಕ್ರವಾರ ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳು ಮತ್ತು ವಿಜಯಲಕ್ಷ್ಮಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಗಳು ಮಾಡುವ ಅತ್ಯತ್ತಮ ಕೆಲಸಗಳನ್ನು

ಶ್ರೀನಿವಾಸ ವಿಶ್ವವಿದ್ಯಾಲಯ ರಾಜ್ಯಕ್ಕೆ ಮಾದರಿ ➤ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ Read More »

ಕರಾವಳಿ

ನಾಳೆ (ಫೆ.16) ಕುದ್ಲೂರಿನಲ್ಲಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಅನುಸ್ಮರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಫೆ.15. ಆತೂರು. ವಿಜ್ಞಾನ, ವಿನಯ, ಸೇವನೆ, ದ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಎಸ್ ಕೆ ಎಸ್ ಎಸ್ ಎಫ್ ಕುದ್ಲೂರು ಶಾಖೆ ಇದರ ಆಶ್ರಯದಲ್ಲಿ ಶಂಸುಲ್ ಉಲಮಾ ಹಾಗೂ ಇನ್ನಿತರ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ಮತ್ತು ಶಾಹ್ ಉಸ್ತಾದರ ಮೇಲೆ ತಹ್ಲೀಲ್ ಸಮರ್ಪಣೆಯು ನಾಳೆ ನಡೆಯಲಿದೆ. ನಾಳೆ ಅಸರ್ ನಮಾಜ್ ಬಳಿಕ ಶಂಸುಲ್ ಉಲಮಾ ಮೌಲಿದ್ ಮತ್ತು ಡಾl ಕೆ.ಎಂ ಶಾಹ್ ಉಸ್ತಾದರ ಮೇಲೆ ತಹ್ಲೀಲ್ ಸಮರ್ಪಣೆ ಹಾಗು ಮಗರಿಬ್ ನಮಾಝ್

ನಾಳೆ (ಫೆ.16) ಕುದ್ಲೂರಿನಲ್ಲಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಅನುಸ್ಮರಣಾ ಕಾರ್ಯಕ್ರಮ Read More »

ಕರಾವಳಿ

ಮಂಗಳೂರು: ಲಾರಿ ಹರಿದು ಮಲಗಿದ ವ್ಯಕ್ತಿ ಮೃತ್ಯು

ಮಂಗಳೂರು, ಫೆ.15: ನಗರದ ಜೆಪ್ಪು ಕುಡುಪಾಡಿ ಕಟ್ಟಿಗೆ ಡಿಪೋವೊಂದರ ಎದುರು ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಹುಬ್ಬಳ್ಳಿ ಮೂಲದ ಸುಧಾಕರ (55) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ನೀರುಮಾರ್ಗಕ್ಕೆ ಹೋಗಬೇಕಾಗಿದ್ದ ಲಾರಿ ಚಾಲಕ ದಾರಿ ತಪ್ಪಿ ಕುಡುಪಾಡಿ ಕಡೆಗೆ ಲಾರಿ ಚಲಾಯಿಸಿಕೊಂಡು ಬಂದಿದ್ದ. ಕುಡುಪಾಡಿ ಬಳಿ ಒಳ ಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದ್ದು ಲಾರಿ ಚಾಲಕ ಲಾರಿಯನ್ನು ಕಟ್ಟಿಗೆ ಡಿಪೋ ಎದುರಿದ್ದ ಖಾಲಿ ಜಾಗದಲ್ಲಿ ಚಲಾಯಿಸಿದ್ದಾನೆ.

ಮಂಗಳೂರು: ಲಾರಿ ಹರಿದು ಮಲಗಿದ ವ್ಯಕ್ತಿ ಮೃತ್ಯು Read More »

ಕರಾವಳಿ

ಕುಂದಾಪುರ: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು

ಕುಂದಾಪುರ, ಫೆ.14: ನಾಲ್ಕು ವಾಹನಗಳು ಏಕಮುಖ ಸಂಚಾರದಲ್ಲಿದ್ದಾಗ ಅಪಘಾತಕ್ಕೀಡಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೊವಾಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.           ಮೃತಪಟ್ಟ ಬೈಕ್ ಸವಾರನನ್ನು ಸಮೀಪದ ಹೊಸಾಡು ಗ್ರಾಮದ ಮುಲ್ಲಿಮನೆ ನಿವಾಸಿ ನಾರಾಯಣ ದೇವಾಡಿಗ ಎಂಬುವರ ಪುತ್ರ ಸುಕುಮಾರ ದೇವಾಡಿಗ(55) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಅಪಘಾತ ಸಂಭವಿಸಿದ್ದು, ಲಾರಿಯೊಂದು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿತ್ತು. ಲಾರಿಯ ಹಿಂದೆ

ಕುಂದಾಪುರ: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು Read More »

ಕರಾವಳಿ

ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಬಂದಿಳಿದ ದುಬೈ-ಮಂಗಳೂರು ವಿಮಾನ

ಮಂಗಳೂರು, ಫೆ.15: ಹವಾಮಾನ ವೈಪರೀತ್ಯದಿಂದಾಗಿ ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಮುಂಜಾನೆ ಬಂದಿಳಿಯಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ ಮಾರ್ಗ ಬದಲಿಸಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿರುವ ಬಗ್ಗೆ ವರದಿಯಾಗಿದೆ. ದಮ್ಮಾಮ್ ಮತ್ತು ದುಬೈ ನಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಮುಂಜಾವು 4:30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಆದರೆ 8:30 ಕ್ಕೆ ಬಂದಿದ್ದ ಮತ್ತೊಂದು ವಿಮಾನ ನೇರವಾಗಿ ಬೆಂಗಳೂರಿನಲ್ಲಿ ಇಳಿದಿದೆ. ಬೆಂಗಳೂರಿನಿಂದ ಬೆಳಗ್ಗೆ 8ಗಂಟೆಗೆ ಹೊರಟಿದ್ದ ಸ್ಪೈಸ್ ಜೆಟ್, ಇಂಡಿಗೋ ವಿಮಾನಗಳು ಮಂಗಳೂರಿನಲ್ಲಿ

ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಬಂದಿಳಿದ ದುಬೈ-ಮಂಗಳೂರು ವಿಮಾನ Read More »

ಕರಾವಳಿ

ಮಾರ್ಚ್ 3, 4 ರಂದು ನಿಂತಿಕಲ್ಲು ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ಆಧಾರ್ ಮೇಳ

(ನ್ಯೂಸ್ ಕಡಬ) newskadaba.com, ಬೆಳ್ಳಾರೆ. ಫೆ. 14. ಕೆ.ಎಸ್. ಗೌಡ ಸಮೂಹ ವಿದ್ಯಾಸಂಸ್ಥೆ ಗಳು (ರಿ) ಹಿರಿಯ ವಿದ್ಯಾರ್ಥಿ ಸಂಘ ಕೆ. ಎಸ್. ಗೌಡ ಪದವಿ ಪೂರ್ವ ಕಾಲೇಜು, ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಮಾರ್ಚ್ 3 ಹಾಗೂ 4ರಂದು ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರವು ನಡೆಯಲಿರುವುದು. ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವವರು ಮಾರ್ಚ್ 1 ನೇ ತಾರೀಖಿನಂದು ಹೆಸರು

ಮಾರ್ಚ್ 3, 4 ರಂದು ನಿಂತಿಕಲ್ಲು ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ಆಧಾರ್ ಮೇಳ Read More »

ಕರಾವಳಿ

ಲ್ಯಾಂಡಿಂಗ್ ವೇಳೆ ತಪ್ಪೆಸಗಿದ ಆರೋಪ: ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆ ಅಮಾನತು

ಮಂಗಳೂರು, ಫೆ.14: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತಪ್ಪು ಎಸಗಿದ್ದ ಇಬ್ಬರು ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆಯನ್ನು ನಾಲ್ಕೂವರೆ ತಿಂಗಳ ಅವಧಿಗೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ) ಪ್ರಧಾನ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 2019ರ ಅಕ್ಟೋಬರ್ 31 ರಂದು ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್ 737 ವಿಮಾನವು ಲ್ಯಾಂಡಿಂಗ್ ವೇಳೆ ಪೈಲಟ್ ಮಾಡಿದ ತಪ್ಪಿನಿಂದಾಗಿ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಎಡಕ್ಕೆ ಜಾರಿದ್ದ ಪರಿಣಾಮ ವಿಮಾನವು ರನ್‌ವೇ ಅಂಚಿನ ದೀಪಗಳಿಗೆ ಹಾನಿ ಮಾಡಿತ್ತು. ಈ ಲೋಪದ

ಲ್ಯಾಂಡಿಂಗ್ ವೇಳೆ ತಪ್ಪೆಸಗಿದ ಆರೋಪ: ಸ್ಪೈಸ್‌ಜೆಟ್ ಪೈಲಟ್‌ಗಳ ಪರವಾನಿಗೆ ಅಮಾನತು Read More »

ಕರಾವಳಿ

ನೂಜಿಬೈಲ್; ಗ್ರಾಮಾಭಿವೃದ್ಧಿ ಯೋಜನೆಯಿಂದ ಕಸದ ಬುಟ್ಟಿ ವಿತರಣೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ. 14. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನಕ್ಕೆ ಕಸ ಸಂಗ್ರಹಿಸುವ ಬುಟ್ಟಿಯನ್ನು ಗುರುವಾರ ವಿತರಿಸಲಾಯಿತು.   ನಮ್ಮ ಶ್ರದ್ಧಾ ಕೇಂದ್ರ ಸ್ವಚ್ಚವಾಗಿರಲಿ ಎಂದ ಧ್ಯೇಯದೊಂದಿಗೆ ಯೋಜನೆಯಿಂದ ಕೊಡಮಾಡಲಾದ ಹಸಿಕಸ ಹಾಗೂ ಒಣಕಸ ಪ್ರತ್ಯೇಕವಾಗಿ ಹಾಕುವ ಕಸದ ಬುಟ್ಟಿಯನ್ನು ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ ದೈವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅರ್ಚಕ ಕೃಷ್ಣ ಹೆಬ್ಬಾರ್, ಆಡಳಿತ ಮಂಡಳಿ ಅಧ್ಯಕ್ಷ

ನೂಜಿಬೈಲ್; ಗ್ರಾಮಾಭಿವೃದ್ಧಿ ಯೋಜನೆಯಿಂದ ಕಸದ ಬುಟ್ಟಿ ವಿತರಣೆ Read More »

ಕರಾವಳಿ

ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ; ಜಾತ್ರಾ ಸಭೆ

ಕಲ್ಲುಗುಡ್ಡೆ, ಫೆ.14: ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಜಾತ್ರಾ ಪೂರ್ವ ತಯಾರಿ ಬಗ್ಗೆ ಪೂರ್ವಭಾವಿ ಸಭೆ ದೈವಸ್ಥಾನದ ಸಭಾಂಗಣದಲ್ಲಿ ಗುರುವಾರ ನಡೆಯಿತು. ಎಪ್ರಿಲ್ 7ರಿಂದ 10ರ ವರೆಗೆ ನಡೆಯಲಿರುವ ವಾರ್ಷಿಕ ಜಾತ್ರೆ, ದೈವಗಳ ನೇಮ ಇವುಗಳ ಬಗ್ಗೆ ಆಡಳಿತ ಸಮಿತಿ ಅಧ್ಯಕ್ಷ ಮೃತ್ಯುಂಜಯ ಬೀಡೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಾ.6ರಂದು ದೈವಸ್ಥಾನದಲ್ಲಿ ಶ್ರಮದಾನ ಮಾಡುವುದೆಂದು ತೀರ್ಮಾನಿಸಲಾಯಿತು. ಸ್ವಚ್ಚತೆಗೆ ಎಲ್ಲರೂ ಆದ್ಯತೆ ನೀಡಲು ಎಲ್ಲರ ಸಹಕಾರ ಕೋರಲಾಯಿತು. ಉತ್ಸವ ಸಮಿತಿ

ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ; ಜಾತ್ರಾ ಸಭೆ Read More »

ಕರಾವಳಿ
Scroll to Top